ವಿಜ್ಞಾನ-ತಂತ್ರಜ್ಞಾನ

ಶೀಘ್ರದಲ್ಲೇ ವಾಟ್ಸಪ್‌ನಲ್ಲಿ 'ಕಾಲ್ ಬ್ಯಾಕ್‌' ಸೌಲಭ್ಯ

Rashmi Kasaragodu
ನವದೆಹಲಿ: ಶೀಘ್ರದಲ್ಲೇ ವಾಟ್ಸಪ್ ತಮ್ಮ ಬಳಕೆದಾರರಿಗೆ ಕಾಲ್ ಬ್ಯಾಕ್ ಸೌಲಭ್ಯವನ್ನು ಕಲ್ಪಿಸಲಿದೆ. ವಾಟ್ಸಪ್‌ನಲ್ಲಿ ಯಾರಾದರೂ ಕರೆ ಮಾಡಿದ್ದರೆ, ಆ್ಯಪ್ ಓಪನ್ ಮಾಡದೆಯೇ ಕ್ಯಾಲ್ ಬ್ಯಾಕ್ ಬಟನ್ ಒತ್ತಿ ಕರೆ ಮಾಡಬಹುದಾಗಿದೆ. ವಾಟ್ಸಪ್ ಕಾಲ್ ನೋಟಿಫಿಕೇಷನ್‌ನ ಬಳಿಯೇ ಈ ಬಟನ್ ಕಾಣಿಸಿಕೊಳ್ಳಲಿದೆ.
ಏತನ್ಮಧ್ಯೆ, ಐಒಎಸ್ ಮತ್ತು ಆಂಡ್ರಾಯಿಡ್ ಬಳಕೆದಾರರಿಗೆ ಶೀಘ್ರದಲ್ಲೇ ಈ ಸೌಲಭ್ಯ ದಕ್ಕಲಿದೆ.
ಇಷ್ಟೇ ಅಲ್ಲದೆ ವಾಟ್ಸಪ್ ಐಒಎಸ್ ಬಳಕೆದಾರರಿಗಾಗಿ ವಾಯ್ಸ್ ಮೇಲ್ ಫೀಚರ್‌ನ್ನೂ ಪರಿಚಯಿಸಿದೆ. ಕರೆ ಮಾಡುತ್ತಿರುವ ಚಂದಾದಾರರು ವಾಟ್ಸಪ್ ಕಾಲ್ ನಲ್ಲಿ ಬ್ಯುಸಿಯಾಗಿದ್ದರೆ, ಅವರಿಗೆ ನಿಮ್ಮ ಮಾತನ್ನು ವಾಯ್ಸ್ ಮೇಲ್ ಮೂಲಕ ಕರೆ ಮಾಡಿ ಕಳುಹಿಸಬಹುದಾಗಿದೆ. 
ಜಿಪ್ ಫೈಲ್ ಶೇರಿಂಗ್
ವಾಟ್ಸಪ್ ನಲ್ಲಿ ದೊಡ್ಡ ಫೈಲ್‌ಗಳನ್ನು ಶೇರ್ ಮಾಡಲು ಸಾಧ್ಯವಾಗುವಂತೆ ಜಿಪ್ ಫೈಲ್ ಶೇರಿಂಗ್ ಸೌಲಭ್ಯವನ್ನೂ ಕಲ್ಪಿಸುವ ಬಗ್ಗೆ ವಾಟ್ಸಪ್ ಚಿಂತನೆ ನಡೆಸಿದೆ. ಇದಕ್ಕಾಗಿ ಈಗಾಗಲೇ ಬೇಟಾ ಪ್ರೋಗ್ರಾಂ ಟೆಸ್ಟಿಂಗ್ ನಡೆಯುತ್ತಿದೆ. 
SCROLL FOR NEXT