ವಿಜ್ಞಾನ-ತಂತ್ರಜ್ಞಾನ

ವೆಬ್ ನಲ್ಲಿ ವಾಟ್ಸ್ ಅಪ್ ಬಳಕೆ..!

Srinivasamurthy VN

ವಾಟ್ಸ್ ಅಪ್ ಬಳಕೆದಾರರಿಗೊಂದು ಸಿಹಿಸುದ್ದಿ. ಜನಪ್ರಿಯ ಮೊಬೈಲ್ ಮೆಸೆಂಜಿಂಗ್ ತಂತ್ರಾಂಶ ವಾಟ್ಸ್ ಅಪ್ ಈಗ ವೆಬ್ ಲೋಕಕ್ಕೆ ಕಾಲಿಟ್ಟಿದ್ದು, ವಾಟ್ಸ್ ಅಪ್ ಮೊಬೈಲ್ ಅಪ್ಲಿಕೇಶನ್ ನಲ್ಲಿನ ಸಂದೇಶ ಕಳುಹಿಸುವ ಸೌಲಭ್ಯವನ್ನು  ವಾಟ್ಸ್ ಅಪ್ ವೆಬ್ ತಾಣಕ್ಕೆ ಕಲ್ಪಿಸಲಾಗಿದೆ. ಬಳಕೆದಾರರು ಇನ್ನು ಮುಂದೆ ಸಂದೇಶ ಕಳಿಸುವ ಸೌಲಭ್ಯವನ್ನು ವೆಬ್ ತಾಣದಲ್ಲೇ ಮಾಡಬಹುದಾಗಿದೆ.

ಗೂಗಲ್ ಕ್ರೋಮ್ ವೆಬ್ ಬ್ರೌಸರ್ ನಲ್ಲಿ ಈ ಸೌಲಭ್ಯವಿದ್ದು, ವಾಟ್ಸ್ ಅಪ್ ತಾಣದಲ್ಲಿ ನಮ್ಮ ಮೊಬೈಲ್ ವಾಟ್ಸ್ ಅಪ್ ಅನ್ನು ಪೇರ್ ಮಾಡುವ ಮೂಲಕ ವೆಬ್ ತಾಣದಲ್ಲಿ ವಾಟ್ಸ್ ಅಪ್ ಬಳಕೆ ಮಾಡಬಹುದಾಗಿದೆ. ಸದ್ಯಕ್ಕೆ ಆಂಡ್ರಾಯ್ಡ್, ವಿಂಡೋಸ್, ಬ್ಲಾಕ್ ಬೆರಿ, ನೋಕಿಯಾ ಎಸ್ 60 ಆಧಾರಿತ ಫೋನ್ ಗಳಲ್ಲಿನ ವಾಟ್ಸ್ ಅಪ್ ಅನ್ನು ಮಾತ್ರ ವೆಬ್ ಬ್ರೌಸರ್ ಮೂಲಕವಾಗಿ ಬಳಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಐಫೋನ್, ಆಪಲ್ ಸೆಟ್ ಗಳನ್ನು ಬಳಸುವವರಿಗೆ ಈ ಹೊಸ ಸೌಲಭ್ಯ ಲಭ್ಯವಿಲ್ಲ ಎಂದು ಸಂಸ್ಥೆ ಹೇಳಿದೆ.

ವಾಟ್ಸ್ ಅಪ್ ವೆಬ್ ತಾಣದಲ್ಲಿ QR code ಸ್ಕ್ಯಾನ್ ಮಾಡಿ ವೆಬ್ ಹಾಗೂ ಮೊಬೈಲ್ ವಾಟ್ಸ್ ಅಪ್ ಜೊತೆಗೆ ಪೇರ್ ಮಾಡಿ, ಮೊಬೈಲ್ ಬಳಕೆಯಂತೆಯೇ ವಾಟ್ಸ್ ಅಪ್ ಬಳಕೆ ಮಾಡಬಹುದಾಗಿದೆ. ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್ ಅಪ್ ಸಂಸ್ಥೆಯನ್ನು ಕಳೆದ ವರ್ಷವಷ್ಟೇ ಫೇಸ್ ಬುಕ್ ಸಂಸ್ಥೆ  22 ಬಿಲಿಯನ್ ಯುಎಸ್ ಡಾಲರ್ ಮೊತ್ತಕ್ಕೆ ಖರೀದಿಸಿತ್ತು.

ವೆಬ್ ನಿಂದ ವಾಟ್ಸ್ ಅಪ್ ಬಳಕೆ
ನಿಮ್ಮ ಕಂಪ್ಯೂಟರ್ ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಓಪನ್ ಮಾಡಿ ನಂತರ ಮೆನುವಿನಿಂದ ವಾಟ್ಸ್ ಅಪ್ ವೆಬ್ ಆಯ್ಕೆ ಮಾಡಿಕೊಳ್ಳಿ. QR code ಸ್ಕ್ಯಾನ್ ಮಾಡಿ ವೆಬ್ ಹಾಗೂ ಮೊಬೈಲ್ ವಾಟ್ಸ್ ಅಪ್  ಪೇರ್ ಮಾಡಬೇಕು. ನಂತರ ಮೊಬೈಲ್ ನಂತಯೇ ಬ್ರೌಸರ್ ನಲ್ಲಿಯೂ ವಾಟ್ಸ್ ಅಪ್  ಬಳಕೆ ಮಾಡಬಹುದು. (ಇತ್ತೀಚಿನ ವಾಟ್ಸ್ ಅಪ್ ಆವೃತ್ತಿ ಕಡ್ಡಾಯ)

SCROLL FOR NEXT