ವಿಜ್ಞಾನ-ತಂತ್ರಜ್ಞಾನ

ಭಾರತದಲ್ಲಿ ಕೌಟುಂಬಿಕ ಹಿಂಸಾಚಾರವನ್ನು ನಿಗ್ರಹಿಸಲು ಟ್ವಿಟರ್ ನಿಂದ ಪ್ರತ್ಯೇಕ ಟೂಲ್ ಲಾಂಚ್

Raghavendra Adiga

ನವದೆಹಲಿ: ಭಾರತದಲ್ಲಿನ ಲಾಕ್ ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸಾಚಾರಗಳು ಹೆಚ್ಚುತ್ತಿದ್ದು ಇದನ್ನು ನಿಭಾಯಿಸಲು ಸಾಮಾಜಿಕ ತಾಣ ಟ್ವಿಟರ್ ಕೌಟುಂಬಿಕ ಹಿಂಸಾಚಾರದದ್ ಬಗೆಗಿನ ಹುಡುಕಾಟಕ್ಕೆ ಯೋಗ್ಯವಾದ ಪ್ರತ್ಯೇಕ ಪ್ರಾಂಪ್ಟ್ ಟೂಲ್ ಒಂದನ್ನು ಪ್ರಾರಂಭಿಸಿದೆ.

ಮಹಿಳೆಯರ  ಸುರಕ್ಷತೆ ಕಡೆಗೆ ತಮ್ಮ ಪ್ರಯತ್ನ ಹೆಚ್ಚುವಂತೆ ಮಾಡಲು ಟ್ವಿಟರ್ ಭಾರತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ ಸಹಭಾಗಿತ್ವವನ್ನು ಹೊಂದಿದೆ

ಸರ್ಚ್ ಪ್ರಾಂಪ್ಟ್ ಐಒಎಸ್, ಆಂಡ್ರಾಯ್ಡ್ ಮತ್ತು ಭಾರತದಲ್ಲಿ ಮೊಬೈಲ್.ಟ್ವಿಟರ್.ಕಾಂನಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್ -19 ಪ್ರಾರಂಭವಾದಾಗಿನಿಂದ, ಭಾರತ ಮತ್ತು ಜಗತ್ತಿನಾದ್ಯಂತ ಮಹಿಳೆಯರು ಮತ್ತು, ಬಾಲಕಿಯರ  ಮೇಲಿನ ದೌರ್ಜನ್ಯ ತೀವ್ರಗೊಂಡಿದೆ ಎಂದು ಅಂಕಿಅಂಶಗಳು ಹೇಳಿದೆ. "ಕೌಟುಂಬಿಕ ಹಿಂಸಾಚಾರದ ಸಂಕೀರ್ಣ ಸಮಸ್ಯೆಯನ್ನು ಎದುರಿಸಲು ಸಾರ್ವಜನಿಕರು, ಸರ್ಕಾರ, ನ್‌ಜಿಒಗಳ ಸಹಯೋಗವು ಪ್ರಮುಖವಾದುದು ಎಂದು ನಾವು  ಅರಿತಿದ್ದೇವೆ. ಈ ಸರ್ಚ್ ಪ್ರಾಂಪ್ಟ್ ಮೂಲಕ ವಿಶ್ವಾಸಾರ್ಹ ಮಾಹಿತಿಯನ್ನು ಪ್ರವೇಶಿಸಿ  ಹಿಂಸಾಚಾರದ ವಿರುದ್ಧ ಸಹಾಯ ಪಡೆಯುವವ ಸಲುವಾಗಿ ಸಂತ್ರಸ್ಥರ ಮೊದಲ ಹೆಜ್ಜೆಯಾಗಿದೆ" ಎಂದು ಟ್ವಿಟರ್ ಭಾರತ ಮತ್ತು ದಕ್ಷಿಣ ಏಷ್ಯಾ ಸಾರ್ವಜನಿಕ ನೀತಿ ವಿಭಾಗದ ನಿರ್ದೇಕಿ ಮಹಿಮಾ ಕೌಲ್ ಹೇಳಿದ್ದಾರೆ.

ಕೌಟುಂಬಿಕ ಹಿಂಸಾಚಾರದ ಸಮಸ್ಯೆಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಯಾರಾದರೂ ಹುಡುಕಿದಾಗ, ಪ್ರಾಂಪ್ಟ್ ಅವುಗಳನ್ನು ಟ್ವಿಟರ್‌ನಲ್ಲಿ ಲಭ್ಯವಿರುವ ಸಂಬಂಧಿತ ಮಾಹಿತಿ ಮತ್ತು ಸಹಾಯದ ಮೂಲಗಳಿಗೆ ನಿರ್ದೇಶಿಸುತ್ತದೆ.ಇದು ಟ್ವಿಟರ್‌ನ #ThereIsHelp ಪ್ರಾಂಪ್ಟ್‌ನ ವಿಸ್ತರಣೆಯಾಗಿದ್ದು, ನಿರ್ಣಾಯಕ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ, ವಿಶ್ವಾಸಾರ್ಹ ಮಾಹಿತಿಯನ್ನು ಕಂಡುಹಿಡಿಯಲು ಇದು ಸಹಾಯವಾಗಿದೆ.ಎಲ್ಲಾ ಸಂಬಂಧಿತ ಕೀವರ್ಡ್ ಗಳು  ಪೂರ್ವಭಾವಿ ಹುಡುಕಾಟ ಪ್ರಾಂಪ್ಟ್ ಅನ್ನು ಪ್ರೊಡ್ಯೂಸ್ ಮಾಡಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಲಲು ಟ್ವಿಟರ್ ತಂಡವು ಈ ವೈಶಿಷ್ಟ್ಯವನ್ನು ನಿಯಮಿತವಾಗಿ ಪರಿಶೀಲಿಸುತ್ತದೆ ಎಂದು ಕಂಪನಿ ತಿಳಿಸಿದೆ.

SCROLL FOR NEXT