ಸುದ್ದಿ-ಸಮಾಚಾರ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

Vishwanath S

ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವಿಸ್ಮರಣೀಯಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳು ಶ್ರವಣಬೆಳಗೊಳದಲ್ಲಿ ಭರದಿಂದ ಸಾಗಿದೆ.

ಸಾಹಿತ್ಯ ಪರಿಷತ್ ಇತಿಹಾಸದಲ್ಲಿ ಕಾಣದಂತಹ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ವಿಂಧ್ಯ ಗಿರಿಯ ಆಗ್ನೇಯ ಭಾಗದಲ್ಲಿ 500 ಅಡಿ ಉದ್ದ 300 ಅಡಿ ಅಗಲ 28 ಅಡಿ ಎತ್ತರದ ಬೃಹತ್ ಪೆಂಡಾಲ್ ನಿರ್ಮಾಣಗೊಳುತ್ತಿದೆ. ಸಾಹಿತ್ಯ ಚಿಂತನ ನಡೆಸುವ ಸಲುವಾಗಿ 80 ಅಡಿ ಉದ್ದ 50 ಅಡಿ ಅಗಲ ಹಾಗೂ 20 ಅಡಿ ಎತ್ತರದ ಮುಖ್ಯ ವೇದಿಕೆ ಸಿದ್ಧವಾಗುತ್ತಿದೆ.

ಮುಖ್ಯ ವೇದಿಕೆ ಮುಂಭಾಗದಲ್ಲಿಯೇ ಏಕಕಾಲಕ್ಕೆ 50 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 500 ಪುಸ್ತಕ ಮಳಿಗೆಗಳನ್ನು ನಿರ್ಮಿಸಲು ಟೆಂಡರ್ ನೀಡಲಾಗಿದ್ದು, ಇನ್ನೂ 100 ಮಳಿಗೆ ನಿರ್ಮಿಸುವ ಚಿಂತನೆ ನಡೆದಿದೆ.

ಸಾಹಿತ್ಯ ಜಾತ್ರೆಗೆ ಬರುವವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ, ಬಸ್‌ಗಳ ಹೊರತಾಗಿ, ರೈಲಿನಲ್ಲಿ ದೂರದ ಊರುಗಳಿಂದ ಬರಲು ಅವಕಾಶ ಕಲ್ಪಿಸಬೇಕು.
- ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

SCROLL FOR NEXT