ವಿಜ್ಞಾನ-ತಂತ್ರಜ್ಞಾನ

ರಿಲಯನ್ಸ್ ಜಿಯೋ ಫೋನ್‌ನಲ್ಲಿ ಶೀಘ್ರದಲ್ಲೇ ವಾಟ್ಸ್ಆ್ಯಪ್

Vishwanath S
ಸ್ಯಾನ್ ಫ್ರಾನ್ಸಿಸ್ಕೋ: ಕಡಿಮೆ ಬೆಲೆಯ ಸ್ಮಾರ್ಟ್ ಫೀಚರ್ ಜಿಯೋ ಫೋನಿನಲ್ಲಿ ವಾಟ್ಸ್ಆ್ಯಪ್ ಅಳವಡಿಸುವ ಕಾರ್ಯವೂ ಭರದಿಂದ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಜಿಯೋ ಫೋನ್ ನಲ್ಲಿ ವಾಟ್ಸ್ಆ್ಯಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. 
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಹೊಂದಿರುವ ಜಿಯೋ ಫೋನ್ ನಲ್ಲಿ ಫೇಸ್ ಬುಕ್ ಬಳಕೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಇದೀಗ ವಾಟ್ಸ್ಆ್ಯಪ್ ಅನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದೆ. 
ಜಿಯೋ ಫೋನ್ ನಲ್ಲಿ ವಾಟ್ಸ್ಆ್ಯಪ್ ಬಳಕೆ ಮಾಡಿಕೊಳ್ಳಲು ಸಹಾಯವಾಗುವಂತೆ ನೂತನ ಲೈಟ್ ವಾಟ್ಸ್ಆ್ಯಪ್ ಅನ್ನು ವಾಟ್ಸ್ಆ್ಯಪ್ ಡೆವಲಪರ್ ಗಳು ವಿನ್ಯಾಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. 
ಫೈಯರ್ ಫಾಕ್ಸ್ Kaiosಗಾಗಿ ವಾಟ್ಸ್ಆ್ಯಪ್ ಅನ್ನು ಅಭಿವೃದ್ಧಿ ಮಾಡಿದ್ದು ಈಗಾಗಲೇ ಬೀಟಾ ಹಂತದಲ್ಲಿ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಇದು ಯಶಸ್ವಿಯಾದ ನಂತರ ಜಿಯೋ ಫೋನ್ ಬಳಕೆದಾರರು ವಾಟ್ಸ್ಆ್ಯಪ್ ಅನ್ನು ತಮ್ಮ ಫೋನಿನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. 
ಮುಂದಿನ ಡಿಸೆಂಬರ್ 31ರಂದು ನೋಕಿಯಾ ಎ40 ಮೊಬೈಲ್ ಫೋನ್ ಅನ್ನು ಬೆಂಬಲಿಸುವ ವಾಟ್ಸ್ಆ್ಯಪ್ ಅನ್ನು ನಿಲ್ಲಿಸಲಾಗುವುದು. ಆನಂತರ KaiSOಗೆ ಬೆಂಬಲಿಸುವ ಸಾಧನವನ್ನು ತಯಾರಿಸಲಾಗುವುದು ಎಂದು ವೆಬ್ ಸೈಟ್ ತಿಳಿಸಿದೆ. 
ಜಿಯೋ ಫೋನ್ ನಲ್ಲಿ 2.4 ಇಂಚಿನ QVGV ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512 ಎಂಬಿ ರ್ಯಾಮ್ ಜೊತೆಗೆ 4ಜಿಬಿ ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎಂಬ ಖ್ಯಾತಿಗೆ ಜಿಯೋ ಫೋನ್ ಪಾತ್ರವಾಗಿದೆ. 
SCROLL FOR NEXT