ವಿಜ್ಞಾನ-ತಂತ್ರಜ್ಞಾನ

ಮಾಯ ಮಾಡುವ ಬಟ್ಟೆ

Mainashree

ಇದು ಮಿಲಿಟರಿ ಉದ್ದೇಶಕ್ಕಾಗಿಯೇ ಕೆನಡಾದ ಹೈಪರ್ ಸ್ಟೆಲ್ತ್ ಕಂಪನಿ ತಯಾರಿಸಿದ ಬಟ್ಟೆ, ಇಲ್ಲಿ ಅಪರೂಪದ ಕಾಮೋಫ್ಲೇಜ್ ಫ್ಯಾಬ್ರಿಕ್ ಬಳಸಲಾಗಿದೆ.

ಈ ಬಟ್ಟೆಯನ್ನು ಮುಚ್ಚಿಡಬೇಕಾದ ವಸ್ತುವಿನ ಸುತ್ತ ಹಾಕಿದರೆ ಸುತ್ತ ಇರುವ ಬೆಳಕನ್ನು ಬಾಗಿಸುತ್ತದೆ. ಹೀಗಾಗಿ ವಸ್ತುವಿನ ಹಿಂದಿದ್ದ ವಸ್ತುಗಳು ತಡೆಯಿಲ್ಲದಂತೆ ಗೋಚರಿಸುತ್ತವೆ.
ಇದರಲ್ಲಿ ಕ್ವಾಂಟಂ ಟೆಕ್ನಾಲಜಿ ಬಳಸಲಾಗಿದೆ. ಈ ಅದೃಶ್ಯ ಮಾನವನಾಗುವ ಅದೃಷ್ಟ ಸದ್ಯ ಅಮೆರಿಕ ಹಾಗೂ ಕೆನಡಾದ ಮಿಲಿಟರಿ ಮನಷ್ಯರಿಗಷ್ಟೇ ದೊರೆತಿದೆ.

ಇಲ್ಲಿ ಕ್ಯಾಮೆರಾ, ಬ್ಯಾಟರಿ, ಬೆಳಕು, ಕನ್ನಡಿ ಯಾವುದನ್ನೂ ಬಳಸಲಾಗಿಲ್ಲ. ಆದರೆ ನಿಜವಾದ ತಯಾರಿಕಾ ವಸ್ತುಗಳ ಮಾಹಿತಿಯನ್ನು ಕಂಪನಿ ಗುಪ್ತವಾಗಿಟ್ಟಿದೆ.

SCROLL FOR NEXT