ವಿಜ್ಞಾನ-ತಂತ್ರಜ್ಞಾನ

ನೈಸರ್ಗಿಕ ವಿಪತ್ತು ಹಾನಿಯನ್ನು ಅಳೆಯಲು ಸಹಕಾರಿ ಟ್ವಿಟರ್ ಡೇಟಾ

Srinivas Rao BV

ವಾಷಿಂಗ್ ಟನ್: ಟ್ವಿಟರ್ ಡೇಟಾ ಮೂಲಕ ನೈಸರ್ಗಿಕ ವಿಪತ್ತುಗಳಿಂದ ಉಂಟಾದ ಹಾನಿಯ ಪ್ರಮಾಣವನ್ನು ತಿಳಿಯಲು ಸಾಧ್ಯ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಅಮೆರಿಕಾದಲ್ಲಿ ನಾಲ್ಕು ವರ್ಷದ ಹಿಂದೆ ಸಂಭವಿಸಿದ್ದ  ಸ್ಯಾಂಡಿ ಚಂಡಮಾರುತದ ಮೊದಲು ಹಾಗೂ ಚಂಡಮಾರುತದ ವೇಳೆ ಟ್ವಿಟರ್ ಚಟುವಟಿಕೆಯನ್ನು ವಿಶ್ಲೇಷಣೆ ಮಾಡಿದ ನಂತರ ಸಂಶೋಧಕರು ಈ ಅಭಿಪ್ರಾಯ ತಿಳಿಸಿದ್ದಾರೆ.   
ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು ಹಾನಿ ಮಾಡಿರುವ ಚಂಡಮಾರುತ 'ಸ್ಯಾಂಡಿ'ಯಾಗಿದ್ದು, ಇದರಿಂದಾಗಿ ಸುಮಾರು 50 ,000 ಮಿಲಿಯನ್ ಡಾಲರ್ ನಷ್ಟು ಆರ್ಥಿಕ ಹೊರೆ ಉಂಟಾಗಿತ್ತು. ಚಂಡಮಾರುತದ ಬಗ್ಗೆ ಮಾಡಲಾಗಿದ್ದ ಟ್ವೀಟ್ ಗಳನ್ನು ಭೌಗೋಳಿಕ ಆಧಾರದಲ್ಲಿ ವಿಂಗಡಿಸಲಾಗಿದ್ದು, ಸುಮಾರು 50 ಮೆಟ್ರೋಪಾಲಿಟನ್ ನಗರಗಳಿಂದ ಟ್ವೀಟ್ ಗಳನ್ನು ಸಂಗ್ರಹಿಸಲಾಗಿತ್ತು.

ಚಂಡಮಾರುತದ ಬಗ್ಗೆ ಟ್ವೀಟ್  ಮಾಡುತ್ತಿದ್ದ ಸಾರ್ವಜನಿಕರು ನೈಸರ್ಗಿಕ ವಿಪತ್ತಿನಿಂದ ಉಂಟಾದ ಹಾನಿಯಾ ಬಗ್ಗೆಯೂ ಬರೆಯುತ್ತಿದ್ದರು. ಸಾರ್ವಜನಿಕರ ಟ್ವೀಟ್ ಗಳು ಹಾಗೂ ಚಂಡಮಾರುತದ ದಿಕ್ಕು ಈ ಎರಡರ ನಡುವೆ ಪರಸ್ಪರ ಸಂಬಂಧ ಕಲ್ಪಿಸಿರುವ ಸಂಶೋಧಕರು ಚಂಡಮಾರುತದಿಂಡ ಉಂಟಾಗಿರುವ ಹಾನಿಯ ಪ್ರಮಾಣವನ್ನು ಅರಿಯಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಕುರಿತಾದ ವರದಿ ಸೈನ್ಸ್ ಅಡ್ವಾನ್ಸಸ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.

SCROLL FOR NEXT