ವಿಜ್ಞಾನ-ತಂತ್ರಜ್ಞಾನ

ಐಒಎಸ್ 9 ಅಪ್ ಡೇಟ್ ಪರಿಣಾಮ ಕ್ರ್ಯಾಶ್ ಆಗುತ್ತಿರುವ ಆಪಲ್ ಡಿವೈಸ್ ಗಳು

Srinivas Rao BV

ಆಪಲ್ ಸಂಸ್ಥೆ ಇತ್ತೀಚೆಗೆ ತನ್ನ ಐ ಪ್ಯಾಡ್, ಐಫೋನ್ ಗಳ ಐಒಎಸ್ ನ್ನು ಅಪ್ ಡೇಟ್ ಮಾಡಿರುವುದು ಹೊಸ ತಾಂತ್ರಿಕ ಸಮಸ್ಯೆಯೊಂದಕ್ಕೆ ದಾರಿ ಮಾಡಿಕೊಟ್ಟಿದೆ.
ಕಳೆದ ವಾರ ಐಒಎಸ್ 9 .3 ಯನ್ನು ಪರಿಚಯಿಸಲಾಗಿತ್ತು. ಐಒಎಸ್ ನ್ನು ಅಪ್ ಡೇಟ್ ಮಾಡಿಕೊಂಡಿರುವ ಬಳಕೆದಾರರು ಗೂಗಲ್ ಕ್ರೋಮ್, ಇ-ಮೇಲ್ ಹಾಗೂ ಇನ್ನೂ ಕೆಲವು ಆಪ್ ಗಳನ್ನು ಬಳಕೆ ಮಾಡಬೇಕಾದರೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಿಎನ್ ಎನ್ ವೈರ್ ವರದಿ ಪ್ರಕಟಿಸಿದೆ.
ಮಾಧ್ಯಮದ ವರದಿ ಪ್ರಕಾರ ಲಿಂಕ್ ನ್ನು ಕ್ಲಿಕ್ಕಿಸಿದರೆ ವೆಬ್ ಸೈಟ್ ಕ್ರ್ಯಾಶ್ ಆಗುತ್ತಿದೆಯಂತೆ. ಆಪಲ್ ಸಂಸ್ಥೆಗೆ ತಾಂತ್ರಿಕ ನೆರವು ನೀಡುತ್ತಿರುವ ಪೋರಂ ಗಳು ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿವೆಯಂತೆ. ಆದರೆ ಸಮಸ್ಯೆ ಇರುವುದರ ಬಗ್ಗೆ ಆಪಲ್ ನಿಂದ ಅಧಿಕೃತ ಮಾಹಿತಿ ಇಲ್ಲ ಎಂದು ವರದಿ ತಿಳಿಸಿದೆ.  
ಕಳೆದ ವಾರ ಐಒಎಸ್ ನ್ನು ಅಪ್ ಡೇಟ್ ಮಾಡಿದ್ದ ಆಪಲ್, ಅಪ್ ಡೇಟ್ ಯಶಸ್ವಿಯಾಗಿದೆ ಎಂದು ತಿಳಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಮೊದಲ ಬಾರಿಗೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು.

SCROLL FOR NEXT