ವಿಜ್ಞಾನ-ತಂತ್ರಜ್ಞಾನ

ಫೇಸ್ ರೆಕಗ್ನಿಷನ್ ಸಾಧನದೊಂದಿಗೆ ಚಾಟ್ ಡಿವೈಸ್ ಹೊರತರಲಿರುವ ಫೇಸ್ ಬುಕ್

Raghavendra Adiga
ಲಂಡನ್: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಬಳಕೆದಾರರ ಮುಖವನ್ನು  ಗುರುತಿಸಬಲ್ಲ ವೀಡಿಯೊ ಚಾಟ್ ಸಾಧನವನ್ನು ಹೊರತರಲು ಮುಂದಾಗಿದೆ.
ಉದ್ದೇಶಿತ ಸಾಧನವು ಅಮೆಜಾನ್ ಎಕೋ ಶೋ ಅನ್ನು ಹೋಲುತ್ತದೆ ಇದರಲ್ಲಿ ಕ್ಯಾಮರಾ, ಟಚ್ ಸ್ಕ್ರೀನ್ ಮತ್ತು ಸ್ಪೀಕರ್ಗಳು ಇರಲಿದೆ ಎಂದು ಸಂಸ್ಥೆಯ ವರದಿ ತಿಳಿಸಿದೆ.
ಆದರೆ ಉದ್ದೇಶಿತ ಸಾಧನವು ಗ್ರಾಹಕರಲ್ಲಿ ಭಯವನ್ನು ಉಂಟುಮಾಡಿದೆ, ಸಾಮಾಜಿಕ ಜಾಲತಾಣದಲ್ಲಿ ಇದನ್ನು ಬಳಸಿಕೊಂಳ್ಳುವುದ ಮೂಲಕ ಜಾಲತಾಣದಲ್ಲಿರುವವರ ಮೇಲೆ ಕಣ್ಣಿಡಬಹುದಾಗಿದೆ. ಈ ಕಾರಣದಿಂದ ಸಾಧನವು ಬಿಡುಗಡೆಯಾದಾಗ ಉದ್ದೇಶಿಸಿದ್ದ ಎಲ್ಲಾ ವೈಶಿಷ್ಟ್ಯಗಳನ್ನೂ ಹೊಂದಿರುತ್ತದೆಯೆ ಎಂಬ ಬಗ್ಗೆ ಅನುಮಾನವಿದೆ.
'ಅಲೋಹ' ಎನ್ನುವ ಕೋಡ್ ನೇಮ್ ನೊಂದಿಗೆ ಫೇಸ್ ಬುಕ್ ಈ ಸಾಧನವನ್ನು  ಮೇ 2018 ರಲ್ಲಿ ಬಿಡುಗಡೆ ಮಾಡಲಿದೆ. ಆದಾಗ್ಯೂ, ಇದು ಹೊಸ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ವಯೋವೃದ್ದರಿಗೆ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂವಹನ ನಡೆಸಲು ಈ ಸಾಧನ ಾನುಕೂಲವಾಗಲಿದೆ ಎನ್ನಲಾಗಿದೆ.
SCROLL FOR NEXT