ನವದೆಹಲಿ: ಸಾಮಾಜಿಕ ಮಾಧ್ಯಮವು ಸಮಕಾಲೀನ ಜಗತ್ತಿನ ಮುಂಚೂಣಿ ಮಾದ್ಯಮವಾಗಿದೆ.ಸಾಮಾನ್ಯ ಜನರ ಧ್ವನಿಯನ್ನು ಎತ್ತರಿಸಲು ಮತ್ತು ಅವರನ್ನು ಅವರ ಜನಾಂಗ, ಗುಂಪಿನವರೊಡನೆ ಬೆಸೆಯಲು ಇದು ಅತ್ಯಂತ ಸಹಕಾರಿ ಎನಿಸಿದೆ.
ಯುವಜನರಲ್ಲಿ ಅರ್ಧದಷ್ಟು ಮಂದಿ ಸಾಮಾಜಿಕ ತಾಣಗಳನ್ನು ಬಳಸುತ್ತಾರೆ. ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಮೆಸೇಜಿಂಗ್ ಅಪ್ಲಿಕೇಷನ್ ಗಳನ್ನು ಬಳಸಿ ಇತರರೊಂದಿಗೆ ಸಂಪರ್ಕ ಸಾಧಿಸಿಕೊಳ್ಳುತ್ತಾರೆ. 2017ರ ಮೂರನೇ ತ್ರೈಮಾಸಿಕದಲ್ಲಿ ಯೂಟ್ಯೂಬ್ ಮತ್ತು ಫೇಸ್ ಬುಕ್ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾಗಿ ಗುರುತಿಸಿಕೊಂಡಿದೆ.ಸುಮಾರು ಶೇ.30ರಷ್ಟು ಮಂದಿ ಈ ತಾಣಗಳ ಬಳಕೆ ಮಾಡುತ್ತಾರೆ.
ಇನ್ನು ವಾಟ್ಸ್ ಅಪ್ ಬಳಕೆದಾರರ ಪ್ರಮಾಣ ಶೇ. 28 ಆಗಿದ್ದು ಇದು ತೃತೀಯ ಸ್ಥಾನದಲ್ಲಿದೆ. ಇನ್ನು 2017 ರ ಏಪ್ರಿಲ್ ನಲ್ಲಿ ನಡೆದ ಜಾಗತಿಕ ಫೇಸ್ ಬುಕ್ ಬಳಕೆದಾರರ ಗಣತಿಯಂತೆ ಸುಮಾರು ಶೇ. 11ರಷ್ಟು ಭಾರತೀಯರು ಫೇಸ್ ಬುಕ್ ಖಾತೆ ಬಳಕೆ ಮಾಡುತ್ತಾರೆ. ಈ ಮೂಲಕ ಭಾರತ ಫೇಸ್ ಬುಕ್ ತಾಣ ಬಳಕೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.
ಈ ರೀತಿಯಲ್ಲಿ ಸಾಮಾಜಿಕ ಮಾಧ್ಯಯಮಗಳತ್ತ ದಿನನಿತ್ಯ ಸಾವಿರಾರು ಮಂದಿ ಆಕರ್ಷಿತರಾಗುತ್ತಿದ್ದು ಇಂತಹವರಿಗಾಗಿಯೇ ಕೆಲವು ಸಾಮಾಜಿಕ ತಾಣಗಳ ಪರಿಚಯವನ್ನು ನಾವಿಲ್ಲಿ ನೀಡಿದ್ದೇವೆ.
ಫೇಸ್ ಮೋಜಿ ತನ್ನ ಬಳಕೆದಾರರಿಗಾಗಿ 1200 ಕ್ಕಿಂತ ಹೆಚ್ಚು ಎಮೊಜಿಗಳು, 1000+ ಸ್ಟಿಕ್ಕರ್ ಗಳು, 50 ಕ್ಕೂ ಹೆಚ್ಚು ಕಾವಮೋಜಿಗಳು, ಲೆಕ್ಕವಿಲ್ಲದಷ್ತು ಜಿಫ್ (GIF) ಮತ್ತು ಸ್ಕಿನ್ ಗಳನ್ನು ಹೊಂದಿದೆ. ಬಳಕೆದಾರರು ತಮ್ಮ ದೈನಂದಿನ ಸಂಬಾಷಣೆಗಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ.
ವಾಸ್ತವದಲ್ಲಿ ಫೇಸ್ ಮೋಜಿ ಕೀಬೋರ್ಡ್ 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಚಾಟ್ ಮಾಡುವ ಸೌಲಭ್ಯ ಹೊಂದಿದೆ,ಜತೆಗೆ ಇದೇ ಅಪ್ಲಿಕೇಷನ್ ನಲ್ಲಿ ಎಮೋಜಿ ಸೌಲಭ್ಯವನ್ನು ಸಹ ನೀಡಲಿದೆ. ಇದರಿಂದ ಬಳಕೆದಾರರು ಸುಲಭವಾಗಿ, ಸರಾಗವಾಗಿ ತಮ್ಮ ಭಾವನೆ ವ್ಯಕ್ತಗೊಳಿಸಬಹುದಾಗಿದೆ. ಸಧ್ಯ ಫೇಸ್ ಮೋಜಿಯು ಭಾರತದ 22 ಸ್ಥಳೀಯ ಉಪಭಾಷೆಗಳನ್ನು ಬಳಕೆಗೆ ಒದಗಿಸುತ್ತದೆ. ಲಾದೆ ಆಂಗ್ಲ ಹಾಗೂ ಹಿಂದಿ ಭಾಷೆಯ ಕೀಬೋರ್ಡ್ ಇನ್ಪುಇಟ್ ಸಹ ಲಭ್ಯವಿದೆ.ಇದುವರೆಗೆ ಫೇಸ್ ಮೋಜಿ ಕೀಬೋರ್ಡ್ ಜಾಗತಿಕವಾಗಿ 30 ದಶಲಕ್ಷ ಡೌನ್ ಲೋಡ್ ಗಳನ್ನು ಕಂಡಿದೆ.
ಮ್ಯೂಸಿಕಲಿ ಅಪ್ಲಿಕೇಷನ್ ನಿಮಗೆ ಎಡಿಟಿಂಗ್ ಸಾಧನಗಳೊಡನೆ ಎಲ್ಲಾ ಉತ್ತಮ ಗುಣಲಕ್ಷಣಗಳ ಚಿಕ್ಕ ವೀಡಿಯೋ ತಯಾರಿಸಲು ನೆರವಾಗಲಿದೆ. ಅಲ್ಲದೆ ಸಾಮಾಜಿಕ ಮಾದ್ಯಮಗಳಲ್ಲಿ ನೀವು ತಯಾರು ಮಾಡಿದ ವೀಡಿಯೋವನ್ನು ಹಂಚಿಕೊಳ್ಳುವುದಕ್ಕೆ ಸಹ ಇದು ನೆರವು ಒದಗಿಸುತ್ತದೆ. ಇದರ ಮೂಲಕ ನೀವು ಸಂಗೀತ ಮತ್ತು ಧ್ವನಿ ಗ್ರಂಥಾಲಯ, ಸ್ಟಿಕ್ಕರ್ ಗಳು, ಫೇಸ್ ಫಿಲ್ಟರ್ಸ್, ಬ್ಯೂಟಿ ಎಫೆಕ್ಟ್ಸ್, ಇವೆಲ್ಲವನ್ನು ಸಹ ಬಳಸಿಕೊಳ್ಳಬಹುದು.
ಇದರಲ್ಲಿರುವ ಸಾವಿರಾರು ವೀಡಿಯೋ ತುಣುಕು, ಧ್ವನಿ ಪರಿನಾಮವನ್ನು ಬಳಸಿಕೊಂಡು ನಿಮ್ಮದೆವೀಡಿಯೊಗಳನ್ನು ಸುಲಭವಾಗಿ ಸಂಪಾದಿಸಿ! ಇದರಿಂದ ನೀವುಗಳು ಪಾಪ್, ರಾಕ್, ರ್ಯಾಪ್, ಲೆಕ್ಟ್ರಾನಿಕ್, ಆರ್ & ಬಿ, ಕಂಟ್ರಿ, ಮತ್ತು ಇನ್ನೂ ಅನೇಕ ಬಗೆಯ ಹಾಡುಗಳ ಸಂಕಲನ ನಡೆಸಬಹುದು.
ಇದು ವಾಟ್ಸ್ ಅಪ್ ಗೆ ನೇರ ಸ್ಪರ್ಧೆ ಒಡ್ಡುವ ಪ್ರಥಮ ಅಪ್ಲಿಕೇಷನ್ ಆಗಿದೆ.ನಿಮಗೆ ವಾಟ್ಸ್ ಅಪ್ ಗಿಂತ ಅಥವಾ ಅದರಂತೆಯೇ ಇರಬಲ್ಲ ಇನ್ನೊಂದು ಅಪ್ಲಿಕೇಷನ್ ಬೇಕೆನಿಸಿದರೆ ನೀವು ಖಂಡಿತಾ ಡ್ಯುಯಲ್ ಸ್ಪೇಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.ಇದು ವಾಟ್ಸ್ ಅಪ್ ನಂತೆಯೇ ಸ್ಥಿರತೆ ಒದಗಿಸುತ್ತದೆ ಎಂದು ಖಚಿತವಾಗಿ ಹೇಳಬಹುದು. ನೀವು ಇದರಲ್ಲಿ ಒಂದೇ ಫೋನ್ ನಲ್ಲಿ ಹಲವು ಖಾತೆಗಳನ್ನು ಬಳಸಬಹುದು, ಒಂದೇ ಕಡೆ ಎಲ್ಲವನ್ನೂ ಸಂಗ್ರಹಿಸಿಡಬಹುದು.ತ್ತು ವಿಭಿನ್ನ ಖಾತೆಗಳ ಸಂದೇಶ ಸ್ವಾಗತ ಮತ್ತು ಡೇಟಾ ಶೇಖರಣಾ ಸಮಸ್ಯೆ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ. ಎಲ್ಲಾ ಖಾತೆಗಳೂ ಸ್ವತಂತ್ರವಾಗಿ ಕೆಲಸ ಮಾಡುವುದರಿಂದ ಒಂದಕ್ಕೊಂದು ಅಡ್ಡಿ ಆಗುವುದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos