ವಿಜ್ಞಾನ-ತಂತ್ರಜ್ಞಾನ

ಈ ಸ್ಮಾರ್ಟ್ ಫೋನ್ ಗಳಲ್ಲಿ ಜ.1 ರಿಂದ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತ!

Srinivas Rao BV
ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಜ.1 ರಿಂದ ವಾಟ್ಸ್ ಆಪ್  ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳ್ಳಲಿದೆ. 
ನಿರ್ದಿಷ್ಟ ಮೊಬೈಲ್ ಆವೃತ್ತಿಗಳಲ್ಲಿ ತನ್ನ ಆಪ್ ಸಪೋರ್ಟ್ ನ್ನು ಮುಂದುವರೆಸುವುದಿಲ್ಲ ಎಂದು ಮೆಸೇಜಿಂಗ್ ಆಪ್ ಸಂಸ್ಥೆ ಕೆಲವು ವರ್ಷಗಳ ಹಿಂದೆಯೇ ತಿಳಿಸಿತ್ತು. ಅದರಂತೆಯೇ ಜ.1 ರಿಂದ  ಬ್ಲ್ಯಾಕ್ ಬೆರ್ರಿ 10, ಬ್ಲ್ಯಾಕ್ ಬೆರ್ರಿ ಒಎಸ್, ನೋಕಿಯಾ ಸಿಂಬಿಯಾನ್ ಎಸ್ 60, ವಿಂಡೋಸ್ ಫೋನ್ 8.0, ನೋಕಿಯಾ ಎಸ್ 40, ಆಂಡ್ರಾಯ್ಡ್ 2.3.7 ಆವೃತ್ತಿ, ಐಫೀನ್ ನ ಐಒಎಸ್ 7 ಹಾಗೂ ಅದಕ್ಕಿಂತ ಹಳೆಯದಾದ ಮಾದರಿಯ ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಣೆ ಜ.1 ರಿಂದ ಕಾರ್ಯನಿರ್ವಹಣೆ ನಿಲ್ಲಿಸಲಿದ್ದು 2020 ರ ವೇಳೆಗೆ ಎಲ್ಲಾ ಆವೃತ್ತಿಗಳಲ್ಲೂ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. 
ಡಿ.31 ರ ಬಳಿಕ ನೋಕಿಯಾ ಎಸ್ 40 ಫೋನ್ ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಜೂನ್ ನಲ್ಲಿಯೇ ಈ ಮೊಬೈಲ್ ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಬೇಕಾಗಿತ್ತಾದರೂ ಡಿಸೆಂಬರ್ ವರೆಗೆ ಅವಧಿಯನ್ನು ವಿಸ್ತರಿಸಲಾಗಿತ್ತು. ಇನ್ನು ಆಂದ್ರಾಯ್ಡ್ 2.3.7 ಹಾಗೂ ಅದಕ್ಕಿಂತ ಹಳೆಯದಾದ ಮಾಡೆಲ್ ಗಳ ಫೋನ್ ಗಳಲ್ಲಿ ವಾಟ್ಸ್ ಅಪ್ ಕಾರ್ಯನಿರ್ವಹಣೆ ಫೆ.1, 2020 ರ ವೇಳೆಗೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. 
SCROLL FOR NEXT