ವಿಜ್ಞಾನ-ತಂತ್ರಜ್ಞಾನ

ಅಣಬೆಯಿಂದ ಮೊಬೈಲ್ ಬ್ಯಾಟರಿ ನಿರ್ಮಿಸುವ ಕಾಲ ಸನ್ನಿಹಿತ ?

Rashmi Kasaragodu
ಕ್ಯಾಲಿಫೋರ್ನಿಯಾ: ಮೊಬೈಲ್ ಬ್ಯಾಟರಿಯನ್ನು ನಿರ್ಮಿಸಲು ಅಣಬೆ? ಹೌದು ಅಣಬೆಯಿಂದ ಮೊಬೈಲ್ ಬ್ಯಾಟರಿಗಳನ್ನು ನಿರ್ಮಿಸಬಹುದು ಎಂದು ಸಂಶೋಧಕರ ತಂಡವೊಂದು ಹೇಳಿದೆ.
ಪೋರ್ಟ್ ಬೆಲ್ಲೋ ಅಣಬೆ (portobello mushroom )ಗಳನ್ನು ಬಳಸಿ ಲಿಥಿಯಂ ಅಯೋನ್ ಬ್ಯಾಟರಿ ಆನೋಡ್ (ಪೊಸೆಟಿವ್ ಇಲೆಕ್ಟ್ರೋಡ್)ಗಳನ್ನು ತಯಾರಿಸುವುದರಲ್ಲಿ ಸಫಲವಾಗಿದ್ದೇವೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
ಅಣಬೆಯಿಂದ ನಿರ್ಮಿಸಿದ ಬ್ಯಾಟರಿ ಆನೋಡ್‌ಗಳು ಅಗ್ಗವಾಗಿದ್ದು, ಪರಿಸರ ಸ್ನೇಹಿಯಾಗಿವೆ. ಪ್ರಸ್ತುತ ಮೊಬೈಲ್‌ಗಳಲ್ಲಿ ಲಿಥಿಯಂ -ಅಯೋನ್ ಬ್ಯಾಟರಿ ಆನೋಡ್ ಗಳನ್ನು ತಯಾರಿಸಲು ಸಿಂಥೆಟಿಕ್ ಗ್ರಾಫೈಟ್‌ನ್ನು ಬಳಸಲಾಗುತ್ತದೆ.  ಇದು ದುಬಾರಿ ಮಾತ್ರವಲ್ಲ ಇದರಿಂದ ವಾತಾವರಣವೂ ಹಾಳಾಗುತ್ತದೆ.
ಗ್ರಾಫೈಟ್‌ನ ಬದಲು ಜೈವಿಕ ವಸ್ತುಗಳನ್ನು ಬಳಸಿ ಬ್ಯಾಟರಿ ತಯಾರಿಸುವುದರ ಬಗ್ಗೆ ಹೊಸ ಸಂಶೋಧನೆಗಳು ನಡೆಯುತ್ತಿವೆ. ಮೊಬೈಲ್ ಬ್ಯಾಟರಿ ಮಾತ್ರವಲ್ಲ ಇನ್ನು ಮುಂದೆ ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಯನ್ನೂ ಅಣಬೆಗಳಿಂದ ತಯಾರಿಸುವ ಬಗ್ಗೆ ಸಂಶೋಧನೆಗಳು ನಡೆದು ಬರುತ್ತಿವೆ.
SCROLL FOR NEXT