ವಿಜ್ಞಾನ-ತಂತ್ರಜ್ಞಾನ

ವಿಶ್ವ ಪರ್ಯಟನೆ ಪೂರ್ಣಗೊಳಿಸಿದ ವಿಶ್ವದ ಮೊದಲ ಸೌರಶಕ್ತಿ ಚಾಲಿತ ವಿಮಾನ

Srinivasamurthy VN

ಅಬುಧಾಬಿ: ವಿಶ್ವದ ಅತೀ ದೊಡ್ಡ ಸೌರಶಕ್ತಿ ಚಾಲಿತ ವಿಮಾನ ಎಂಬ ಕೀರ್ತಿಗೆ ಭಾಜನವಾಗಿರುವ ಸೋಲಾರ್ ಇಂಪಲ್ಸ್ 2 ಮಂಗಳವಾರ ಯುಎಇಯ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಇಳಿಯುವ ಮೂಲಕ ತನ್ನ ವಿಶ್ವ ಪರ್ಯಟನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಸುಮಾರು ಒಂದು ವರ್ಷಕ್ಕೂ ಅಧಿಕಕಾಲ ಭಾರತ, ಅಮೆರಿಕ, ಜಪಾನ್, ಚೀನಾ ಸೇರಿದಂತೆ ವಿಶ್ವದ ನಾನಾ ಭಾಗಗಳಿಗೆ ಭೇಟಿ ನೀಡಿದ್ದ ಸೋಲಾರ್ ಇಂಪಲ್ಸ್-2 ತನ್ನ ವಿಶ್ವ ಪರ್ಯಟನೆಯನ್ನು  ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ಮುಂಜಾನೆ ಅಬುಧಾಬಿಯಲ್ಲಿ ಇಳಿಯುವ ಮೂಲಕ 500 ಗಂಟೆಗಳ ಕಾಲ ಸುಮಾರು 40 ಸಾವಿರ ಕಿ.ಮೀ ಪ್ರಯಾಣವನ್ನು ಪೂರ್ಣಗೊಳಿಸಿದೆ.

2015ರ ಮಾರ್ಚ್ ತಿಂಗಳಲ್ಲಿ ಪ್ರಯಾಣ ಆರಂಭಿಸಿದ್ದ ವಿಮಾನ 40 ಸಾವಿರಕ್ಕೂ ಅಧಿಕ ಕಿ.ಮೀ ದೂರ ಪ್ರಯಾಣ ಮಾಡಿತ್ತು ಎಂದು ವಿಮಾನದ ಪೈಲಟ್ ತಿಳಿಸಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ "ವಿಮಾನದ ಎರಡನೇ ಪೈಲೆಟ್ ಆಂಡ್ರೆ ಬೋಸ್ಟ್​ಬರ್ಗ್ ಅವರು, ನಾವು ಹಂತ ಹಂತವಾಗಿ ವಿಶ್ವದ ನಾನಾ ಭಾಗಗಳಿಗೆ ಭೇಟಿ ನೀಡಿದ್ದೇವೆ. ಈ ಕ್ಷಣಗಳು ತುಂಬಾ  ರೋಚಕವಾಗಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಧನವಿಲ್ಲದೇ 500 ಗಂಟೆಗಳಕಾಲ ಸುಮಾರು 40,000 ಕಿ.ಮೀ ಸಂಚರಿಸಿರುವ ವಿಮಾನ, ಅರಬ್ಬಿ ಸಮುದ್ರ, ಭಾರತ, ಮ್ಯಾನ್ಮಾರ್, ಚೀನಾ, ಅಂಟ್ಲಾಟಿಕ್ ಸಮುದ್ರ, ಅಮೆರಿಕ, ದಕ್ಷಿಣ  ಯುರೋಪ್, ಉತ್ತರ ಯುರೋಪ್ ಹಾಗೂ ದಕ್ಷಿಣ ಆಫ್ರಿಕಾ ದೇಶಗಳನ್ನು ಪ್ರದಕ್ಷಿಣೆ ಹಾಕಿದೆ.

SCROLL FOR NEXT