ವಿಜ್ಞಾನ-ತಂತ್ರಜ್ಞಾನ

ರೊಬೋಟ್ ಈಗ ಹವಾಮಾನ ವರದಿ ವಾಚಿಸುವ ಆ್ಯಂಕರ್

Mainashree
ಬೀಜಿಂಗ್: ಕ್ಲಿಯಾಓಐಸ್ ಎಂಬಾಕೆಗೆ ಚೀನಾದ ನ್ಯೂಸ್ ಚಾನೆಲ್ ಉದ್ಯೋಗ ನೀಡಿದೆ. ಅದರಲ್ಲೇನಿದೆ ವಿಶೇಷ ಅಂತ ಕೇಳ್ತೀರಾ? ಆಕೆಯನ್ನು ಹವಾಮಾನ ವರದಿಗಾರ್ತಿಯಾಗಿ ನೇಮಿಸಿದೆ. ಇದರಲ್ಲೂ ವಿಶೇಷವೇನಿಲ್ಲ ಅಂತಿರಾ? ಕೇಳಿ... ಕ್ಸಿಯಾಓಐಸ್ ಎಂಬಾಕೆ ಹೆಣ್ಣಲ್ಲ, ಹೆಣ್ಣು ರೊಬೋಟ್! 
ಯೆಸ್, ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ರೊಬೋಟ್ ಅನ್ನು ಬೆಳಗಿನ ಬ್ರೇಕ್ ಫಾಸ್ಟ್ ಶೋನಲ್ಲಿ ನೇರ ಪ್ರಸಾರದಲ್ಲಿ ಕೂರಿಸಲಿದೆ ಈ ಚಾನೆಲ್. ಚೀನಾದ ಪತ್ರಕರ್ತರು ಈ ಬೆಳವಣಿಗೆ ಕಂಡು, ರೊಬೋಟ್ ಗಳಿಂದ ತಮ್ಮ ಉದ್ಯೋಗಕ್ಕೆ ಕಂಟಕವಾಗುತ್ತದೆಂಬ ಆತಂಕದಲ್ಲಿದ್ದಾರೆ. 
ಮಂಗಳವಾರ ಮುಂಜಾನೆ ತನ್ನ ಕಾರ್ಯ ಆರಂಭಿಸಿದ ಈ ಲೇಡಿ ರೊಬೋಟ್ ತಾನು ಹೊಸ ಉದ್ಯೋಗಕ್ಕೆ ಸೇರಿರುವುದಕ್ಕೆ ಹರ್ಷ ವ್ಯಕ್ತಪಡಿಸಿದೆ. ಸ್ಮಾರ್ಟ್ ಕ್ಲೌಡ್ ಮತ್ತು ಬಿಗ್ ಡೇಟಾ ತಂತ್ರಜ್ಞಾನ ಆಧರಿಸಿ ಮೈಕ್ರೋಸಾಫ್ಟ್ ತಯಾರಿಸಿದ ಸಾಫ್ಟ್ ವೇರ್ ಈ ಕ್ಸಿಯಾಓಐಸ್ ರೊಬೋಟ್. ಎರಡು ದಿನ ಕೆಲಸ ಮಾಡಿರುವ ಇದು ಈಗಾಗಲೇ ತನ್ನ ವಿಶಿಷ್ಟ ಧ್ವನಿಯಿಂದ ವೀಕ್ಷಕರನ್ನು ಸೆಳೆದಿದ್ದು, ಪ್ರಮುಖ ಸುದ್ದಿಗಳ ಬಗ್ಗೆಯೂ ಇದು ಮಾತನಾಡುತ್ತದಂತೆ. ಚೀನಾದ ಶಾಂಘೈ ಡ್ರಾಗನ್ ಟಿವಿಯಲ್ಲಿ ಇದು ಪ್ರಸಾರವಾಗುತ್ತಿದೆ.
ಟೆಕ್ಸ್ಟ್ ಟು ಸ್ಪೀಚ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರ ಇದರಲ್ಲಿ ಅಳವಡಿಸಲಾಗಿದ್ದು, ಹೆಚ್ಚೂ ಕಮ್ಮಿ ಮನುಷ್ಯನ ದನಿಯನ್ನು ಹೋಲುತ್ತದೆ. ಅಷ್ಟೇ ಅಲ್ಲ ವಿಶಿಷ್ಟ ಎಮೋಷನಲ್ ಟೆಕ್ನಾಲಜಿ ಹೊಂದಿರುವ ಈಕೆ ಹವಾಮಾನದ ವಿವರ ಅರಿತು ಅದಕ್ಕೆ ತಕ್ಕಂತ ತನ್ನ ದನಿಯಲ್ಲಿ ಭಾವನೆ ಬದಲಿಸಬಲ್ಲಳು. 
ಈ ತಂತ್ರಜ್ಞಾನ ಯಶಸ್ವಿಯಾಗಿರುವುದರಿಂದ ಈಗಿರುವ ಟಿವಿ ನಿರೂಪಕರು ಮತ್ತು ಹವಾಮಾನ ವರದಿಗಾರರು ಕೆಲಸ ಕಳೆದುಕೊಳ್ಳುವ ಆತಂಕ ಹೊಂದಿದ್ದರೆ, ವಾಹಿನಿಯ ನಿರ್ದೇಶಕರು ಆ ಆಂತಕ ಬೇಡ ಎಂದು ಸಮಾಧಾನ ಹೇಳಿದ್ದಾರೆ. ಮನುಷ್ಯನ ಸ್ಥಾನ ರೊಬೋಟ್ ಕಸಿಯಲಾರುದು ಎಂದು ಅಭಯ ನೀಡಿದ್ದಾರೆ.
SCROLL FOR NEXT