ವಿಜ್ಞಾನ-ತಂತ್ರಜ್ಞಾನ

ರಕ್ತ ಪಡೆಯುವವರಿಗೆ ಫೇಸ್ ಬುಕ್ ನ ಹೊಸ ಟೂಲ್ ನೆರವು!

Srinivas Rao BV
ನವದೆಹಲಿ: ಭಾರತೀಯ ಬಳಕೆದಾರರಿಗೆ ಫೇಸ್ ಬುಕ್ ಹೊಸ ಟೂಲ್ ನ್ನು ಪರಿಚಯಿಸಲಿದ್ದು ರಕ್ತದಾನಿಗಳು ಹಾಗೂ ರಕ್ತ ಪಡೆಯುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. 
ಅಕ್ಟೋಬರ್ 1 ರಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನದ ದಿನಾಚರಣೆಯಂದು ಫೇಸ್ ಬುಕ್ ಭಾರತೀಯರಿಗೆ ಹೊಸ ಕೊಡುಗೆ ನೀಡಲಿರುವುದಾಗಿ ಫೇಸ್ ಬುಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರಕ್ತದಾನಕ್ಕೆ ಸಂಬಂಧಿಸಿದ ಟೂಲ್ ನ ಸಮರ್ಥ ಬಳಕೆಗಾಗಿ ಬಳಕೆದಾರರಿಗೆ ಫೇಸ್ ಬುಕ್ ನ್ಯೂಸ್ ಫೀಡ್ ನೀಡಲಿದ್ದು, ರಕ್ತದಾನ ಮಾಡುವ ಆಸಕ್ತರಿಗೆ ಟೈಮ್ ಲೈನ್ ನಲ್ಲಿ ಡೋನರ್ ಸ್ಟೇಟಸ್ ಅಪ್ಡೇಟ್ ಮಾಡಲು ಅವಕಾಶ ನೀಡಲಾಗುತ್ತಿದೆ. 
ಭಾರತದಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುತ್ತಿರುವ ಆಂಡ್ರಾಯ್ಡ್ ಹಾಗೂ ಮೊಬೈಲ್ ವೆಬ್ ಗಳಲ್ಲಿ ಈ ಆಯ್ಕೆಯನ್ನು ಮೊದಲು ನೀಡಲಾಗುತ್ತಿದೆ ಎಂದು ಫೇಸ್ ಬುಕ್ ನ ಪ್ರಾಡಕ್ಟ್ ಮ್ಯಾನೇಜರ್ ಹೇಮಾ ಬುಧರಾಜು ಹೇಳಿದ್ದಾರೆ. ರಕ್ತದ ಅಗತ್ಯವಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಮನವಿ ಸಲ್ಲಿಸಿ ಪೋಸ್ಟ್ ಅಪ್ಡೇಟ್ ಮಾಡಿದರೆ ಹತ್ತಿರದಲ್ಲೇ ಇರುವ ರಕ್ತದಾನಿಗಳ ಪಟ್ಟಿಯನ್ನು ಫೇಸ್ ಬುಕ್ ನೋಟಿಫೈ ಮಾಡಿ ಮಾಹಿತಿಯನ್ನು ರಕ್ತ ನೀಡಲು ಸಿದ್ಧವಿರುವವರಿಗೂ ತಲುಪಿಸಲಿದೆ ಎಂದು ಫೇಸ್ ಬುಕ್ ತಿಳಿಸಿದೆ. 
SCROLL FOR NEXT