ವಿಜ್ಞಾನ-ತಂತ್ರಜ್ಞಾನ

ಸೂಕ್ತ ಉಡುಪುಗಳ ಕೊರತೆ ಹಿನ್ನೆಲೆ, ನಾಸಾದ ಮಹಿಳೆಯರ ಐತಿಹಾಸಿಕ ಬಾಹ್ಯಾಕಾಶಯಾನ ರದ್ದು

Raghavendra Adiga
ವಾಷಿಂಗ್ಟನ್: ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಮಹಿಳಾ ಗಗನಯಾತ್ರಿಗಳಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರುವಾಗ ಧರಿಸಬಹುದಾದ ಉತ್ತಮ ದರ್ಜೆಯ ಉಡುಗೆಗಳು ಇಲ್ಲದ ಕಾರಣ ತನ್ನ ಇಬ್ಬರು ಮಹಿಳಾ ಗಗನಯಾತ್ರಿಗಳ ಯೋಜಿತ ಐತಿಹಾಸಿಕ ಬಾಹ್ಯಾಕಾಶ  ಯಾನವನ್ನು ರದ್ದು ಮಾಡಿದೆ.
ಸದ್ಯ ಕ್ರಿಸ್ಟಿನಾ ಕೋಚ್  ಅನ್ನೆ ಮ್ಯಾಕ್ ಕ್ಲೈನ್ ಗೆ ಬದಲಾಗಿ ಕ್ ಹೇಗ್ ಹ್ಜತೆ ಬಾಹ್ಯಾಕಾಶ ಕೇಂದ್ರದ ಕೆಲಸದಲ್ಲಿ ತೊಡಗಲಿದ್ದಾರೆ. ಒಂದೊಮ್ಮೆ ಕೋಚ್ ಹಾಗೂ ಮ್ಯಾಕ್ ಕ್ಲೈನ್ ಜತೆಯಾಗಿ ಬಾಹ್ಯಾಕಾಶ ಯಾನ ಕೈಗೊಂಡಿದ್ದರೆ ಅದೊಂದು ಐತಿಹಾಸಿಕ ಮಹಿಳಾ ಗಗನಯಾತ್ರಿಗಳ ಬಾಹ್ಯಾಕಾಶ ಯಾನ ಎನಿಸಿಕೊಳ್ಳುತ್ತಿತ್ತು.
ಈ ವರೆಗೆ ಕೇವಲ ಪುರುಷರು ಅಥವಾ ಸ್ತ್ರಿ, ಪುರುಷರಿಬ್ಬರನ್ನೂ ಒಳಗೊಂಡ ತಂಡ ಬಾಹ್ಯಾಕಾಶ ನಿಲ್ದಾಣದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವು. ಆದರೆ ಇದುವರೆಗೆ ಸಂಪೂರ್ಣ ಮಹಿಳೆಯರೇ ಇರುವ ಯಾವ ತಂಡವೂ ನಿಲ್ದಾಣದ ಕೆಲಸದಲ್ಲಿ ಭಾಗವಹಿಸಿಲ್ಲ.
ಮ್ಯಾಕ್ ಕ್ಲೈನ್  ಇತ್ತೀಚೆಗೆ ಹೇಗ್ ಜತೆಗೆ ಕೆಲಸ ಮಾಡುವ ವೇಳೆ ತನ್ನ ಉಡುಪಿನಲ್ಲಿನ ಕೆಲ ದೋಷಗಳನ್ನು ಕಂಡುಕೊಂಡಿದ್ದರು. ಇದೀಗ ಮಾರ್ಚ್ 29ರ ಒಳಗೆ ಬದಲಿ ಉಡುಪು ತಯಾರಿಸಿ ಕೊಡುವುದು ಅಸಾಧ್ಯವಾಗಿರುವ ಕಾರಣ ಈ ಐತಿಹಾಸಿಕ ಗಗನಯಾನವನ್ನು ರದ್ದು ಮಾಡಲಾಗಿದೆ ಎಂದು ನಾಸಾ ಹೇಳಿದೆ.
SCROLL FOR NEXT