ವಿಜ್ಞಾನ-ತಂತ್ರಜ್ಞಾನ

ಖಾತೆ ತೆರೆಯಲು ಅಪ್ರಾಪ್ತೆಗೆ ಅನುಮತಿ: ಫೇಸ್ ಬುಕ್ ಗೆ ದಂಡ ವಿಧಿಸಿದ ನ್ಯಾಯಾಲಯ

Srinivas Rao BV

ಲಂಡನ್: ಫೇಸ್ ಬುಕ್ ನಲ್ಲಿ ಖಾತೆ ತೆರೆಯಲು ಅಪ್ರಾಪ್ತೆಗೆ ಅನುಮತಿ ನೀಡಿದ್ದಕ್ಕೆ ಫೇಸ್ ಬುಕ್ ಗೆ ಲಂಡನ್ ನ ನ್ಯಾಯಾಲಯ ದಂಡ ವಿಧಿಸಿದೆ.
ತನ್ನ ಮಗಳನ್ನು ಆನ್ ಲೈನ್ ನಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಅಪ್ರಾಪ್ತೆಯ ತಂದೆ,  ಫೇಸ್ ಬುಕ್ ವಯಸ್ಸಿನ ನಿರ್ಬಂಧನೆಯ ನೀತಿಯನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.
ಉತ್ತರ ಐರ್ಲೆಂಡ್ ಅಪ್ರಾಪ್ತ ಯುವತಿಯೊಬ್ಬಳು ತನ್ನದೇ ಅಶ್ಲೀಲ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡುವುದಲ್ಲದೇ, ಹಲವು ಫೇಸ್ ಬುಕ್ ಖಾತೆಗಳನ್ನು ಉಪಯೋಗಿಸುತ್ತಿದ್ದಳು ಎಂದು ತಿಳಿದುಬಂದಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ ನಂತರ ಫೇಸ್ ಬುಕ್ ಸಂಸ್ಥೆ ಖಾತೆಗಳನ್ನು ತೆಗೆದುಹಾಕಿದೆ.
ತಪ್ಪು ವಯಸ್ಸಿನ ಮಾಹಿತಿ ನೀಡಿ ಫೇಸ್ ಬುಕ್ ಖಾತೆ ತೆರೆಯುವುದನ್ನು ತಡೆಗಟ್ಟಲು ಫೇಸ್ ಬುಕ್  ಬಳಿ ಯಾವುದೇ ವ್ಯವಸ್ಥೆಯಿಲ್ಲ ಎಂದು ದೂರುದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಅಪ್ರಾಪ್ತರು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದರಿಂದ ಲೈಂಗಿಕವಾಗಿ ದುರ್ಬಳಕೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು ದಂಡ ಪಾವತಿ ಮಾಡಲು ಸೂಚಿಸಿದೆ.  
ಫೇಸ್ ಬುಕ್, ಇನ್ ಸ್ಟಾಗ್ರಾಮ್, ಟಂಬ್ಲರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಲು ಕನಿಷ್ಠ 13 ವರ್ಷಗಳಾಗಿರಬೇಕು. ಅಪ್ರಾಪ್ತರು ಫೇಸ್ ಬುಕ್ ಖಾತೆ ತೆರೆದರೆ ಅದನ್ನು ಕೂಡಲೆ ತೆಗೆದುಹಾಕುವುದಾಗಿ ಫೇಸ್ ಬುಕ್ ಹೇಳಿದೆ.

SCROLL FOR NEXT