ವಾಷಿಂಗ್ಟನ್: ಪ್ಲೂಟೋದ ಬಳಿ ಅಡ್ಡಾಡುತ್ತಿರುವ ನಾಸಾದ ನ್ಯೂ ಹೊರೈಜನ್ ಸ್ಪೇಸ್‍ಕ್ರಾಫ್ಟ್ ಮತ್ತಷ್ಟು ಅಚ್ಚರಿ ಮಾಹಿತಿಗಳನ್ನು ಕಳಿಸಿದೆ.
ಇದೀಗ ಪ್ಲೂಟೋದ ಹೊರಮೈಯಲ್ಲಿ ಮಂಜುಗಡ್ಡೆಗಳು ನದಿಯಂತೆ ಹರಿಯುತ್ತಿರುವ ಚಿತ್ರ ಲಭ್ಯವಾಗಿದ್ದು ಎಲ್ಲೆಲ್ಲೂ ಹಿಮದ ರಾಶಿಂಯೇ ಕಂಡು ಬರುತ್ತಿದೆಯೆಂದು ನಾಸಾ ಮೂಲಗಳು ತಿಳಿ
ಸಿವೆ. ಈ ಕುಬ್ಜಗ್ರಹ ಮಂಜುಗಡ್ಡೆಯ ಅದ್ಭುತ ಜಗತ್ತು ಎಂದು ನಾಸಾ ವರ್ಣಿಸಿದೆ. ಒಂದು ಹಿಮ ಪದರ ಪ್ಲೂಟೋ ಮೇಲ್ಮೈಯಿಂದ 50ಕಿಮೀ ಎತ್ತರದಲ್ಲಿ ಕಾಣಿಸಿದ್ದರೆ, ಮತ್ತೊಂದು ಪದರ 80ಕಿಮೀ ಎತ್ತರದಲ್ಲಿ ಕಂಡುಬಂದಿದೆ. ಕುಬ್ಜಗ್ರಹದ ಈ ಹಿಮ ಮತ್ತು ಮಂಜುಗಡ್ಡೆಗಳಲ್ಲಿ ಅಡಗಿರುವ ರಾಸಾಯನಿಕ ಅಂಶಗಳ ಬಗ್ಗೆ ಸಂಶೋಧನೆ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.