ಅಶ್ವಥ್ ರಾಮನ್ , ಸ್ಕೈ ಕೂಲಿಂಗ್ (ಕೃಪೆ: Stanford.edu) 
ವಿಜ್ಞಾನ-ತಂತ್ರಜ್ಞಾನ

ಎಂಐಟಿ ಪಟ್ಟಿಯಲ್ಲಿ ಭಾರತೀಯರು

ಸಾಧನವೊಂದು ವಿದ್ಯುತ್ ಉಳಿಸುವುದರೊಂದಿಗೆ ತಾಪವನ್ನು ಹೊರಹಾಕಿ ತಂಪು ಮಾಡುತ್ತದೆ. ಈ ಸಾಧನವನ್ನು ಅತಿ ಕಡಿಮೆ ವಿದ್ಯುತ್ ಬಳಕೆ...

ಬೆಂಗಳೂರು: ಸಾಧನವೊಂದು ವಿದ್ಯುತ್ ಉಳಿಸುವುದರೊಂದಿಗೆ ತಾಪವನ್ನು ಹೊರಹಾಕಿ ತಂಪು ಮಾಡುತ್ತದೆ. ಈ ಸಾಧನವನ್ನು ಅತಿ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹವಾನಿಯಂತ್ರಣಕ್ಕೂ ಬಳಸಬಹುದು. ಅಲ್ಟ್ರಾಸೋನಿಕ್ ಬಳಸಿಕೊಂಡು ಅಂಧರಿಗೆ ಎದುರಾಗುವ ಅಡೆತಡೆಗಳ ನ್ನು ಎಚ್ಚರಿಸುವ ಸಾಧನ, ಅನಕ್ಷರಸ್ಥರು ಫೋನ್‍ನಲ್ಲಿ ಮಾತನಾಡುವಮೂಲಕ ಆನ್‍ಲೈನ್ ಸೇವೆಗಳನ್ನು ಬಳಕೆ ಮಾಡಬಹುದಾದ ತಂತ್ರಜ್ಞಾನ, ನಿರಂತರವಾದ ವಿದ್ಯುತ್ ಅಗತ್ಯವಿಲ್ಲದೆ ಕಡಿಮೆ ದರದಲ್ಲಿ ಮಗುವನ್ನುಬೆಚ್ಚಗಿಡುವ ಸಾಧನ. ಈ ನಾಲ್ಕು ಸಾಧನಗಳನ್ನು ಅಭಿವೃದ್ಧಿ ಮಾಡಿರುವುದು ಭಾರತದ ಯುವ ತಂತ್ರಜ್ಞಾ ನಿಗಳು. ಅಶ್ವತ್ಥ್ ರಾಮನ್ ತಂಪಾಗಿಸುವಸಾಧನ ಅಭಿವೃದ್ಧಿ ಪಡಿಸಿದ್ದರೆ, ರೋಷನ್ ಪಾಲ್ ಅಂಧರಿಗೆ ಅಪಾಯಗಳಕುರಿತು ಎಚ್ಚರಿಕೆ ನೀಡುವ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಸೌರಭ್ ಶ್ರಿವಾತ್ಸವ ಫೋನ್ ಮೂಲಕ ಆನ್‍ಲೈನ್ ಸೇವೆಗಳ ಬಳಕೆ ತಂತ್ರಜ್ಞಾನ ಮತ್ತು ರಾಹುಲ್ ಅಲೆಕ್ಸ್ ಪಣಿಕ್ಕರ್ ಮಕ್ಕಳನ್ನು ಬೆಚ್ಚಗಿಡುವ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಈ ನಾಲ್ವರು ತಮ್ಮ ಸಾಧನೆಯಿಂದಾಗಿ ಮೆಸಾಚುಸೆಟ್ಸ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ -35ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದವರ್ಷ ಭಾರತದ ತನುಜಾ ಗಾನು, ಮನುಪ್ರಕಾಶ್ ಮತ್ತು ಶ್ಯಾಮ್  ಗೊಲ್ಲಕೋಟ ಈ ಪಟ್ಟಿಯಲ್ಲಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

SCROLL FOR NEXT