ಭಾರತೀಯ ವಿಜ್ಞಾನಿಗಳಿಂದ ಸರಸ್ವತಿ ಗ್ಯಾಲಕ್ಸಿ ಪತ್ತೆ 
ವಿಜ್ಞಾನ-ತಂತ್ರಜ್ಞಾನ

ಭಾರತೀಯ ವಿಜ್ಞಾನಿಗಳಿಂದ 'ಸರಸ್ವತಿ' ಗ್ಯಾಲಕ್ಸಿ ಪತ್ತೆ: ಬ್ರಹ್ಮಾಂಡದಲ್ಲೇ ಅತ್ಯಂತ ಬೃಹತ್ ನಕ್ಷತ್ರಪುಂಜ

ಬ್ರಹ್ಮಾಂಡದ ಅತ್ಯಂತ ದೊಡ್ಡ ಗ್ಯಾಲಕ್ಸಿಯನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡಿದ್ದು, ನಕ್ಷತ್ರಪುಂಜದ ಸೂಪರ್ಕ್ಲಸ್ಟರ್ ಗೆ ಸರಸ್ವತಿ ಎಂಬ ಹೆಸರು ನೀಡಿದ್ದಾರೆ.

ಪುಣೆ: ಬ್ರಹ್ಮಾಂಡದ ಅತ್ಯಂತ ದೊಡ್ಡ ಗ್ಯಾಲಕ್ಸಿಯನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡಿದ್ದು, ನಕ್ಷತ್ರಪುಂಜದ ಸೂಪರ್ಕ್ಲಸ್ಟರ್ ಗೆ ಸರಸ್ವತಿ ಎಂಬ ಹೆಸರು ನೀಡಿದ್ದಾರೆ. 
ಸರಸ್ವತಿ ಗ್ಯಾಲಕ್ಸಿಯ ಜ್ಯೋತಿ ಈಗಷ್ಟೇ ನಮ್ಮನ್ನು ತಲುಪಿರುವುದರಿಂದ, ಈ ಗ್ಯಾಲಕ್ಸಿ ಹಿಂದೆ ಹೇಗಿತ್ತು ಎಂಬುದರ ಬಗ್ಗೆ ಇನ್ನು ಮುಂದಿನ ದಿನಗಳಲ್ಲಿ ಅಧ್ಯಯನ ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸರಸ್ವತಿ ಗ್ಯಾಲಕ್ಸಿ ಭೂಮಿಯಿಂದ 400 ಜ್ಯೋತಿರ್ವರ್ಷ ದೂರದಲ್ಲಿದ್ದು, ಅಪರೂಪದ ಗ್ಯಾಲಕ್ಸಿಯಾಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 
ಐಐಎಸ್ ಇಆರ್ ನ ಶಿಶಿರ್ ಸಾಂಖ್ಯಾಯನ್ ಈ ಬಗ್ಗೆ ಮಾತನಾಡಿದ್ದು, ಗ್ಯಾಲಕ್ಸಿಯನ್ನು ಪತ್ತೆ ಮಾಡಿ ಬರೆದಿರುವವರ ಪೈಕಿಯ ವಿಜ್ಞಾನಿಗಳೆಲ್ಲರೂ ಭಾರತೀಯರೇ ಆಗಿರುವುದರಿಂದ ಸರಸ್ವತಿ ಗ್ಯಾಲಕ್ಸಿಗೆ ಸಂಬಂಧಿಸಿದಂತಹ ಮೊದಲ ಬರಹ ಹಾಗೂ ಸಂಶೋಧನೆಗಳು ಭಾರತದ್ದೇ ಆಗಿರುತ್ತದೆ ಎಂದು ಹೇಳಿದ್ದಾರೆ. 
ಈಗ ಐಯುಸಿಎಎ ನಿರ್ದೇಶಕರಾಗಿರುವ ರಾಯ್ ಚೌಧರಿ 1989 ರಲ್ಲಿ ಗ್ಯಾಲಕ್ಸಿಗಳ ಸೂಪರ್ ಕ್ಲಸ್ಟರ್ ನ್ನು ಪತ್ತೆ ಮಾಡಿದ್ದರು. ಇದಾದ ಬಳಿಕ  ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಪಿಹೆಚ್ ಡಿ ಪದವಿ ಪಡೆಯಲು ಬ್ರಿಟನ್ ನಲ್ಲಿದ್ದರು. ಮಿಲ್ಕಿ ವೇ (ಕ್ಷೀರಪಥ ಅಥವಾ ಆಕಾಶಗಂಗೆ) ಗ್ಯಾಲಕ್ಸಿಗೆ ಸೇರಿರುವ ಭೂಮಿ ಲನಿಯಕೆ ಎಂಬ ಸೂಪರ್ ಕ್ಲಸ್ಟರ್ ನ ಭಾಗವೂ ಆಗಿದೆ. ಭೂಮಿಯಿಂದ 400 ಜ್ಯೋತಿರ್ವರ್ಷ ದೂರದಲ್ಲಿದೆ, ಅಂದರೆ ವಿಜ್ಞಾನಿಗಳು ಹಿಂದಿನದ್ದನ್ನು ಈಗ ಕಂಡಿದ್ದಾರೆ. ಇದರಿಂದ ಬ್ರಹ್ಮಾಂಡ ಹಲವು ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಅರಿಯಲು ಸಾಧ್ಯವಾಗಲಿದೆ ಎಂದು ಶಿಶಿರ್ ಸಾಂಖ್ಯಾಯನ್ ಹೇಳಿದ್ದಾರೆ. 
ಬ್ರಹ್ಮಾಂಡದ ವಿಸ್ತರಣೆಯ ಹಿಂದೆ ಡಾರ್ಕ್ ಎನರ್ಜಿ ಇದ್ದು, ಡಾರ್ಕ್ ಎನರ್ಜಿ ಬಗ್ಗೆ ತಿಳಿಯಲು ಸರಸ್ವತಿ ಗ್ಯಾಲಕ್ಸಿ ಸಹಾಯಕವಾಗಲಿದೆ ಎಂದು ಸಾಂಖ್ಯಾಯನ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT