ನವದೆಹಲಿ: ದೂರಸಂಪರ್ಕ ಸೇವಾ ಕಂಪನಿ ಏರ್‍ಟೆಲ್ ಮಳಿಗೆಗಳಲ್ಲಿ ಅಕ್ಟೋಬರ್ 16ರಿಂದ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಸಿಗಲಿದೆ. ಫೋನ್ ಖರೀದಿಸುವವರಿಗೆ ಏರ್‍ಟೆಲ್ ಕಂಪನಿ 12 ತಿಂಗಳು ಉಚಿತ 4ಜಿ ಡೇಟಾ ನೀಡುತ್ತದೆ.
ಇದರಿಂದ ವಾರ್ಷಿಕ ಫೋನ್ ಬಿಲ್‍ನಲ್ಲಿ 15 ಸಾವಿರ ರು. ಉಳಿತಾಯವಾಗಲಿದೆ ಎಂದು ಕಂಪನಿ ತಿಳಿಸಿದೆ. ದೇಶಾದ್ಯಂತ ಕಂಪನಿಯ 235 ಮಳಿಗೆಗಳಲ್ಲಿ ಐಫೋನ್ ಸಿಗಲಿದೆ. 4ಜಿ ಸೇವೆಗಳು ಸಹ ಜೊತೆಗೂಡುವುದರಿಂದ ಗ್ರಾಹಕರು ಉತ್ತಮ ಸೇವೆ ಪಡೆಯಲಿದ್ದಾರೆ ಎಂದು ಏರ್‍ಟೆಲ್ ಕಂಪನಿಯ ಗ್ರಾಹಕ ವಹಿವಾಟು ವಿಭಾಗದ ಶ್ರೀನಿಗೋಪಾಲನ್ ಹೇಳಿದ್ದಾರೆ.