ವಿಜ್ಞಾನ-ತಂತ್ರಜ್ಞಾನ

೧೦ ಸೆಕಂಡ್ ಗಳಲ್ಲಿ ಚಾರ್ಜ್ ಮಾಡಬಹುದಾದ ಬ್ಯಾಟರಿ ಅಭಿವೃದ್ಧಿಪಡಿಸಿದ ಚೈನಾ

Guruprasad Narayana

ಬೀಜಿಂಗ್: ಅತಿ ವೇಗವಾಗಿ ಚಾರ್ಜ್ ಆಗಬಲ್ಲ ಬ್ಯಾಟರಿ ಉಳ್ಳ ಬಸ್ಸುಗಳನ್ನು ಚೈನಾ ಅಭಿವೃದ್ಧಿಪಡಿಸಿದ್ದು ೧೦ ಸೆಕಂಡಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ.

ಸೇಜಿಯಂಗ್ ಪ್ರಾಂತ್ಯದ ನಿಂಗ್ಬೊ ನಗರದಲ್ಲಿ ಈ ಬಸ್ಸುಗಳಿಗೆ ಮಂಗಳವಾರ ಚಾಲನೆ ನೀಡಲಾಗಿದೆ. ೨೪ ಕಡೆ ನಿಲ್ಲುವ ೧೧ ಕಿಮೀ ಚಲಿಸುವ ಬಸ್ ಇದಾಗಿದೆ ಎಂದು ಸಂಚಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಇಂತಹ ೧೨೦೦ ಬಸ್ಸುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲಾಗುವುದು ಎಂದು ತಿಳಿಯಲಾಗಿದೆ.

ಬಸ್ ನಿಂತಿರುವಾಗ ಅಥವಾ ಪ್ರಯಾಣಿಕರು ಹತ್ತುವಾಗ ಮತ್ತು ಇಳಿಯುವಾಗ ಬಸ್ ಚಾರ್ಜ್ ಆಗಲಿದ್ದು, ಪ್ರತಿ ಚಾರ್ಜ್ ಗೆ ಬಸ್ಸು ಐದು ಕಿಮೀ ದೂರ ಕ್ರಮಿಸಬಹುದಾಗಿದೆ. ಅಲ್ಲದೆ ಇತರ ವಿದ್ಯುಚ್ಚಕ್ತಿ ಬಸ್ಸುಗಳಿಗೆ ಹೋಲಿಸಿದರೆ ೩೦ ರಿಂದ ೫೦% ಕಡಿಮೆ ವಿದ್ಯುಚ್ಚಕ್ತಿ ಇಂಧನವನ್ನು ಈ ಬಸ್ಸುಗಳು ಬಳಸುತ್ತವೆ. ಈ ಬ್ಯಾಟರಿಯ ಕ್ಯಪಾಸಿಟರ್ ಅನ್ನು ದಶಲಕ್ಷ ಬಾರಿ ಚಾರ್ಜ್ ಮಾಡಬಹುದಾಗಿದ್ದು ೧೦ ವರ್ಷ ಬದುಕುವ ಸಾಮರ್ಥ್ಯ ಹೊಂದಿದೆ.

SCROLL FOR NEXT