ವಿಜ್ಞಾನ-ತಂತ್ರಜ್ಞಾನ

ಯಾಹೂ ಮೆಸೆಂಜರ್ ಕಾರ್ಯನಿರ್ವಹಣೆ ಇಂದಿನಿಂದ ಸ್ಥಗಿತ: ಬಳಕೆದಾರರ ಖಾತೆ ಸ್ವಿರಿಲ್ ಆಪ್ ಗೆ ವರ್ಗಾವಣೆ

Srinivas Rao BV
ಯಾಹೂ ಸಂಸ್ಥೆ ತನ್ನ ಮೆಸೆಂಜರ್ ಆಪ್ ಕಾರ್ಯನಿರ್ವಹಣೆಯನ್ನು ಜುಲೈ.17 ಕ್ಕೆ ಅಂತ್ಯಗೊಳಿಸಿದ್ದು, ಮಧ್ಯರಾತ್ರಿಯಿಂದ ಮೆಸೆಂಜರ್ ಆಪ್ ಸ್ಥಗಿತಗೊಳ್ಳಲಿದೆ. 
ಈಗಾಗಲೇ ಯಾಹೂ ಸಂಸ್ಥೆಯ ಮೆಸೆಂಜರ್ ನ್ನು ಬಳಕೆ ಮಾಡುತ್ತಿರುವ ಗ್ರಾಹಕರ ಐಡಿಯನ್ನು ಹೊಸ ಮೆಸೇಜಿಂಗ್ ಆಪ್ ಸ್ಕ್ವಿರಿಲ್ ಗೆ ವರ್ಗಾವಣೆ ಮಾಡಲಾಗುತ್ತದೆ. ಸ್ವ್ಕಿರಿಲ್ ಆಪ್ ನಲ್ಲಿರುವವರು ಬೇರೆಯವರಿಗೂ ಆ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಲು ಆಹ್ವಾನ ಕಳಿಸಬಹುದಾಗಿದೆ, 
1998 ರಲ್ಲಿ ಪ್ರಥಮ ಬಾರಿಗೆ ಯಾಹೂ ಮೆಸೆಂಜರ್ ಕಾರ್ಯನಿರ್ವಹಣೆಯನ್ನು ಪ್ರಾರಂಭಿಸಿತ್ತು.   ಬಳಕೆದಾರರು ತಮ್ಮ ಚಾಟ್ ಹಿಸ್ಟರಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಂಸ್ಥೆ 6 ತಿಂಗಳ ಕಾಲಾವಕಾಶ ನೀಡಿದೆ. ಯಾಹೂ ಸಂಸ್ಥೆ ಮೇ  ತಿಂಗಳಿನಿಂದ ಸ್ಕ್ವಿರಿಲ್ ಆಪ್ ನ್ನು ಪರೀಕ್ಷೆ ಮಾಡುತ್ತಿದ್ದು, ಯಾಹೂ ಮೆಸೆಂಜರ್ ಸ್ಥಗಿತಗೊಳ್ಳುತ್ತಿದ್ದಂತೆಯೇ ನಂತರ ಸ್ಕ್ವಿರಿಲ್ ಆಪ್ ಅಸ್ತಿತ್ವಕ್ಕೆ ಬರಲಿದೆ. 
SCROLL FOR NEXT