ಗೂಗಲ್ ಪ್ರಾಜೆಕ್ಟ್ ಎಫ್‌ಐ 
ವಿಜ್ಞಾನ-ತಂತ್ರಜ್ಞಾನ

ಗೂಗಲ್ ಎಫ್‌ಐ ಇದ್ದರೆ, ನೆಟ್ವರ್ಕ್ ಪ್ರಾಬ್ಲಂ ಇರಲ್ಲ!

ಗೂಗಲ್ ಎಫ್‌ಐ ಇದೆಯಾ? ಹಾಗಾದರೆ ನೆಟ್ವರ್ಕ್ ಸಮಸ್ಯೆ ಇರಲ್ಲ! ಏನಿದು ಎಫ್ ಐ ಅಂತ ಕೇಳಿದ್ರೆ ಇದು ನೆಟ್ವರ್ಕ್‌ಗಳ ನೆಟ್ವರ್ಕ್...

ಗೂಗಲ್ ಎಫ್‌ಐ ಇದೆಯಾ? ಹಾಗಾದರೆ ನೆಟ್ವರ್ಕ್ ಸಮಸ್ಯೆ ಇರಲ್ಲ! ಏನಿದು ಎಫ್ ಐ ಅಂತ ಕೇಳಿದ್ರೆ ಇದು ನೆಟ್ವರ್ಕ್‌ಗಳ ನೆಟ್ವರ್ಕ್. ಗೂಗಲ್ ಕಂಪನಿ ಇದೀಗ ಪ್ರಾಜೆಕ್ಟ್ ಎಫ್‌ಐ ಎಂಬ ಸೇವೆಯನ್ನು ಆರಂಭಿಸಿದ್ದು, ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತಡೆ ರಹಿತ ನೆಟ್ವರ್ಕ್ ಸಿಗಲು ಸಹಕರಿಸುತ್ತದೆ.

ಅದು ಹೇಗೆ?
ನಾವು ಬಳಸುವ ನೆಟ್ವರ್ಕ್ ಕೆಲವೊಂದು ಕಡೆ ಮಾತ್ರ ಇರುತ್ತದೆ. ಇನ್ನೊಂದು ಕಡೆ ಹೋದರೆ ರೇಂಜ್ ಸಿಗುವುದಿಲ್ಲ. ಇಂಥಾ ಸಮಯದಲ್ಲಿ ಗೂಗಲ್‌ನ ಪ್ರಾಜೆಕ್ಟ್ ಎಫ್ ಐ ಸಿಮ್ ಬಳಸುವುದಾದರೆ ನಾವು ಇರುವ ಸ್ಥಳದಲ್ಲಿ ಯಾವ ನೆಟ್ವರ್ಕ್ ಸ್ಟ್ರಾಂಗ್ ಆಗಿ ಇದೆಯೋ ಅದನ್ನು ಬಳಸಿ ನಮಗೆ ಇಂಟರ್ನೆಟ್ ವರ್ಕ್ ಆಗುವಂತೆ ಮಾಡುತ್ತದೆ.
ಉದಾಹರಣೆಗೆ ನೀವು ಬಳಸುವ ನೆಟ್ವರ್ಕ್ ಬಿಎಸ್‌ಎನ್‌ಎಲ್ ಆಗಿದ್ದು, ನೀವು ಬೇರೆಡೆ ಹೋದಾಗ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಿಗದೇ ಹೋದರೆ, ಈ ಪ್ರದೇಶದಲ್ಲಿ ಐಡಿಯಾ, ಡೊಕೊಮೋ ನೆಟ್ವರ್ಕ್ ಸಿಗುತ್ತಿದ್ದರೆ ಇಂಥವುಗಳಲ್ಲಿ ಯಾವ ನೆಟ್ವರ್ಕ್ ಸ್ಟ್ರಾಂಗ್ ಆಗಿದೆಯೋ ಅದನ್ನು  ನಿಮ್ಮ ಸ್ಮಾರ್ಟ್‌ಫೋನ್ ಆಟೋಮ್ಯಾಟಿಕ್ ಆಗಿ ಸ್ವೀಕರಿಸಿ ಇಂಟರ್ನೆಟ್ ಸೌಲಭ್ಯ ಒದಗಿಸುತ್ತದೆ.  

ನೀವು ಮೊಬೈಲ್ ಡಾಟಾ ಬದಲು  ವೈಫೈ ಉಪಯೋಗಿಸುವುದಾದರೆ ವೈಫೈ ಹಾಟ್‌ಸ್ಪಾಟ್ ಹುಡುಕಿ ನೆಟ್ವರ್ಕ್ ಸಿಗುವಂತೆ ಮಾಡುತ್ತದೆ. ನೆಕ್ಸಸ್ 6 ಫೋನ್‌ನಲ್ಲಿ ಮಾತ್ರ ಈಗ ಈ ಸಿಮ್ ಲಭ್ಯವಾಗಿದೆ.

120 ದೇಶಗಳಲ್ಲಿ ಈ ಸೌಲಭ್ಯವನ್ನು ಒದಗಿಸಲು ಗೂಗಲ್ ಸಿದ್ಧತೆ  ನಡೆಸಿದೆ. ನೆಟ್ವರ್ಕ್‌ಗಳನ್ನು ಸೆಳೆದು ಇಂಟರ್ನೆಟ್ ನೀಡುವುದು ಮಾತ್ರವಲ್ಲದ ಪ್ರಾಜೆಕ್ಟ್ ಎಫ್ ಐ ನಲ್ಲಿ ಅನ್‌ಲಿಮಿಟೆಡ್ ಕರೆ, ಸಂದೇಶಗಳನ್ನು ಕಳಿಸಬಹುದಾಗಿದೆ.

ಅಂತಾರಾಷ್ಟ್ರೀಯ ಕರೆ ಮಾಡುವುದಾದರೆ ಇದರಲ್ಲಿ ಹೆಚ್ಚು ಖರ್ಚಾಗಲ್ಲ.  3 ಜಿಬಿ ಎಫ್‌ಐ ಡಾಟಾ ಸೇವೆಗೆ ಒಂದು ತಿಂಗಳಲ್ಲಿ 30 ಡಾಲರ್ ಖರ್ಚಾಗುತ್ತದೆ.  ಅಲ್‌ಲಿಮಿಟೆಡ್ ಕರೆ ಮತ್ತು ಸಂದೇಶಕ್ಕೆ 20 ಡಾಲರ್ ಮತ್ತು ಮೊಬೈಲ್ ಡಾಟಾಕ್ಕೆ 10 ಡಾಲರ್ ಖರ್ಚಾಗಲಿದೆ. ಇದರಲ್ಲಿ ಡಾಟಾ ಮಿಕ್ಕಿದ್ದರೆ ಆ ಡಾಟಾದ ಹಣವನ್ನು ಗೂಗಲ್ ರೀಫಂಡ್ ಮಾಡಲಿದೆ. ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಹೋದರೂ ಡಾಟಾದ ಹಣ ಇಷ್ಟೇ ಆಗಿರುತ್ತದೆ ಎಂದು ಗೂಗಲ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT