ಸುದ್ದಿ-ಸಮಾಚಾರ

ಪಾರದರ್ಶಕತೆ ಇಲ್ಲ, ಮಾರಾಟ ಇಲ್ಲ: ಪುಸ್ತಕ ಮಾರಾಟಗಾರರ ಅಳಲು

ಬೆಂಗಳೂರು: ಕನ್ನಡ ಸಾಹಿತ್ಯ ಸಮ್ಮೇಳನಗಳ ವಿಶೇಷತೆ ಎಂದರೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ. ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಉಳಿದಿರುವುದೇ ಪುಸ್ತಕದ ಅಂಗಡಿಗಳಲ್ಲಿ ಎಂದು ಕೂಡ ಹೇಳಲಾಗುತ್ತದೆ. ರಾಜ್ಯಾದ್ಯಂತ್ಯ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು ಸಮಯ-ಹಣ ವ್ಯಯಿಸಿ ಇಲ್ಲಿಗೆ ಬಂದಿದ್ದರೂ ಹಲವಾರು ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳು ನಿರೀಕ್ಷೆಯಂತೆ ಬಿಕರಿಯಾಗುತ್ತಿಲ್ಲ.

ಸುಮಾರು ೫೦೦ ಪುಸ್ತಕ ಮಳಿಗೆಗಳಿದ್ದರೂ, ಎರಡು ಭಾಗಗಳಲ್ಲಿ ಪುಸ್ತಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮುಖ್ಯ ವೇದಿಕೆಯ ಎದುರಿಗೆ ಸ್ಥಾಪಿಸಲಾಗಿರುವ ಮಳಿಗೆಗಳಲ್ಲಿ ವ್ಯಾಪಾರ ಪರವಾಗಿಲ್ಲ ಎನ್ನುತ್ತಾರೆ ಮಳಿಗೆಗಳ ಮಾಲೀಕರು. ಆದರೆ ಹಿಂಭಾಗದಲ್ಲಿರುವ ಪುಸ್ತಕ ವ್ಯಾಪಾರಿಗಳ ಅಳಲು ಕೇಳುವವರು ಯಾರೂ ಇಲ್ಲ. ಮಳಿಗೆಗಳನ್ನು ಸರಿಯಾಗಿ ಹಂಚಲಾಗಿಲ್ಲ ಹಾಗೂ ಅವುಗಳ ನಿರ್ಮಾಣ ಕೂಡ ಎಲ್ಲರಿಗೂ ಸಮನಾಗಿ ವ್ಯಾಪಾರ ಆಗುವಂತಿಲ್ಲ ಎನ್ನುತ್ತಾರೆ.

ಪುಸ್ತಕ ಮಳಿಗೆಗಳ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ!
ಸಾಮಾನ್ಯವಾಗಿ ಪುಸ್ತಕ ಮಳಿಗೆಗಳನ್ನು ಹಂಚುವಾಗ ಲಾಟರಿ ಎತ್ತಲಾಗುತ್ತದೆ. ಆದರೆ ಈ ಬಾರಿ ಮಳಿಗೆಗಳ ನೊಂದಣಿ ಪ್ರಕಾರ ಮೊದಲು ಬಂದವರಿಗೆ ಆದ್ಯತೆ ನೀಡಿ ಮಳಿಗೆಗಳನ್ನು ಹಂಚಲಾಗಿದೆ ಎನ್ನುತ್ತಾರೆ ಪುಸ್ತಕ ಮಳಿಗೆಗಳನ್ನು ಉಸ್ತುವಾರಿ ವಹಿಸಿರುವ ಅಧಿಕಾರಿಗಳು. ಆದರೆ ಸ್ನೇಹ ಬುಕ್ ಹೌಸ್ ನ ಪ್ರಕಾಶಕ ಪರಶಿವಪ್ಪ ದಾಖಲೆ ಸಮೇತ ತಮಗಿಂತಲೂ ನಿಧಾನವಾಗಿ ನೊಂದಣಿ ಮಾಡಿಸಿದ ಹಲವರಿಗೆ ಮೊದಲಿನ ಮಳಿಗೆಗಳನ್ನು ಹಂಚಿರುವುದನ್ನು ದುಃಖದಿಂದ ಹೇಳಿಕೊಳ್ಳುತ್ತಾರೆ. ಇಂತಹ ನೂರಾರು ಮಳಿಗೆಗಳ ಮಾಲೀಕರ ಅಳಲನ್ನು ಕೇಳಲು ಯಾವ ಸಾಹಿತ್ಯ ಸಮ್ಮೇಳನದ ಅಧಿಕಾರಿಯೂ ಇಲ್ಲ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್