ಸಿಂಗಾಪುರ: ಮೊಬೈಲ್ ಕರೆನ್ಸಿಯಿಂದ ಜೇಬಿಗೆ ಕತ್ತರಿ ಬೀಳುತ್ತಿದ್ದೆಯೇ. ಚಿಂತಿಸಬೇಡಿ! ಉಚಿತವಾಗಿ ಮಾತನಾಡುವ ದಿನಗಳೂ ಬರಲಿವೆ.
ಸಿಂಗಾಪುರದ ಟೆಲಿಕಾಂ ಕಂಪನಿ ಜೆಂಟೇ ಕಮ್ಯೂನಿಕೇಷನ್ಸ್ 'ನಾನು' ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಇದರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಹುದು. 2ಜಿ ಇದ್ದರೂ ಸಾಕು ಈ ಆ್ಯಪ್ ಕಾರ್ಯನಿರ್ವಹಿಸಲಿದೆ.
ಈ ಆ್ಯಪ್ ಮೂಲಕ ಕರೆ ಮಾಡಿದರೆ ಒಂದು ನಿಮಿಷಕ್ಕೆ 105 ಕೆಬಿ ಮಾತ್ರ ಬಳಕೆಯಾಗುತ್ತದೆ. ಇತರೆ ನೆಟ್‍ವರ್ಕ್‍ಗಳ ಮೂಲಕ ಮಾತನಾಡಬೇಕಾದರೆ ಒಂದು ನಿಮಿಷಕ್ಕೆ 740ರಿಂದ 875 ಕೆಬಿ ಬಳಸಲಿದೆ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಟಿನ್ ನೈಗೇಟ್ ಹೇಳಿದ್ದಾರೆ. ಭಾರತದಲ್ಲಿ 3ಜಿ ಸಂಪರ್ಕ ಇಲ್ಲದೆ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಹುದು ಎಂದು ಅವರು, ಭಾರತ ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆ ಎಂದಿದ್ದಾರೆ.