ವಿಜ್ಞಾನ-ತಂತ್ರಜ್ಞಾನ

ಸ್ಮಾರ್ಟ್ ಫೋನ್ ನಿಂದ ಪರಿಸರಕ್ಕೆ ಹಾನಿ: ಅಧ್ಯಯನ ವರದಿ

Srinivas Rao BV
ಟೊರೊಂಟೊ: 2040 ರ ವೇಳೇಗೆ  ಸ್ಮಾರ್ಟ್ ಫೋನ್ ಗಳು ಹಾಗೂ ಡಾಟಾ ಕೇಂದ್ರಗಳು ಪರಿಸರಕ್ಕೆ ಅತ್ಯಂತ ಹೆಚ್ಚಿನ ಹಾನಿ ಉಂಟುಮಾಡಲಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಲೆಟ್ ಡೆಸ್ಕ್ ಟಾಪ್ ನ ಕಾರ್ಬನ್ ಫೂಟ್ ಪ್ರಿಂಟ್ ನ ಬಗ್ಗೆ ಅಧ್ಯಯನ ನಡೆಸಿರುವ ಸಂಶೋಧಕರು ಜರ್ನಲ್ ಆಫ್ ಕ್ಲೀನರ್ ಪ್ರೊಡಕ್ಷನ್   ನಲ್ಲಿ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು, ಸ್ಮಾರ್ಟ್ ಫೋನ್ ಗಳು ಪರಿಸರಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತಿವೆ ಎಂದು ಹೇಳಿದ್ದಾರೆ. 
ಈಗ ಸ್ಮಾರ್ಟ್ ಫೋನ್ ಗಳು, ಗ್ಯಾಡ್ಜೆಟ್ ಗಳಿಂದ ಉಂಟಾಗುತ್ತಿರುವ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಶೇ.1.5 ರಷ್ಟಿದೆ. ಇದೇ ಮಾದರಿಯಲ್ಲಿ ಪರಿಸ್ಥಿತಿ ಮುಂದುವರೆದಿದ್ದರೆ 2040  ವೇಳೆಗೆ ಶೇ.14 ರಷ್ಟಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.  ಪ್ರತಿಯೊಂದು ಟೆಕ್ಸ್ಟ್ ಸಂದೇಶ, ಫೋನ್ ಕರೆ, ವಿಡಿಯೋ, ಡೌನ್ ಲೋಡ್ ಗಳಿಗೂ ಡಾಟಾ ಕೇಂದ್ರಗಳು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತದೆ.  2020 ರ ವೇಳೆಗೆ ಸ್ಮಾರ್ಟ್ ಫೋನ್ ಗಳಿಂದ ಹೆಚ್ಚು ಪರಿಸರಕ್ಕೆ ಹಾನಿ ಉಂಟಾಗಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 
SCROLL FOR NEXT