ಕೆ. ಶಿವನ್ 
ವಿಜ್ಞಾನ-ತಂತ್ರಜ್ಞಾನ

ಡಿಸೆಂಬರ್ 2021ರ ವೇಳೆಗೆ ಭಾರತ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ: ಇಸ್ರೋ

ಭಾರತ ಡಿಸೆಂಬರ್ 2021ರ ವೇಳೆಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಗುರಿಯನ್ನು ತಲುಪುತ್ತದೆ ಎಂದು...

ಬೆಂಗಳೂರು: ಭಾರತ ಡಿಸೆಂಬರ್ 2021ರ ವೇಳೆಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಗುರಿಯನ್ನು ತಲುಪುತ್ತದೆ ಎಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥರು ಹೇಳಿದ್ದಾರೆ.
ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯ ಮೂಲಕ ಮಾನವರನ್ನು ಸ್ವತಂತ್ರವಾಗಿ ಬಾಹ್ಯಾಕಾಶಕ್ಕೆ ಕಳಿಸಲು ಇಸ್ರೋ ಸಿದ್ದತೆ ನಡೆಸಿದೆ.ಇದರೊಡನೆ ಭಾರತ ಈ ಸಾಧನೆ ಮಾಡುವ ಜಗತ್ತಿನ ನಾಲ್ಕನೇ ರಾಷ್ಟ್ರವಾಗಲಿದೆ.
"ಗಗನಯಾನಕ್ಕೆ ಭಾರತದಲ್ಲಿ ಪ್ರಾರಂಭಿಕ ತರಬೇತಿ ನೀಡಲಾಗುತ್ತದೆ.ಬಳಿಕ ರಷ್ಯಾದಲ್ಲಿ ಪ್ರಾಯೋಗಿಕ ತರಬೇತಿ ಇರಲಿದೆ.ಇನ್ನು ತಂಡದಲ್ಲಿ ಮಹಿಳಾ ಗಗನಯಾತ್ರಿಗಳು ಸಹ ಇರಬೇಕೆನ್ನುವುದು ನಮ್ಮ ಗುರಿಯಾಗಿದೆ" ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಕಳೆದ ತಿಂಗಳು ಕೇಂದ್ರ ಗೃಹ ಸಚಿವ ರವಿಶಂಕರ್ ಸಾದ್ ಗಗನಯಾನ್ಭಾಗವಾಗಿ 2022 ರೊಳಗೆ ಮೂರು ಭಾರತೀಯ ಗಗನಯಾತ್ರಿಗಳನ್ನು ಏಳು ದಿನಗಳ ವರೆಗೆ ಬಾಹ್ಯಾಕಾಶಕ್ಕೆ ಕಳಿಸುತ್ತದೆ ಎಂದು ಘೋಷಿಸಿದ್ದರು. ಇದಕ್ಕಾಗಿ ಕೇಂದ್ರ ಸಂಪುಟ 10,000 ಕೋಟಿ ರೂ.ಮೀಸಲಿಡಲು ನಿರ್ಧರಿಸಿತ್ತು.
ಇದೇ ವೇಳೆ ಶಿವನ್ ಈ ವರ್ಷ ಏಪ್ರಿಲ್ ಮದ್ಯಭಾಗದಲ್ಲಿ ಭಾರತದ ಎರಡನೇ ಚಂದ್ರಯಾನ ಯೋಜನೆ ಚಂದ್ರಯಾನ -2 ಕಾರ್ಯಗತವಾಗಲಿದೆ ಎಂದು ಘೋಷಿಸಿದ್ದಾರೆ. ಇದು ಹತ್ತು ವರ್ಷಗಳ ಹಿಂದಿನ ಚಂದ್ರಯಾನ  -1  ಕಾರ್ಯಾಚರಣೆಯ ಮುಂದುವರಿದ ಆವೃತ್ತಿಯಾಗಿದ್ದು ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ