ವಿಜ್ಞಾನ-ತಂತ್ರಜ್ಞಾನ

ಅನ್ಯಗ್ರಹ ಜೀವಿಗಳ ಬಗ್ಗೆ ರಹಸ್ಯ ಕಡತಗಳನ್ನು ಬಿಡುಗಡೆ ಮಾಡಲಿದೆ ಬ್ರಿಟನ್

Srinivas Rao BV

ನವದೆಹಲಿ: ಏಲಿಯನ್( ಅನ್ಯಗ್ರಹ ಜೀವಿ) ಗಳಿವೆಯಾ? ಎಂಬ ಪ್ರಶ್ನೆ ಹಲವು ದಶಕಗಳಿಂದ ನಮ್ಮನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಸಿಗಬಹುದಾದ ನಿರೀಕ್ಷೆ ಮೂಡಿಸಿದೆ ಬ್ರಿಟನ್ ಸರ್ಕಾರ ಕೈಗೊಂಡಿರುವ ನಿರ್ಧಾರ.
ಮಾರ್ಚ್ ತಿಂಗಳಲ್ಲಿ ಬ್ರಿಟನ್ ಸರ್ಕಾರ ಅನ್ಯಗ್ರಹ ಜೀವಿಗಳ ಅಸ್ತಿತ್ವ, ಯುಎಫ್ಒಗೆ  ಸಂಬಂಧಿಸಿದಂತೆ ಕೆಲವು ಪುರಾವೆಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅನ್ಯಗ್ರಹ ಜೀವಿಗಳ ಬಗ್ಗೆ ಸುಮಾರು 18 ರಹಸ್ಯ ಕಡತಗಳು ಬಿಡುಗಡೆಯಾಗಲಿದೆ ಆದರೆ ಅವುಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಸಾರ್ವಜನಿಕಗೊಳಿಸದಿರುವುದಕ್ಕೆ ಸೂಕ್ಷ್ಮ ವಿಷಯಗಳ ಕಾರಣ ನೀಡಿರುವ ಬ್ರಿಟನ್ ಸರ್ಕಾರ, 18 ಕಡತಗಳ ಪೈಕಿ ಕನಿಷ್ಠ 2 ಕಡತಗಳು ಅತಿ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ. ಅನ್ಯಗ್ರಹ ಜೀವಿಗಳ ಬಗ್ಗೆ ಕಳೆದ 30 ವರ್ಷಗಳಿಂದ ವೈಜ್ಞಾನಿಕ ಸಂಶೋಧನೆ ನಡೆಸುತ್ತಿರುವುದಾಗಿ 2005 ರಲ್ಲಿ ಬ್ರಿಟನ್ ಸರ್ಕಾರ ಒಪ್ಪಿಕೊಂಡಿತ್ತು.
ಸರ್ಚ್ ಫಾರ್ ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಇಂಟಲಿಜೆನ್ಸ್ ( ಎಸ್ ಇ ಟಿ ಐ) ಗೆ ಸಂಬಂಧಿಸಿದ ಮಾಹಿತಿಗಳು ಬ್ರಿಟನ್ ಸರ್ಕಾರ ಬಿಡುಗಡೆ ಮಾಡಲಿರುವ ಕಡತಗಳಲ್ಲಿದೆ ಎಂದು ನಿರೀಕ್ಷಿಸಲಾಗಿದೆ.

SCROLL FOR NEXT