ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಮೋಟೊರೋಲಾ ಒನ್ ಪವರ್ ವಿಶೇಷತೆಗಳೇನು?: ಇಲ್ಲಿದೆ ಮಾಹಿತಿ
ಲೆನೊವೋ ಒಡೆತನದ ಮೋಟೊರೋಲಾ ಸಂಸ್ಥೆ ಮೋಟೊರೊಲಾ ಒನ್ ಪವರ್ ಮೊಬೈಲನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಮೋಟೊರೊಲಾ ಒನ್ ಪವರ್ ನ್ನು 2018 ರ ಆಗಸ್ಟ್ ನಲ್ಲಿ ಐಎಫ್ಎ ನಲ್ಲಿ ಮೋಟೊರೊಲಾ ಒನ್ ಜೊತೆಗೆ ಬಿಡುಗಡೆ ಮಾಡಲಾಗಿತ್ತು. ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿರುವ ಈ ಮೊಬೈಲ್ ನ ಬೆಲೆ 15,000 ರೂಪಾಯಿಯಾಗಿರಲಿದೆ.
ಮೋಟೊರೋಲಾ ಒನ್ ಪವರ್ 6.2 ಇಂಚ್ (17.5 ಸೆ.ಮೀ) 19:9 ಮ್ಯಾಕ್ಸ್ ವಿಷನ್ ಪೂರ್ಣ ಹೆಚ್ ಡಿ + ಡಿಸ್ಪ್ಲೆ, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 1.8GHz ಆಕ್ಟಾ-ಕೋರ್ ಪ್ರೊಸೆಸರ್ ನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನಗಳ ವರೆಗೆ ಬ್ಯಾಟರಿ ಉಪಯೋಗಿಸಬಹುದು ಎಂದು ಮೋಟೋರೊಲಾ ಸಂಸ್ಥೆ ತಿಳಿಸಿದ್ದು, 64 ಜಿಬಿ ಮೆಮೊರಿ ಇದ್ದು, 256 ಜಿಬಿ ವರೆಗೆ ವಿಸ್ತರಿಸಬಹುದಾಗಿದೆ.
ಅವಳಿ ಹಿಂಬದಿ ಕ್ಯಾಮರಾ ಹಾಗೂ 12 ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಸೌಲಭ್ಯವನ್ನು ಮೋಟೋರೋಲಾ ಒನ್ ಪವರ್ ನಲ್ಲಿ ನೀಡಲಾಗಿದೆ.