ಚೀನಾ ಮೂಲದ ಕ್ಸಿಯೋಮಿ ಮೊಬೈಲ್ ಸಂಸ್ಥೆ 
ವಿಜ್ಞಾನ-ತಂತ್ರಜ್ಞಾನ

1ಜಿಬಿ ರಾಮ್, ಹೆಚ್ ಡಿ ಡಿಸ್ ಪ್ಲೇ; ಬೆಲೆ ಕೇವಲ 4 ಸಾವಿರ ರು.

4ಜಿ ನೆಟವರ್ಕ್, 1ಜಿಬಿ ರ್ಯಾಮ್ ಮತ್ತು ಹೆಚ್ ಡಿ ಡಿಸ್ ಪ್ಲೇ ಇರುವ ಸ್ಮಾರ್ಟ್ ಫೋನ್ನ ಬೆಲೆ ಎಷ್ಟು ಗೊತ್ತೆ ಕೇವಲ 4 ಸಾವಿರ ರುಪಾಯಿ.

ನವದೆಹಲಿ: 4ಜಿ ನೆಟವರ್ಕ್, 1ಜಿಬಿ ರ್ಯಾಮ್ ಮತ್ತು ಹೆಚ್ ಡಿ ಡಿಸ್ ಪ್ಲೇ ಇರುವ ಸ್ಮಾರ್ಟ್ ಫೋನ್ನ ಬೆಲೆ ಎಷ್ಟು ಗೊತ್ತೆ ಕೇವಲ 4 ಸಾವಿರ ರುಪಾಯಿ.

ಕೊಂಚ ಕುತೂಹಲ ಕೆರಳಿಸಿದರೂ ಇದರಲ್ಲಿ ಅಚ್ಚರಿ ಏನಿಲ್ಲ. ಏಕೆಂದರೆ ಇದು ಚೀನಾ ಮೊಬೈಲ್. ಅಗ್ಗದ ಬೆಲೆಯ ಯಂತ್ರೋಪಕರಣಗಳಿಗೆ ಖ್ಯಾತಿಗಳಿಸಿರುವ ಚೀನಾ, ಮೊಬೈಲ್ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ದರದ ಮತ್ತು ಗರಿಷ್ಠ ಮಟ್ಟದ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಚೀನಾದ ಪ್ರತಿಷ್ಠಿತ ಕ್ಸಿಯೋಮಿ ಮೊಬೈಲ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಅತ್ಯಂತ್ಯ ಕಡಿಮೆ ದರದ ಮತ್ತು ಗರಿಷ್ಠ ಸೇವಾ ಸೌಲಭ್ಯಗಳಿರುವ ಮೊಬೈಲ್ ವೊಂದನ್ನು ಘೋಷಣೆ ಮಾಡಿದೆ.

4ಜಿಬಿ ರ್ಯಾಮ್ ಮತ್ತು ಹೆಚ್ ಡಿ ಡಿಸ್ ಪ್ಲೇ ಸೌಲಭ್ಯವನ್ನು ಹೊಂದಿರುವ ಸ್ಮಾರ್ಟ್ಫೋನ್ ಅನ್ನು ಕೇವಲ 4 ಸಾವಿರ ರುಪಾಯಿಗಳಿಗೆ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಟಾಪ್ 5 ಸ್ಮಾರ್ಟ್ ಫೋನ್ ಗಳಲ್ಲಿರುವ ಬಹುತೇಕ ಎಲ್ಲ ಸೌಲಭ್ಯಗಳನ್ನು ಈ ಅಗ್ಗದ ಮೊಬೈಲ್ ನಲ್ಲಿ ನೀಡಲಾಗುತ್ತಿದೆಯಂತೆ. 1ಜಿಬಿ ರ್ಯಾಮ್, ಫುಲ್ 4G LTE, 3G, GSM/ EDGE, WCDMA, LTE FDD, and TD-LTE network connectivity, 2GHz Cortex-A7 cores ನಂತಹ ಉತ್ಕೃಷ್ಟ ಮಟ್ಟದ  ಹಾರ್ಡ್ ವೇರ್ ಮತ್ತು ಸಾಫ್ಟವೇರ್ ಗಳನ್ನು ಈ ನೂತನ ಸ್ಮಾರ್ಟ್ ಫೋನ್ ಹೊಂದಿರಲಿದೆ. ಇದಲ್ಲದೆ ಫ್ಲಾಶ್ ಅನ್ನು ಒಳಗೊಂಡಿರುವ 8ಮೆಗಾ ಪಿಕ್ಸೆಲ್ ಕ್ಯಾಮೆರಾ ಹೆಚ್ಚು ರೆಸಲ್ಯೂಷನ್ ಹೊಂದಿರುವ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಸೆರೆಹಿಡಿಯಲು ಸಹಕಾರಿಯಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದೇ ಜನವರಿ ವೇಳೆಗೆ ಈ ಮೊಬೈಲ್ ಅನ್ನು ಕ್ಸಿಯೋಮಿ ಸಂಸ್ಥೆ ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಭಾರತೀಯ ವಾಯುದಳದಿಂದ ಎಚ್ಚರಿಕೆ
ಈ ಹಿಂದೆ ಚೀನಾದ ಪ್ರತಿಷ್ಟಿತ ಕ್ಸಿಯೋವು ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಿರುವ ತನ್ನ ಮೊಬೈಲ್‌ಗಳ ಮೂಲಕವಾಗಿ ಅದರ ಬಳಕೆದಾರರ ಕುರಿತ ಮಾಹಿತಿಗಳನ್ನು ಚೀನಾಗೆ ರವಾನೆ ಮಾಡುತ್ತಿದೆ ಎಂದು ಆರೋಪಿಸಿತ್ತು. ಈ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಲ್ಲಿರುವ ಕೆಲ ಅತ್ಯಾಧುನಿಕ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ಬಳಕೆದಾರನ ಖಾಸಗಿ ಮಾಹಿತಿಗಳನ್ನು ಚೀನಾ ದೇಶದ ರೆಡ್ ಆರ್ಮಿ ಕದಿಯುತ್ತಿದೆ ಎಂದು ಭಾರತೀಯ ವಾಯು ಸೇನೆ ಎಚ್ಚರಿಸಿತ್ತು. ಅಲ್ಲದೆ ಈ ಸಂಸ್ಥೆಯ ವಿರುದ್ಧ ನಿಷೇಧ ಹೇರಬೇಕು ಎಂದು ಕೂಗು ಕೂಡ ಕೇಳಿಬರುತ್ತಿತ್ತು.

ತೈವಾನ್ ದೇಶದಲ್ಲಿಯೂ ಇಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು, ಕ್ಸಿಯೋಮಿ ಸಂಸ್ಥೆಯ ವಿರುದ್ಧ ಆ ದೇಶ ನಿಷೇಧ ಹೇರುವ ಕುರಿತು ಚಿಂತನೆ ಕೂಡ ನಡೆಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

SCROLL FOR NEXT