ವಿಜ್ಞಾನ-ತಂತ್ರಜ್ಞಾನ

ಭಾರತದಲ್ಲಿ ಶೇಕಡಾ 80ರಷ್ಟು ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳು: ವರದಿ

Sumana Upadhyaya

ನವದೆಹಲಿ: ಭಾರತದಲ್ಲಿ ಶೇಕಡಾ 80ರಷ್ಟು ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯೊಂದು ತಿಳಿಸಿದ್ದು, ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಎಂದು ಹೇಳಿದೆ.

ದೇಶದ ಅಷ್ಟೂ ಎಂಜಿನಿಯರಿಂಗ್ ಪದವಿ ಸಂಸ್ಥೆಗಳಿಂದ ಲಕ್ಷಾಂತರ ಯುವಜನರು ಪದವಿ ಮುಗಿಸಿ ಹೊರಬರುತ್ತಾರೆ. ಆದರೆ ಅವರಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲ್ಯದ ಅವಶ್ಯಕತೆಯಿರುವುದಿಲ್ಲ ಎಂದು ಕಾರ್ಪೊರೇಟ್ ಕಂಪೆನಿಗಳು ಹೇಳುತ್ತಿವೆ.

ಅಸ್ಪೈರಿಂಗ್ ಮೈಂಡ್ಸ್ ರಾಷ್ಟ್ರೀಯ ಉದ್ಯೋಗಿಕರಣ ವರದಿ ಪ್ರಕಾರ, 2015ರಲ್ಲಿ ದೇಶದ 650 ಕಾಲೇಜುಗಳಿಂದ ಎಂಜಿನಿಯರಿಂಗ್ ಪದವಿ ಮುಗಿಸಿ ಹೊರಬಂದ ಒಂದೂವರೆ ಲಕ್ಷ ಪದವೀಧರರಲ್ಲಿ  ಶೇಕಡಾ 80ರಷ್ಟು ನಿರುದ್ಯೋಗಿಗಳಾಗಿದ್ದಾರೆ.

ಎಂಜಿನಿಯರಿಂಗ್ ಎಂಬುದು ಕೇವಲ ಪದವಿಗೆ ಮಾತ್ರ ಇಂದು ಸೀಮಿತವಾಗಿದೆ. ಎಂಜಿನಿಯರಿಂಗ್ ಶಿಕ್ಷಣದ ವ್ಯವಸ್ಥೆಯನ್ನು ಹೆಚ್ಚಿಸುವುದಲ್ಲದೆ, ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಉದ್ಯೋಗ ಸೃಷ್ಟಿ ಹೆಚ್ಚಾಗಬೇಕಾಗಿದೆ ಎನ್ನುತ್ತಾರೆ ಅಸ್ಪೈರಿಂಗ್ ಮೈಂಡ್ಸ್ ಮುಖ್ಯ ತಾಂತ್ರಿಕ ಅಧಿಕಾರಿ ವರುಣ್ ಅಗರ್ ವಾಲ್.

ನಮ್ಮ ದೇಶದಲ್ಲಿ ದೆಹಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯ ನಗರವಾಗಿದ್ದು, ಆ ಬಳಿಕ ಬೆಂಗಳೂರು ಮತ್ತು ಪಶ್ಚಿಮ ಭಾಗಗಳಲ್ಲಿ ಎಂಜಿನಿಯರಿಂಗ್ ಪದವೀಧರರಿಗೆ ಹೆಚ್ಚು ಉದ್ಯೋಗಾವಕಾಶಗಳಿವೆ.

SCROLL FOR NEXT