ವಿಜ್ಞಾನ-ತಂತ್ರಜ್ಞಾನ

ಹವಾಯಿಗೆ ಬಂದಿಳಿದ ಸೋಲಾರ್ ಇಂಪಲ್ಸ್; ದಾಖಲೆ ಹಾರಾಟ

Guruprasad Narayana

ಜಾಗತಿಕ ಪ್ರವಾಸ ಮಾಡುತ್ತಿರುವ ಸಂಪೂರ್ಣ ಸೌರಶಕ್ತಿಯಿಂದಲೇ ಚಾಲನೆಯಾಗುವ ಪ್ರಯೋಗಾತ್ಮಕ ಸೋಲಾರ್ ಇಂಪಲ್ಸ್-೨ ಒಂದೇ ಚಾಚಿನಲ್ಲಿ ಐದು ದಿನಗಳ ದಾಖಲೆ ಹಾರಾಟ ನಡೆಸಿ ಜಪಾನಿನಿಂದ ಹವಾಯಿಗೆ ಬಂದಿಳಿದಿದೆ.

ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನದ ಪ್ರವರ್ತಕರಾದ ಸ್ವಿಸ್ ಪೈಲಟ್ ಗಳು ಆಂಡ್ರೆ ಬಾರ್ಶ್ಬರ್ಗ್ ಮತ್ತು ಬರ್ಟ್ರಾಂಡ್ ಪಿಕಾರ್ಡ್ ಅವರು ಜಪಾನಿನ ನಗೋಯಾದಿಂದ ಹವಾಯಿಗೆ ೪೦೦೦ ಮೈಲಿ ದೂರವನ್ನು ಒಂದೇ ಚಾಚಿಗೆ ಕ್ರಮಿಸಿ ದಾಖಲೆ ಬರೆದಿದ್ದಾರೆ.

ತನ್ನ ೨೩೬ ಅಡಿ ಉದ್ದದ ರೆಕ್ಕೆಗಳ ಮೇಲೆ ೧೭೦೦೦ ಸೋಲಾರ್ ಸೆಲ್ ಗಳನ್ನು ಹೊಂದಿರುವ ಈ ವಿಮಾನ ಮಾರ್ಚ್ ೯ ರಂದು ಅಬು ಧಾಭಿಯಿಂದ ತನ್ನ ಜಾಗತಿಕ ಪ್ರವಾಸ ಪ್ರಾರಂಭಿಸಿತ್ತು ಹಾಗೂ ಭಾರತಕ್ಕೂ ಬಂದಿಳಿದಿತ್ತು. ಈ ವಿಮಾನ ೨೨೦೦೦ ಮೈಲಿ ದೂರ ಕ್ರಮಿಸುವ ಗುರಿ ಹೊಂದಿದೆ.

SCROLL FOR NEXT