ವಿಜ್ಞಾನ-ತಂತ್ರಜ್ಞಾನ

ದೀಪಾವಳಿಯಂದು ಜಗಮಗಿಸುತ್ತಿದ್ದ ಭಾರತದ ದೃಶ್ಯ ಗಗನಯಾತ್ರಿ ಕ್ಯಾಮಾರಾದಲ್ಲಿ ಸೆರೆ!

Srinivas Rao BV
ನವದೆಹಲಿ: ದೀಪಾವಳಿಯ ಹಬ್ಬದಂದು ಇಡೀ ಭಾರತವೇ ದೀಪಗಳಿಂದ ಪ್ರಜ್ವಲಿಸುತ್ತಿರುತ್ತದೆ, ಇದೇ ದೃಶ್ಯವನ್ನು ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ. 
ಗಗನಯಾತ್ರಿ ಪಾವೊಲೊ ನೆಸ್ಪೋಲಿ ಎಂಬುವವರು ದೀಪಾವಳಿಯ ದಿನದಂದು ಅಂತರಿಕ್ಷದಿಂದ ಭಾರತದ ಚಿತ್ರವನ್ನು ಸೆರೆ ಹಿಡಿದಿದ್ದು, ಭಾರತ ದೀಪಗಳಿಂದ ಜಗಮಗಿಸುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಐಎಸ್) ದಿಂದ ಈ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ದೀಪಾವಳಿ, ಹಿಂದೂಗಳು ಆಚರಿಸುವ ದೀಪಗಳ ಹಬ್ಬ ಇಂದಿನಿಂದ ಪ್ರಾರಂಭವಾಗುತ್ತದೆ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಪಾವೊಲೊ ನೆಸ್ಪೋಲಿ ಟ್ವೀಟ್ ಮಾಡಿದ್ದಾರೆ. 
SCROLL FOR NEXT