ವಿಜ್ಞಾನ-ತಂತ್ರಜ್ಞಾನ

ಮಂಗಳ ಗ್ರಹದ ಮೊದಲ ನಿವಾಸಿ ಯಾರಾಗಲಿದ್ದಾರೆಂಬ ಮಾಹಿತಿ ಬಹಿರಂಗ!

Srinivas Rao BV
ಸ್ಯಾನ್ ಫ್ರಾನ್ಸಿಸ್ಕೊ: ಮಂಗಳ ಗ್ರಹದ ಮೊದಲ ನಿವಾಸಿ ಯಾರಾಗಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಟೆಕ್ ಬಿಲಿಯನೇರ್ ಹಾಗೂ ಸ್ಪೇಸ್ ಎಕ್ಸ್ ಸಿಇಒ ಈ ಬಗ್ಗೆ ಸುಳಿವು ನೀಡಿದ್ದಾರೆ.
ಕುಜ ಗ್ರಹದಲ್ಲಿ ಮಾನವನ ಬದಲು ಯಂತ್ರವೊಂದು ಮೊದಲ ನಿವಾಸಿಯಾಗುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಸ್ಪೇಸ್ ಎಕ್ಸ್ ನ ಸಿಇಒ ಎಲಾನ್ ಮಸ್ಕ್, ಶೇ.30 ರಷ್ಟು ಎಂಬ ಪ್ರತ್ಯುತ್ತರ ನೀಡಿದ್ದಾರೆ. ಅಂದರೆ ಕೃತಕ ಬುದ್ಧಿಮತ್ತೆ ಮಂಗಳಗ್ರಹದಲ್ಲಿನ ಮೊದಲ ನಿವಾಸಿಯಾಗಲಿದೆ ಎಂಬ ಸುಳಿವು ದೊರೆತಂತಾಗಿದೆ. 
ಎಲಾನ್ ಮಸ್ಕ್ ಅವರ ಪ್ರತ್ಯುತ್ತರದಿಂದ ಹಲವು ವಿಶ್ಲೇಷಣೆಗಳು ಹೊರಬರುತ್ತಿದ್ದು, ಕೃತಕ ಬುದ್ಧಿಮತ್ತೆ ಮಂಗಳನ ಮೊದಲ ನಿವಾಸಿಯಾಗಲಿದೆ ಎಂದು ದಿ ಗ್ರೀಕ್ ವರದಿ ಪ್ರಕಟಿಸಿದೆ.  ಈಗಿನ ಪರಿಸ್ಥಿತಿಗೆ ಮಂಗಳ ಗ್ರಹಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವುದು ಕಷ್ಟಸಾಧ್ಯವಾಗಿದೆ. 
ಬೇರೆ ಗ್ರಹಗಳಿಗೆ ಮಾನವ ಸಹಿತ ಯಾನ ಕೈಗೊಳ್ಳುವುದರ ಬಗ್ಗೆ ಸ್ಪೇಸ್ ಎಕ್ಸ್ ಹಾಗೂ ಸೈಂಟಿಫಿಕ್ ಬಾಡೀಸ್ ನಂತಹ ಸಂಸ್ಥೆಗಳು ಸಂಶೋಧನೆ ನಡೆಸುತ್ತಿದ್ದು, ತಾವು ಮಂಗಳ ಗ್ರಹಕ್ಕೆ ಹೋಗುವ ಸಾಧ್ಯತೆಗಳು ಶೇ.70 ರಷ್ಟು ಇದೆ ಎಂದು ಸ್ಪೇಸ್ ಎಕ್ಸ್ ಸಿಇಒ ಮಸ್ಕ್ ಈ ಹಿಂದೆ ಹೇಳಿದ್ದರು. 
SCROLL FOR NEXT