ನವದೆಹಲಿ: ಪತ್ರಿಕೆಗಳ ಪ್ರಸರಣ ಸಂಖ್ಯೆ ವರದಿ ಪ್ರಕಟಿಸುತ್ತಿರುವ ಎಬಿಸಿ ಇನ್ನು ಮುಂದೆ ಡಿಜಿಟಲ್ ಓದುಗರ ಲೆಕ್ಕವನ್ನೂ ಬಿಡುಗಡೆ ಮಾಡಲಿದೆ.
ಸುದ್ದಿ, ಜಾಹೀರಾತು ಮತ್ತಿತರ ಕ್ಷೇತ್ರಗಳ ವೆಬ್‌ಸೈಟ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇವುಗಳ ವೀಕ್ಷಕರ ಸಂಖ್ಯೆಯನ್ನು ಲೆಕ್ಕ ಹಾಕುವ ನಿಟ್ಟಿನಲ್ಲಿ ಎಬಿಸಿ ಮೊದಲ ಹೆಜ್ಜೆಯನ್ನಿಟ್ಟಿದೆ. ಹಲವು ವರ್ಷಗಳ ಕಾಲ ಅನುಭವ ಹೊಂದಿರುವ ತಂತ್ರಜ್ಞಾನ ಪರಿಣತರೊಂದಿಗೆ ಒಪ್ಪಂದ ಮಾಡಿಕೊಂಡು ಪಾರದರ್ಶಕ ಹಾಗೂ ನಿಖರ ಅಂಕಿಅಂಶಗಳನ್ನು ಒದಗಿಸಲಾಗುವುದು ಎಂದು ಎಬಿಸಿ ಮೂಲಗಳು ತಿಳಿಸಿವೆ.
ಯಾವುದೇ ವೈಬ್‌ಸೈಟ್, ಪೋರ್ಟಲ್‌ಗಳು ಎಬಿಸಿಯ ಸದಸ್ಯತ್ವ ಹೊಂದಬಹುದಾಗಿದೆ ಎಂದು ಎಬಿಸಿ ತಿಳಿಸಿದೆ. ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ಅಂತರ್ಜಾಲ ಜಾಹೀರಾತು ಕ್ಷೇತ್ರಕ್ಕೆ ಎಬಿಸಿ ಕ್ರಮ ಹೊಸ ಆಯಾಮ ನೀಡಲಿದೆ.ಜಾಹೀರಾತು ಕಂಪನಿಗಳಿಗೆ ಅನುಕೂಲವಾಗಲಿದೆ.