ವಿಜ್ಞಾನ-ತಂತ್ರಜ್ಞಾನ

ಅಜ್ಞಾತ ಮೂಲದಿಂದ ನಿಯಮಿತ ಕ್ಷಿಪ್ರ ರೇಡಿಯೊ ಸ್ಫೋಟ ಗುರುತಿಸಿದ ಖಗೋಳ ಶಾಸ್ತ್ರಜ್ಞರು

Srinivas Rao BV

ಅಜ್ಞಾತ ಮೂಲದಿಂದ ನಿಯಮಿತವಾಗಿ ಕ್ಷಿಪ್ರ ರೇಡಿಯೋ ಸ್ಫೋಟಗಳನ್ನು ಖಗೋಳ ಶಾಸ್ತ್ರಜ್ಞರು ಗುರುತಿಸಿದ್ದಾರೆ.

ಸಂಶೋಧಕರು ವಿಚಿತ್ರವಾದ ನಿರಂತರವಾಗಿ ಕೇಳುವ ಫಾಸ್ಟ್ ರೇಡಿಯೋ ಬರ್ಸ್ಟ್ಸ್ (ಎಫ್ಆರ್ ಬಿ) ಗಳು ನಮ್ಮ ಗ್ಯಾಲೆಕ್ಸಿಯಿಂದ ಹೊರಗೆ 500 ಮಿಲಿಯನ್ ಬೆಳಕಿನ ವರ್ಷದಷ್ಟು ದೂರದಲ್ಲಿ ಇದು ಕಂಡುಬಂದಿದೆ. ಕೆಲವು ಮಿಲಿಸೆಕೆಂಡುಗಳ ಕಾಲವಷ್ಟೇ ಉಳಿಯುವ ಇವುಗಳು ಮತ್ತು ಆ ಸಮಯದಲ್ಲಿ ಶಕ್ತಿಯು ಬಿಡುಗಡೆಯಾಗಿ ಗ್ಯಾಲೆಕ್ಸಿಯಲ್ಲೇ ಅತ್ಯಂತ ಪ್ರಕಾಶಮಾನವಾಗಿರುತ್ತವೆ. ಇದು ಖಗೋಳ ವಿಜ್ಞಾನಿಗಳಿಗೆ ಅತ್ಯಂತ ಕುತೂಹಲ ಮೂಡಿಸುತ್ತಿದೆ. 

2007 ರಲ್ಲಿ ಎಫ್ಆರ್ ಬಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಈ ವರೆಗೂ ಇಂತಹ 100 ಎಫ್ ಆರ್ ಬಿಯನ್ನು ಪತ್ತೆ ಮಾಡಲಾಗಿದೆ.
ಈಗ ಪತ್ತೆಯಾಗಿರುವ ಕ್ಷಿಪ್ರ ರೇಡಿಯೊ ಸ್ಫೋಟಗಳು ಬೇರೆಯದ್ದಕ್ಕಿಂತ ಭಿನ್ನವಾಗಿದ್ದು, ಈ ಕ್ಷಿಪ್ರ ರೇಡಿಯೋ ಸ್ಫೋಟಗಳಿಗೆ ಕಾರಣವಾಗಿರುವ ಅಂಶವನ್ನು ತಿಳಿದುಕೊಳ್ಳಲು ಸಹಕಾರಿ ಎನ್ನುತ್ತಿದ್ದಾರೆ ಖಗೋಳ ಶಾಸ್ತ್ರಜ್ಞರು.

SCROLL FOR NEXT