ನವದೆಹಲಿ: ಭಾರತದ ಅತ್ಯಾಧುನಿಕ ಹವಾಮಾನ ಅಧ್ಯಯನ ಉಪಗ್ರಹ ಇನ್ಸ್ಯಾಟ್-3ಡಿ ಕಕ್ಷೆಯಲ್ಲಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಹವಾಮಾನ ಬದಲಾವಣೆಗಳನ್ನು ದಾಖಲಿಸಿ, ನಿಖರ ಮಾಹಿತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಇನ್ಸ್ಯಾಟ್-3ಡಿ ಯಿಂದಾಗಿ ಭಾರತ ಮತ್ತು ನೆರೆಹೊರೆಯ ಹವಾಮಾನ ಮುನ್ಸೂಚನೆ ಮತ್ತು ಅಧ್ಯಯನ ಉದ್ದೇಶಕ್ಕಾಗಿ ವಾತಾವರಣದ ಬದಲಾ ವಣೆ ಹಾಗೂ ಪ್ರಾಕೃತಿಕ ಅವಘಡಗಳ ಕರಾರುವಾಕ್ಕಾದ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ ಎಂದು ಇಸ್ರೋ ವಿವರಿಸಿದೆ. 2013ರ ಜು. 26ರಂದು ಫ್ರೆಂಚ್ ಗಯಾನಾದಿಂದ ಯುರೋಪಿನ ಏರಿಯನ್ ವಿಎ 214 ಮೂಲಕ ಇನ್ಸ್ಯಾಟ್-3ಡಿ ಉಡಾಯಿಸಲಾಗಿತ್ತು.