ವಿಜ್ಞಾನ-ತಂತ್ರಜ್ಞಾನ

ಭಾರತದಲ್ಲಿ ಫೇಸ್ ಬುಕ್ ನಿಂದ ಡಿಜಿಟಲ್, ಸ್ಟಾರ್ಟ್ ಅಪ್ ತರಬೇತಿ ಕೇಂದ್ರಗಳಿಗೆ ಚಾಲನೆ

Srinivas Rao BV
ನವದೆಹಲಿ: ಡಿಜಿಟಲ್, ಸ್ಟಾರ್ಟ್ ಅಪ್ ತರಬೇತಿ ಕೇಂದ್ರಗಳಿಗೆ ಫೇಸ್ ಬುಕ್ ಚಾಲನೆ ನೀಡಿದೆ.  ಸಣ್ಣ ಉದ್ಯಮಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಫೇಸ್ ಬುಕ್ ಭಾರತದಲ್ಲಿ ಡಿಜಿಟಲ್ ತರಬೇತಿ, ಸ್ಟಾರ್ಟ್ ಅಪ್ ತರಬೇತಿ ಕೇಂದ್ರಗಳಿಗೆ ಚಾಲನೆ ನೀಡಿದೆ. 
2020 ರ ವೇಳೆಗೆ ಅರ್ಧ ಮಿಲಿಯನ್ ಗೂ ಹೆಚ್ಚಿನ ಜನರಿಗೆ ತರಬೇತಿ ನೀಡುವ ಗುರಿ ಹೊಂದಿರುವುದಾಗಿ ಹೇಳಿರುವ ಫೇಸ್ ಬುಕ್, ಡಿಜಿಟಲ್ ಎಕಾನಮಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತದ ಜನರಿಗೆ ತರಬೇತಿ ನೀಡಲಾಗುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ. 
ತರಬೇತಿಗಾಗಿ ಪಠ್ಯಗಳನ್ನು ತಯಾರಿಸಲು ಸಾಮಾಜಿಕ ಜಾಲತಾಣ ಸಂಸ್ಥೆ ಡಿಜಿಟಲ್ ವಿದ್ಯಾ, ಎಡಿಐಐ, ಧರ್ಮ ಲೈಫ್ ಹಾಗೂ ಸರ್ಕಾರದ ಸ್ಟಾರ್ಟ್ ಅಪ್ ಇಂಡಿಯಾ ಇನಿಷಿಯೇಟೀವ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿವೆ ಎಂದು ಹೇಳಿದ್ದಾರೆ. 
ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಾರಂಭವಾಗಿರುವ ತರಬೇತಿಯ ಮೂಲಕ ಡಿಜಿಟಲ್ ಕೌಶಲ್ಯ ಅಭಿವೃದ್ಧಿ ಪಡಿಸುವ ಉದ್ದೇಶ ಫೇಸ್ ಬುಕ್ ಹೊಂದಿದೆ. ಇದರಿಂದಾಗಿ ಯುವ ಉದ್ಯಮಿಗಳಿಗೆ ಆನ್ ಲೈನ್ ಜಗತ್ತಿನಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
SCROLL FOR NEXT