ವಿಜ್ಞಾನ-ತಂತ್ರಜ್ಞಾನ

ತಂತ್ರಜ್ಞಾನ: ಕಾಣೆಯಾದ ಮಕ್ಕಳ ಪತ್ತೆಗೆ ಮೊಬೈಲ್ ಅಪ್ಲಿಕೇಷನ್

Raghavendra Adiga
ನವದೆಹಲಿ: ಮನೆಯಿಂದ ತಪ್ಪಿಸಿಕೊಂಡ ಮಕ್ಕಳ ಪತ್ತೆಗೆ ಇನ್ನು ನಿಮ್ಮ ಸ್ಮಾರ್ಟ್ ಫೋನ್ ನೆರವಾಗಲಿದೆ. ಕಾಣೆಯಾದ ಮಕ್ಕಳ ಪತ್ತೆಗೆ ಸಹಕಾರಿಯಾಗುವಂತೆ ಸ್ಮಾರ್ಟ್ ಮೊಬೈಲ್ ಅಪ್ಲಿಕೇಷನ್ ಒಂದನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಹಾಗೂ ನೊಬೆಲ್ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಇಂದು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.
ಕೈಲಾಶ್ ಸತ್ಯಾರ್ಥಿ ಅವರ ಬಚ್ಚನ್ ಬಚಾವೋ ಆಂದೋಲನ (ಬಿಬಿಎ) ಹಾಗೂ ಐಟಿ ಸಂಸ್ಥೆ ಕ್ಯಾಪ್ ಜೆಮಿನಿ ಜಂಟಿಯಾಗಿ ಈ ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸಿದೆ. ಈ ವಿಶೇಷ ಅಪ್ಲಿಕೇಷನ್ ಗೆ ’ರಿಯನೈಟ್’ ಎಂದು ಣಾಮಕರಣ ಮಾಡಲಾಗಿದೆ.
ಕಾಣೆಯಾದ ಮಕ್ಕಳು ಪ್ರತಿಯೊಂದು ಅವರ ಪೋಷಕ ಪಾಲಿಗೆ ಆಶಯ ಹಾಗೂ ಕನಸುಗಳಾಗಿರುತ್ತಾರೆ. ಅವರನ್ನು ಕೇವಲ ಸಂಖ್ಯೆಗಳಲ್ಲಿ ಗುರುತಿಸುವ ಕ್ರಮ ಸರಿಯಲ್ಲ ಎಂದು ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ.
ಈ ಮೊಬೈಲ್ ಅಪ್ಲಿಕೇಷನ್ ಕಾಣೆಯಾದ ಮಕ್ಕಳು ಮತ್ತೆ ಪೋಷಕರ ಮಡಿಸ್ಲು ಸೇರಲು ನೆರವಾಗಲಿದೆ. ಮುಖಗಳ ಹೋಲಿಕೆಯಿಂದ ಮಕ್ಕಳ ಪತ್ತೆಗೆ ನೆರವಾಗುವ ಈ ಅಪ್ಲಿಕೇಷನ್ ಕಾಣೆಯಾದ ಮಕ್ಕಳ ಭಾವಚಿತ್ರವನ್ನು ಡಾಟಾ ಕೋಶದೊಡನೆ ಹೋಲಿಕೆಗಾಗಿ ಅಮೇಜಾನ್ ವೆಬ್ ತಾಣದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಈ ಅಪ್ಲಿಕೇಷನ್ ದೆಹಲಿಯಲ್ಲಿ ದಾಖಲಾದ ಕಾಣೆಯಾದ ಮಕ್ಕಳ ಕುರಿತಂತೆ ಪ್ರಕರಣದ ವಿವರಣಾತ್ಮಕ ದತ್ತಾಂಶವನ್ನು ಹೊಂದಿರುತ್ತದೆ.
ಇದೊಂದು ಬಹುಪಯೋಗಿ ಅಪ್ಲಿಕೇಷನ್ ಆಗಿದ್ದು ಕಾಣೆಯಾದ ಮಕ್ಕಳ ಪೋಷಕರು ಮಕ್ಕಳ ಭಾವಚಿತ್ರ, ವಿವರ ಅಪ್ ಲೋಡ್ ಮಾಡಿದರೆ ಅಂತಹವರ ಪತ್ತೆಗೆ ನೆರವಾಗಲಿದೆ.
ಭಾರತದಲ್ಲಿ ಪ್ರತಿ ವರ್ಷ ಸುಮಾರು 40 ಸಾವಿರಕ್ಕೆ ಹೆಚ್ಚು ಮಕ್ಕಳು ಕಾಣೆಯಾಗುತ್ತಿದ್ದು ಅವರಲ್ಲಿ ಕೇವಲ 11 ಸಾವಿರ ಮಕ್ಕಳನ್ನು ರಕ್ಷಣೆ ಮಾಡಲಾಗುತ್ತಿದೆ.
SCROLL FOR NEXT