ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ರಿಯಾಕ್ಷನ್ ಎಮೋಜಿಗಳು ಬಳಕೆದಾರರನ್ನು ಆಕರ್ಷಿಸಲು ವಿಫಲ: ಅಧ್ಯಯನ

Srinivas Rao BV

ನ್ಯೂಯಾರ್ಕ್: ಫೇಸ್ ಬುಕ್ ನಲ್ಲಿ ನೀಡಲಾಗಿದ್ದ ಪ್ರತಿಕ್ರಿಯೆ ಬಟನ್ ಬಳಕೆದಾರರನ್ನು ಆಕರ್ಷಿಸಲು ವಿಫಲವಾಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಸಾಮಾಜಿಕ ಜಾಲತಾಣದ ಅನಾಲಿಸ್ಟಿಕ್ಸ್( ವಿಶ್ಲೇಷಣೆ) ನಡೆಸಿರುವ ಅಧ್ಯಯನದ ಪ್ರಕಾರ ರಿಯಾಕ್ಷನ್ ಎಮೋಜಿಗಳನ್ನು ಈ ವರೆಗೂ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿಲ್ಲ ಎಂಬುದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದ ಅನಾಲಿಟಿಕ್ಸ್ ನೀಡುವ ಸಂಸ್ಥೆ 130 ,000 ಪೋಸ್ಟ್ ಗಳನ್ನು ಪರಿಶೀಲನೆ ನಡೆಸಿದ್ದು ಈ ಪೈಕಿ ಅತಿ ಕಡಿಮೆ ಜನರು ತಮ್ಮ ಅಭಿಪ್ರಾಯ ತಿಳಿಸಲು ಪ್ರತಿಕ್ರಿಯೆ ಎಮೋಜಿಗಳನ್ನು ಬಳಸುತ್ತಾರೆ ಹಾಗೂ ಹೆಚ್ಚಿನವರು ಲೈಕ್ ಒತ್ತುತ್ತಾರೆ ಎಂಬುದನ್ನು ಕಂಡುಕೊಂಡಿದೆ.
ಫೇಸ್ ಬುಕ್ ಪೋಸ್ಟ್ ಗಳಿಗೆ ಪ್ರತಿಕ್ರಿಯೆ ನೀಡಲು ಲೈಕ್ ಆಯ್ಕೆಯೊಂದಿಗೆ ಫೆಬ್ರವರಿಯಿಂದ ಇನ್ನೂ ಐದು ಆಯ್ಕೆಗಳನ್ನು ನೀಡಲಾಗಿತ್ತು. ಆದರೆ ಇಂದಿಗೂ ಫೇಸ್ ಬುಕ್ ನಲ್ಲಿ  ಲೈಕ್, ಕಾಮೆಂಟ್, ಶೇರ್ ಮೂಲಕವೇ ಶೇ.97 ರಷ್ಟು   ಸಂವಹನ ನಡೆಯುತ್ತವೆ, ಇದರಲ್ಲೇ ಫೇಸ್ ಬುಕ್ ನೀಡಿರುವ ಹೊಸ ಆಯ್ಕೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ತಿಳಿಯುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ. ಇನ್ನು ಚಿತ್ರಗಳಿಗಿಂತ ಹೆಚ್ಚು ವಿಡಿಯೋಗಳಿಗೇ ಪ್ರತಿಕ್ರಿಯೆ ಎಮೋಜಿಗಳನ್ನು ಹೆಚ್ಚು ಬಳಸಗಾಗುತ್ತದೆಯಂತೆ.

SCROLL FOR NEXT