ವಿಜ್ಞಾನ-ತಂತ್ರಜ್ಞಾನ

ಕೈಯಲ್ಲಿ ಕಣ್ಣಾಗಿ ಫೋನ್

ಕಣ್ಣು ಕಾಣಿಸುವುದಿಲ್ಲ ಎಂದು ಮೊಬೈಲ್ ಬಳಕೆಯಿಂದ ದೂರವಾಗಬೇಕಿಲ್ಲ. ದೃಷ್ಟಿ ವಿಕಲಚೇತನರಿಗಾಗಿಯೇ ಮೊಬೈಲ್...

ಕಣ್ಣು ಕಾಣಿಸುವುದಿಲ್ಲ ಎಂದು ಮೊಬೈಲ್ ಬಳಕೆಯಿಂದ ದೂರವಾಗಬೇಕಿಲ್ಲ. ದೃಷ್ಟಿ ವಿಕಲಚೇತನರಿಗಾಗಿಯೇ ಮೊಬೈಲ್ ಸಂಶೋಧನಾ ಜಗತ್ತು ಭರದಿಂದ ಕೆಲಸ ಆರಂಭಿಸಿದೆ.
ಇಂಗ್ಲೆಂಡ್ ಮೂಲದ ಓನ್‌ಫೋನ್ ಎಂಬ ಸಂಸ್ಥೆಯು ಸಂಪೂರ್ಣ ಬ್ರೈಲ್ ಆಧಾರಿತ ಫೋನ್‌ನ್ನು ಮಾರುಕಟ್ಟೆಗೆ ಬಿಟ್ಟಿದೆ. ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಸ್ವಲ್ಪ ತಡವಾಗಬಹುದು ಎಂದು ಸಂಸ್ಥೆ ಹೇಳಿದೆ.
ಅಂಗವೈಕಲ್ಯ ಎನ್ನುವುದನ್ನು ಯಾರೂ ಕೇಳಿಕೊಂಡು ಬರುವುದಿಲ್ಲ. ಆದರೆ ಕೆಲ ದೋಷಗಳಿಂದ ಜೀವನಪೂರ್ತಿ ನರಳಬೇಕಾಗುವ ಪರಿಸ್ಥಿತಿಯಿರುತ್ತದೆ. ಕೆಲವರು ಇದನ್ನೇ ಸವಾಲಾಗಿ ಸ್ವೀಕರಿಸಿ ಅಂಗವೈಕಲ್ಯವೇ ನಾಚುವಂತೆ ಮಾಡುತ್ತಾರೆ. ಆದರೆ ಇಂತಹ ಕೋಟ್ಯಾಂತರ ಜನರು ಸಾಮಾನ್ಯ ಜಗತ್ತಿನ ಸಾಕಷ್ಟು ಅಂಶಗಳಿಂದ ದೂರವಾಗಿರುತ್ತಾರೆ. ಅದರಲ್ಲೂ ವಿಶೇಷವಾಗಿ ದೃಷ್ಟಿ ವಿಕಲಚೇತನರು ಈ ಬಣ್ಣ ಬಣ್ಣದ ಜಗತ್ತಿನ ಚೆಂದವನ್ನೇ ನೋಡಿರುವುದಿಲ್ಲ. ಈ ನಿಟ್ಟಿನಲ್ಲಿ ಗೂಗಲ್ ಸಂಸ್ಥೆಯು ಹೊಸ ಅನ್ವೇಷಣೆಗಳನ್ನು ಮಾಡುತ್ತಿದೆಯಾದರೂ ಒಬ್ಬ ದೃಷ್ಟಿ ವಿಕಲಚೇತನ ಬಳಸಬಹುದಾದ ವಿಶೇಷ ಮೊಬೈಲ್ ಮಾರುಕಟ್ಟೆಗೆ ಬರಲು ಇಷ್ಟು ಕಾಲ ಬೇಕಾಯಿತು.
ಕಳೆದ ಮೂರು ವರ್ಷದಿಂದ ಬ್ರೈಲ್ ಫೋನ್‌ಗಾಗಿ ಹಗಲಿರುಳು ಕೆಲಸ ಮಾಡಿರುವ ಓನ್‌ಫೋನ್ ಸಂಸ್ಥೆಯು ಫಸ್ಟ್‌ಫೋನ್ ಎಂಬ ಹೆಸರಿನ ಸಂಪೂರ್ಣ ಬ್ರೈಲ್ ಆಧಾರಿತ ಫೋನ್‌ನ್ನು ಇಂಗ್ಲೆಂಡ್ ಮಾರುಕಟ್ಟೆಗೆ ಬಿಟ್ಟಿದೆ. ಇಂಗ್ಲೆಂಡ್ ಮಾರುಕಟ್ಟೆಯಲ್ಲಿ ಸಿಕ್ಕರೆ ನಮಗೇಕೆ ಸುದ್ದಿ ಎಂದು ತಿಳಿಯಬೇಡಿ, ಇಂತಹದೊಂದು ಸಾಧ್ಯತೆಯು ಜಗತ್ತಿನ ಇತರ ಮಾರುಕಟ್ಟೆಗೆ ಸ್ಪೂರ್ತಿಯಾಗಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಬಹುದು. ಅಂದಹಾಗೆ ಭಾರತದಲ್ಲಿಯೂ ದೃಷ್ಟಿ ವಿಕಲಚೇತನರಿಗಾಗಿಯೇ ನವದೆಹಲಿಯ ಕ್ರಿಯೇಟ್ ಮತ್ತು ಪರ್ಸಿಸ್ಟಂಟ್ ಎಂಬ ಸಂಸ್ಥೆಯು ಸಿಂಪ್ಲೇಯಿ ಎಂಬ ಸ್ಮಾರ್ಟ್‌ಫೋನ್ ರೂಪಿಸುತ್ತಿದೆ.
ಇಂಗ್ಲೆಂಡ್‌ನ ಓನ್‌ಫೋನ್ ದೃಷ್ಟಿ ವಿಕಲಚೇತನರಿಗಾಗಿಯೇ ಫಸ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್‌ಗಳನ್ನು ಮೋಟೋ ಎಕ್ಸ್‌ನಂತೆಯೇ ಕಸ್ಟಮೈಜ್ ಮಾಡಬಹುದು. ಓನ್‌ಫೋನ್‌ನ ಮೊದಲ ಬಿಡುಗಡೆಯು ಮಕ್ಕಳಿಗೆ ಸೀಮಿತವಾದ ಫೋನಾಗಿದೆ. ಇದರಲ್ಲಿ ಕೀಪ್ಯಾಡ್ ನೀಡಲಾಗಿಲ್ಲ. ಬದಲಾಗಿ ಫೋನ್ ಪಡೆಯುವಾಗಲೇ ದಾಖಲಿಸಿರುವ ವ್ಯಕ್ತಿಗೆ ನೇರವಾಗಿ ಫೋನಾಯಿಸಬಹುದು. ಇದರಿಂದ ದೃಷ್ಟಿ ವಿಕಲಚೇತನ ಮಕ್ಕಳಿಗೆ ನೆರವಾಗುತ್ತದೆ. ಸಂಸ್ಥೆಯು ಹೇಳುವ ಪ್ರಕಾರ ಮಕ್ಕಳು ಸಾಮಾನ್ಯವಾಗಿ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹಾಗೂ ಶಿಕ್ಷಕರಿಗೆ ಕರೆ ಮಾಡಬಹುದು. ಇದನ್ನು ಹೊರತುಪಡಿಸಿ ಮತ್ಯಾರಿಗೂ ಕರೆ ಮಾಡುವ ಅಗತ್ಯಬರುವುದಿಲ್ಲ. ಮಕ್ಕಳಿಗೆ ಮೊಬೈಲ್ ಏಕೆ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವವಾಗಬಹುದು. ಆದರೆ ದೃಷ್ಟಿ ವಿಕಲಚೇತನ ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ಇಂತಹ ಮೊಬೈಲ್‌ನ ಅಗತ್ಯವಿದೆ.
ಮೊಬೈಲ್‌ನ್ನು ಆನ್‌ಲೈನ್‌ಲ್ಲಿ ಕಸ್ಟಮೈಜ್ ಮಾಡುವಾಗ ಮಕ್ಕಳು ಕಾಯಂ ಆಗಿ ಕರೆ ಮಾಡುವ 4 ಸಂಖ್ಯೆಗಳನ್ನು ಹೆಸರಿನೊಂದಿಗೆ ಬ್ರೈಲ್ ಲಿಪಿಯಲ್ಲಿ ದಾಖಲಿಸಿಕೊಳ್ಳಬಹುದು. ಇದರಿಂದ ಮಕ್ಕಳು ಸುಲಭವಾಗಿ ಕೇವಲ ಆ ಹೆಸರನ್ನು ಒತ್ತಿ ಕರೆಯನ್ನು ಮಾಡಬಹುದಾಗಿದೆ. ಇದೇ ಸಂಸ್ಥೆಯು ಮುಂದಿನ ಒಂದೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬಿಡುತ್ತಿರುವ ಫೋನ್‌ನಲ್ಲಿ ಸೊನ್ನೆಯಿಂದ 9ರವರೆಗಿನ ಸಂಖ್ಯೆ ಹಾಗೂ ಉಳಿದೆಲ್ಲ ಚಿಹ್ನೆಗಳು ಬ್ರೈಲ್ ರೂಪದಲ್ಲಿಯೇ ಇರುತ್ತವೆ. ಬ್ರೈಲ್ ಫೋನ್ ಮಟ್ಟಿಗೆ ಇನ್ನು ಅ,ಆ,ಇ,ಈ ಹಂತದಲ್ಲಿರುವ ಫೋನ್ ಎಂದೇ ಪರಿಗಣಿಸಬಹುದು. ಆದರೆ ದೃಷ್ಟಿ ವಿಕಲಚೇತನರ ಅವಶ್ಯಕತೆಗೆ ತಕ್ಕಂತೆ ಇದನ್ನು ರೂಪಿಸಲಾಗಿದೆ.

ಭಾರತೀಯರ ಯಶಸ್ಸು ಎಂದು?
ನವದೆಹಲಿಯ ಕ್ರಿಯೇಟ್ ಮತ್ತು ಪರ್ಸಿಸ್ಟಂಟ್ ಎಂಬ ಸಂಸ್ಥೆಯ ಸುಮೀತ್ ದಾಗರ್ ಎಂಬ ವ್ಯಕ್ತಿ ಈ ನಿಟ್ಟಿನಲ್ಲಿ ಕಳೆದ ವರ್ಷವೇ ಪ್ರಯತ್ನ ಆರಂಭಿಸಿದ್ದಾರೆ. ಕಾನ್ಸೆಪ್ಟ್ ಸ್ಮಾರ್ಟ್‌ಫೋನ್‌ನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಮೊಬೈಲ್ ವೈಬ್ರೇಷನ್ ಹಾಗೂ ಶೇಪ್-ಮೆಮೋರಿ ಅಲಾಯ್ ತಂತ್ರಜ್ಞಾನಗಳ ಮೂಲಕ ಸ್ಮಾರ್ಟ್‌ಫೋನ್ ತಯಾರಿಸುವುದಾಗಿ ಹೇಳಿದ್ದರು. ಅವರ ವೆಬ್‌ಸೈಟ್ ಹೇಳುವ ಪ್ರಕಾರ ಶೀಘ್ರದಲ್ಲಿಯೇ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ. ಇದರೊಂದಿಗೆ ದೃಷ್ಟಿ ವಿಕಲಚೇತನರಿಗೆ ನೆರವಾಗುವ ಗೊಂಚಲು ಅಪ್ಲಿಕೇಷನ್‌ಗಳು ಕೂಡ ಬಿಡುಗಡೆ ಮಾಡುತ್ತೇವೆ ಎನ್ನುವುದು ಅವರ ವಾದಲಾಗಿದೆ. ಇದರ ಬೆಲೆಯಿನ್ನೂ ತಿಳಿದುಬಂದಿಲ್ಲ. ಆದರೆ ಓನ್‌ಫೋನ್‌ನ ಪ್ರಾರಂಭಿಕ ಬೆಲೆ 6 ಸಾವಿರದಷ್ಟಿದೆ.
ಕ್ರಿಯೇಟ್ ಸಂಸ್ಥೆ ಹೇಳುವುದನ್ನು ನಂಬುವುದಾದರೆ ಇಮೇಜ್ ರೆಕಗ್ನಿಷನ್, ಲೈಟ್ ಮೀಟರ್, ಟೆಕ್ಸ್ಟ್ ರೀಡರ್, ಶೇರಿಂಗ್, ಫೋಟೋ ಟ್ಯಾಗಿಂಗ್, ಕಲರ್ ಐಡೆಂಟಿಫಿಕೇಷನ್, ಬ್ರೈಲಿ ಟೈಪಿಂಗ್, ಶಬ್ದಕೋಶ, ಕ್ಯಾಲ್ಕುಲೇಟರ್ ಸೇರಿದಂತೆ ಸಂಪೂರ್ಣ ಸ್ಮಾರ್ಟಿಯಾಗಿ ಈ ಪೋನ್ ಬರಲಿದೆ.

- ರಾಜೀವ ಹೆಗಡೆ
meet.hegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT