ವಿಜ್ಞಾನ-ತಂತ್ರಜ್ಞಾನ

ಲೈಕ್ ಆಯ್ಕೆ ಜೊತೆಗೆ ಇನ್ನೂ ಆರು ಎಮೊಜಿಗಳನ್ನು ಪರಿಚಯಿಸಿದ ಫೇಸ್ ಬುಕ್

Srinivas Rao BV

ನ್ಯೂಯಾರ್ಕ್: ಫೇಸ್ ಬುಕ್ ಸಂಸ್ಥೆ ಲೈಕ್ ಆಪ್ಷನ್ ಜೊತೆಗೆ ಇನ್ನೂ ಆರು ಆಪ್ಷನ್ ಗಳನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದೆ.
ಲೈಕ್ ಆಪ್ಷನ್ ಆಯ್ಕೆ ಮಾಡುವುದರ ಜೊತೆಗೇ ವಿವಿಧ ಭಾವನೆಗಳನ್ನು ಹೊಂದಿರುವ 6 ಎಮೊಜಿಗಳನ್ನು ಫೇಸ್ ಬುಕ್ ಪರಿಚಯಿಸಿದೆ. ಸ್ಪೇನ್ ಹಾಗೂ ಐರ್ಲೆಂಡ್ ನಲ್ಲಿ ಈ ಫೀಚರ್ ನ್ನು ಪ್ರಥಮ ಬಾರಿಗೆ ಪರಿಚಯಿಸಲಾಗಿದೆ. ಪ್ರಾಯೋಗಿಕವಾಗಿ ಈ ಆಪ್ಷನ್ ನ್ನು ಬಿಡುಗಡೆ ಮಾಡಲಾಗಿದ್ದು ಬಳಕೆದಾರರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಾದ್ಯಂತ ಜಾರಿಗೆ ತರುವುದಾಗಿ ಸಂಸ್ಥೆ ತಿಳಿಸಿದೆ.
ಡಿಸ್ಲೈಕ್ ಆಪ್ಷನ್ ಗೆ ಫೇಸ್‌ಬುಕ್ ಬಳಕೆದಾರರು ಒತ್ತಾಯಿಸುತ್ತಿದ್ದಾರೆ. ಫೇಸ್ ಬುಕ್ ಪೋಸ್ಟ್ ಗಳಿಗೆ ಕಾಮೆಂಟ್ ಮಾಡುವಾಗ ಅತಿ ಹೆಚ್ಚು ವ್ಯಕ್ತವಾದ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ಎಮೋಜಿಗಳನ್ನು ರೂಪಿಸಲಾಗಿದೆ. ಲೈಕ್ ಆಯ್ಕೆ ಮಾಡಿದಂತೆಯೇ  ಈ 6 ಎಮೋಜಿಗಳನ್ನೂ ಸಹ ಬಳಕೆ ಮಾಡಬಹುದಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.

SCROLL FOR NEXT