ವಿಜ್ಞಾನ-ತಂತ್ರಜ್ಞಾನ

ಸ್ಮಾರ್ಟ್‌ಫೋನ್‌ಗೊಂದು ರಕ್ಷಾ ಕವಚ

Rashmi Kasaragodu

ವಾಷಿಂಗ್ಟನ್: ಅಕಸ್ಮಾತ್ ನಿಮ್ಮ ಸ್ಮಾರ್ಟ್‌ಫೋನ್ ಕೈ ಜಾರಿ ಬಿದ್ದರೆ ಜೀವ ಹೋಗಿ ಬಿಡುವಷ್ಟು ಭಯವಾಗುತ್ತೆ ಅಲ್ವಾ? ಅಷ್ಟೊಂದು ದುಡ್ಡು ಕೊಟ್ಟು ಖರೀದಿಸಿದ ಫೋನ್‌ಗೆ ಸ್ಕ್ರಾಚ್ ಆದರೆ, ಕ್ಯಾಮೆರಾ ಗ್ಲಾಸ್ ಒಡೆದು ಹೋದರೆ ಯಾರಿಗೆ ಬೇಜಾರಾಗಲ್ಲ ಹೇಳಿ? ಸ್ಮಾರ್ಟ್‌ಫೋನ್ ಬಳಸುವುದು ಮಾತ್ರವಲ್ಲ ಅದನ್ನು ಅಷ್ಟೇ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಇದಕ್ಕಾಗಿಯೇ ಅಮೆರಿಕದ ನಾವಲ್ ರಿಸರ್ಚ್ ಲ್ಯಾಬೊರೇಟರಿಯ ಸಂಶೋಧಕರು (ಎನ್‌ಆರ್‌ಎಲ್)ಸ್ಪೈನಲ್ ಎಂಬ ಗಾಜಿಗಿಂತ ಗಟ್ಟಿಯಾದ ವಸ್ತುವೊಂದನ್ನು ನಿರ್ಮಿಸಿದ್ದಾರೆ.

ವಿಶೇಷ ಸೆರಾಮಿಕ್ (ಮ್ಯಗ್ನೇಶಿಯಂ ಅಲ್ಯುಮಿನೇಟ್) ನಿಂದ ತಯಾರಿಸಲ್ಪಟ್ಟ ತೆಳುವಾದ ಪದರದಂತಿರುವ ಸ್ಪೈನಲ್ ನ್ನು ಸ್ಮಾರ್ಟ್‌ಫೋನ್‌ನಲ್ಲಿ ಗಾಜಿನ ಬದಲು ಬಳಸಬಹುದಾಗಿದೆ. ಸ್ಮಾರ್ಟ್‌ಫೋನ್ ಬಿದ್ದರೂ ಸ್ಪೈನಲ್ ಒಡೆದು ಹೋಗುವುದಿಲ್ಲ ಮಾತ್ರವಲ್ಲ ಸ್ಕ್ರೀನ್ ಮೇಲೆ ಸ್ಕ್ರಾಚ್ ಕೂಡಾ ಆಗಲ್ಲ.

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಗಾಜಿಗಿಂತ ಇದು ಗಟ್ಟಿಯಾಗಿದ್ದು, ಇದನ್ನು ವಾಚ್‌ಗಳಲ್ಲಿಯೂ ಬಳಸಲಾಗುತ್ತದೆ.

ಮಳೆಗೆ ಒದ್ದೆಯಾದರೂ, ಮರಳಿನ ಮೇಲೆ ಬಿದ್ದರೂ ಸ್ಪೈನಲ್ ಬಳಸಿದ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಸ್ಕ್ರಾಚ್ ಆಗುವುದಾಗಲೀ, ಕ್ಯಾಮೆರಾ ಒಡೆದು ಹೋಗುವುದಾಗಲೀ ಆಗಲ್ಲ.  ವಿಶೇಷ ಆಪ್ಟಿಕಲ್ ಫೈಬರ್‌ನಿಂದ ತಯಾರಿಸಲ್ಪಟ್ಟ ಸ್ಪೈನಲ್ ಶೀಘ್ರದಲ್ಲೇ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಕೆಯಾಗಲಿದೆ ಅಂತಾರೆ ಸಂಶೋಧಕರು.




SCROLL FOR NEXT