ವಿಜ್ಞಾನ-ತಂತ್ರಜ್ಞಾನ

ಅಣು ಪುನಶ್ಚೇತನಕ್ಕೆ ಸರ್ಕಾರದ ಚಿಂತನೆ

Mainashree

ನವದೆಹಲಿ: 2008ರಲ್ಲೇ ಭಾರತ ಮತ್ತು ಅಮೆರಿಕದ ನಡುವೆ ಪರಮಾಣು ಒಪ್ಪಂದ ಆಗಿದೆ ನಿಜ. ಆದರೆ ಅಣುವಿದ್ಯುತ್ ಉತ್ಪಾದನೆ ಎಂದೊಡನೆ ವಿದೇಶಿಯರು ಮಾತ್ರವಲ್ಲ ದೇಶೀಯ ಪೂರೈಕೆದಾರರೂ ಹಿಂದೆಮುಂದೆ ನೋಡುತ್ತಿದ್ದಾರೆ.

ಇದಕ್ಕೆ ಕಾರಣ ಭಾರತದ ಕಠಿಣ ಹೊಣೆಗಾರಿಕೆ ಕಾನೂನು. ಒಂದು ವೇಳೆ ವಿದ್ಯುತ್ ಉತ್ಪಾದನೆ ವೇಳೆ ದುರಂತವೇನಾದರೂ ಸಂಭವಿಸಿದ್ದೇ ಆದಲ್ಲಿ, ಅದರ ಹೊಣೆಯನ್ನು ಪೂರೈಕೆದಾರರೇ ಹೊರಬೇಕು ಎನ್ನುತ್ತದೆ ಕಾನೂನು. ಅದಕ್ಕೆ ಹೆದರಿ ಯಾರೂ ಭಾರತದತ್ತ ಮುಖಮಾಡುತ್ತಿಲ್ಲ.

ಈ ಸಮಸ್ಯೆಯನ್ನು ಅರಿತಿರುವ ಕೇಂದ್ರದ ಮೋದಿ ಸರ್ಕಾರ ದೇಶದ ಅಣು ಯೋಜನೆಗೆ ಮರುಚಾಲನೆ ನೀಡಲು ಮುಂದಾಗಿದೆ. ಮುಂದಿನ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಅವರೇ ಸೂಚಿಸಿದ್ದಾರೆ.

30 ಹೊಸ ರಿಯಾಕ್ಟರ್‌ಗಳ ಮೂಲಕ ಸದ್ಯ ಇರುವ 4,780 ಮೆ.ವ್ಯಾ.ಉತ್ಪಾದನೆಯನ್ನು 63 ಸಾವಿರ ಮೆ.ವ್ಯಾ.ಗೆ ಹೆಚ್ಚಿಸುವ ಗುರಿಯನ್ನೂ ಸರ್ಕಾರ ಹಾಕಿಕೊಂಡಿದೆ.

ಪರಿಶೀಲನೆಯಲ್ಲಿರುವ ಪರಿಹಾರರೋಪಾಯಗಳು
ಆಪರೇಟರ್ ಮತ್ತು ಪೂರೈಕೆದಾರ ಇಬ್ಬರನ್ನೂ ಒಳಗೊಂಡ ವಿಮಾ ಕೂಟ
ಹೊಣೆಗಾರಿಕೆ ನಿರ್ಣಯಿಸುವ ಸಲುವಾಗಿ ರಿಯಾಕ್ಟರ್ ಬಿಡಿ ಭಾಗಗಳ ಮೇಲೆ ಮಿತಿ
ಪೂರೈಕೆದಾರರಿಗೆ ಹೊರೆಯಾಗಿಸುವುದಿಲ್ಲ ಎಂದು ಸ್ವತಃ ಪ್ರಧಾನಿಯಿಂದಲೇ ಭರವಸೆ

ಏನಿದು ಅಣು ಒಪ್ಪಂದ?
2008ರಲ್‌ಲ ಭಾರತವು ಅಮೆರಿಕದೊಂದಿಗೆ ಮಾಡಿಕೊಂಡ ಐತಿಹಾಸಿಕ ಒಪ್ಪಂದವಿದು. ಇದರ ಮೂಲಕ ಭಾರತಕ್ಕೆ ಇಂಧನ ಮತ್ತು ತಂತ್ರಜ್ಞಾನ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ. ಆದರೆ ಕಠಿಣ ಹೊಣೆಗಾರಿಕೆ ಕಾನೂನಿನಿಂದಾಗಿ ಅಣು ಯೋಜನೆಯು ಮುಂದೆ ಸಾಗದೇ ನಿಂತಿದೆ.

ಕಾನೂನೇನು ಹೇಳುತ್ತೇ?
ಅಣು ಅವಘಡ ಸಂಭವಿಸಿದರೆ ಸಲಕರಣೆ ಪೂರೈಕೆದಾರರ ವಿರುದ್ಧ ದೂರು ದಾಖಲಿಸಲು ಆಪರೇಟರ್‌ಗೆ ಅಧಿಕಾರವಿರುತ್ತದೆ. ಜನತೆಗೆ ದುರಂತಕ್ಕೆ ಪೂರೈಕೆದಾರನೇ ಕಾರಣನಾಗುತ್ತಾನೆ.

ಯೋಜನೆ ಸ್ಥಗಿತ ಏಕೆಯ
ದುರಂತದ ವೇಳೆ ಪೂರೈಕೆದಾರರೇ ಪರಿಹಾರ ಮೊತ್ತ ನೀಡಬೇಕಾದ ಕಾರಣ, ಇಂತಹ ರಿಸ್ಕ್‌ಗೆ ಸಿಲುಕದಿರಲು ರಷ್ಯಾ, ಫ್ರಾನ್ಸ್, ಅಮೆರಿಕ ಮತ್ತಿತರ ರಾಷ್ಟ್ರಗಳು ಯೋಚಿಸಿವೆ. ದೇಶೀಯ ಪೂರೈಕೆದಾರರೂ ಇದೇ ಕಾರಣಕ್ಕಾಗಿ ಹಿಂದೆಸರಿಯುತ್ತಿದ್ದಾರೆ.

ಪ್ರಸ್ತುತ ಇರುವ ರಿಯಾಕ್ಟರ್‌ಗಳಿಗೂ ಬಿಡಿಭಾಗ ಒದಗಿಸಲು ಈ ಕಾನೂನೇ ಅಡ್ಡಿಬರುತ್ತಿದೆ.

ಸರ್ಕಾರದ ಉದ್ದೇಶ?
85 ಶತಕೋಟಿ ಡಾಲರ್ ವೆಚ್ಚದಲ್ಲಿ 30 ಹೊಸ ರಿಯಾಕ್ಟರ್‌ಗಳನ್ನು ಆರಂಭಿಸಿ, ಅದರ ಮೂಲಕ 2032ರೊಳಗೆ 63 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವುದು. ಈಗೆಷ್ಟು ಉತ್ಪಾದನೆ ಆಗುತ್ತಿದೆ?

SCROLL FOR NEXT