ವಿಜ್ಞಾನ-ತಂತ್ರಜ್ಞಾನ

ಇಸ್ರೋದ ಮತ್ತೊಂದು ಐತಿಹಾಸಿಕ ಹೆಜ್ಜೆ; ನಾಳೆ ಮರುಬಳಕೆ ಮಾಡಬಹುದಾದ ರಾಕೆಟ್ ಉಡಾವಣೆ

Srinivas Rao BV

ಚೆನ್ನೈ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ತರ ಮೈಲುಗಲ್ಲು ಸ್ಥಾಪಿಸಲು ಇಸ್ರೋ ಸಂಸ್ಥೆ ಸಜ್ಜಾಗಿದೆ. ಮಹಾತ್ವಾಕಾಂಕ್ಷಿ ಸಾಧನವಾದ ಮರುಬಳಕೆ ಮಾಡಬಹುದಾದ ರಾಕೆಟ್( ಉಪಗ್ರಹಗಳ ವಾಹಕ)ನ್ನು ಇಸ್ರೋ ಮೇ.23 ರಂದು ಪರೀಕ್ಷಾರ್ಥ ಉಡ್ಡಯನ ಮಾಡಲಿದೆ.

ರೆಕ್ಕೆಗಳನ್ನು ಹೊಂದಿರುವ ಹೊಸ ಮಾದರಿಯ ರಾಕೆಟ್  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೇಯಾಗಲಿದ್ದು, ಎಲ್ಲವೂ ಇಸ್ರೋ ನಿರೀಕ್ಷೆಯಂತೆಯೇ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಉಪಗ್ರಹ ಉಡಾವಣೆಯ ಖರ್ಚು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. 
ಪುನರ್ಬಳಕೆ ತಂತ್ರಜ್ಞಾನವನ್ನು ಒಳಗೊಂಡ ಆರ್ ಎಲ್ ವಿಟಿಡಿ ರಾಕೆಟ್ ನ್ನು ಮೇಕ್ ಇನ್ ಇಂಡಿಯಾದ ಭಾಗವಾಗಿ ದೇಶೀಯವಾಗಿ ನಿರ್ಮಿಸಲಾಗಿದೆ ಎಂಬುದು ಮತ್ತೊಂದು ವಿಶೇಷ. ಇಸ್ರೋ ಪ್ರಯತ್ನ ಯಶಸ್ವಿಯಾದರೆ ಮರುಬಳಕೆ ಉಡವಾಣಾ ವಾಹಕದಿಂದ, ಉಪಗ್ರಹ ಉಡಾವಣೆ ಪ್ರಕ್ರಿಯೆ ವೆಚ್ಚವನ್ನು ಹತ್ತುಪಟ್ಟಷ್ಟು ಕಡಿಮೆ ಮಾಡಬಹುದಾಗಿದೆ, ಅಷ್ಟೇ ಅಲ್ಲದೇ ಇದನ್ನು ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೂ ಉಪಯೋಗಿಸಬಹುದಾಗಿದೆ. ಪರೀಕ್ಷಾರ್ಥ ಉಡಾವಣೆಗೆ ಕೇವಲ 10 ನಿಮಿಷ ಕಾಲಾವಕಾಶ ಹಿಡಿಸಲಿದ್ದು ಇಸ್ರೋದ ಮತ್ತೊಂದು ಯಶಸ್ಸನ್ನು ದೇಶ ಎದುರುನೋಡುತಿದೆ. 

SCROLL FOR NEXT