5ಜಿ ಸೇವೆ 
ವಿಜ್ಞಾನ-ತಂತ್ರಜ್ಞಾನ

ಅಕ್ಟೋಬರ್ 1 ರಿಂದ 5ಜಿ ಸೇವೆಗಳಿಗೆ ಚಾಲನೆ: 4ಜಿ ಫೋನ್ ನಲ್ಲಿ 5ಜಿ ಸೇವೆ ಹೇಗೆ? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ದೇಶದಲ್ಲಿ ಹೈಸ್ಪೀಡ್ 5ಜಿ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಹೌದು... ಈ ಸಂದರ್ಭ ಗ್ರಾಹಕರ ಮನದಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ದೇಶದಲ್ಲಿ ಹೈಸ್ಪೀಡ್ 5ಜಿ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಹೌದು... ಈ ಸಂದರ್ಭ ಗ್ರಾಹಕರ ಮನದಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

1. 5G ಬಂದಾಗ, 3G ಮತ್ತು 4G ಫೋನ್‌ಗಳು ಧ್ವನಿ ಕರೆ ಮತ್ತು ಡೇಟಾದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆಯೇ?
ಹೌದು, ಅಸ್ತಿತ್ವದಲ್ಲಿರುವ ಎಲ್ಲಾ ಫೋನ್ ಧ್ವನಿ ಕರೆಗಳು ಮತ್ತು ಡೇಟಾದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಆಪರೇಟರ್‌ ತಮ್ಮ 2G ಅಥವಾ 3G ನೆಟ್‌ವರ್ಕ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದಾಗ ಮಾತ್ರ ಈ ಸೇವೆಗಳು ನಿಲ್ಲುತ್ತವೆ.

2. ಹಾಗಾದರೆ, ಅಂತಹ ಬಳಕೆದಾರರಿಗೆ ಯಾವ ಬದಲಾವಣೆಗಳು ಕಂಡುಬರುತ್ತವೆ? ಅವರ ಸಾಧನ 4G ಆಗಿದ್ದರೂ ಡೌನ್‌ಲೋಡ್ ಮತ್ತು ಅಪ್‌ಲೋಡ್‌ ವೇಗ ಹೆಚ್ಚುತ್ತದೆಯೇ?
ನೀವು 5G ಅನ್ನು 5G ಇರುವ ಸಾಧನದಲ್ಲಿ ಮಾತ್ರ ಇದನ್ನು ಅನುಭವಿಸಬಹುದು. ಈಗಾಗಲೇ ಇರುವ 4G ಸಾಧನಗಳಲ್ಲಿ 5G ಲಭ್ಯವಿರುವುದಿಲ್ಲ.

3. 4G ನೆಟ್‌ವರ್ಕ್ ಮುಂದುವರಿಯುತ್ತದೆಯೇ?
ಹೌದು, 4G ನೆಟ್‌ವರ್ಕ್ ಮುಂದುವರಿಯುತ್ತದೆ.

4. 5G ಸಾಧನಗಳ ಲಭ್ಯತೆ ಹೇಗಿದೆ?
ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರಸ್ತುತ ಸುಮಾರು 50 ಮಿಲಿಯನ್ 5G ಸಾಧನಗಳಿವೆ. ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.

5. 5G ಮೊಬೈಲ್ ಫೋನ್‌ಗಳು ಸುಲಭವಾಗಿ ಲಭ್ಯವಿದೆಯೇ?
ಹೌದು. 5G ಫೋನ್‌ಗಳ ಹಲವು ಮಾದರಿಗಳು ಸುಲಭವಾಗಿ ಲಭ್ಯವಿವೆ. ಆಪಲ್‌ ಐಫೋನ್‌, ಸ್ಯಾಮ್‌ಸಂಗ್‌, ಒನ್‌ಪ್ಲಸ್‌ ಇತ್ಯಾದಿ ಪ್ರಮುಖ ಬ್ರ್ಯಾಂಡ್‌ಗಳ ಸಾಧನಗಳು 5G ಫೋನ್‌ಗಳನ್ನು ಮಾರಾಟ ಮಾಡುತ್ತಿವೆ.

6. 4G (ಜಿಯೋಫೈ) ಯಲ್ಲಿ ನಮಗೆ ಲಭ್ಯವಿರುವ ಹಾಗೆ 5G ಯಲ್ಲೂ ಸಣ್ಣ ವೈಫೈ ಸಾಧನಗಳು ಇರುತ್ತವೆಯೇ?
ಈಗಾಗಲೆ ರಿಲಯನ್ಸ್ ಘೋಷಿಸಿರುವಂತೆ, ಜಿಯೋ ಏರ್ ಫೈಬರ್ ಸಾಧನವನ್ನು ಜಿಯೋ ಹೊರತರಲಿದೆ. ಇದು ಪೋರ್ಟಬಲ್ 5G ಸಾಧನವಾಗಿದೆ.

7. ಪ್ರಸ್ತುತ 4G ಫೋನ್‌ಗಳನ್ನು 5G ಗೆ ಅಪ್‌ಗ್ರೇಡ್ ಮಾಡಬಹುದೇ?
ಇಲ್ಲ, ಪ್ರಸ್ತುತ 4G ಫೋನ್‌ಗಳನ್ನು 5G ಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ.

8. ಬಳಕೆದಾರರು ಅಷ್ಟು ದೊಡ್ಡ ಪ್ರಮಾಣದಲ್ಲಿ ಡೇಟಾ ಬಳಕೆಯನ್ನು ಹೊಂದಿಲ್ಲದಿದ್ದರೆ, 4G ಫೋನ್ ಬಿಟ್ಟು ಹೊಸ 5G ಫೋನ್ ಖರೀದಿಸಬೇಕೆ?
5G ಹೆಚ್ಚಿನ ವೇಗ ಮತ್ತು ಕಡಿಮೆ ಲೇಟೆನ್ಸಿಯ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ. ಇದು ಡಿಜಿಟಲ್ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಸಹಾಯ ಮಾಡುತ್ತದೆ.

9. 5G ಯಾರಿಗೆ ಹೆಚ್ಚು ಅನುಕೂಲ? ಯಾವ ರೀತಿಯ ಬಳಕೆಗೆ ಇದು ಹೆಚ್ಚು ಸೂಕ್ತವಾಗಿದೆ?
5G ಯ ಅನುಕೂಲಗಳಿಂದ ಎಲ್ಲಾ ವಿಭಾಗದ ಗ್ರಾಹಕರು ಪ್ರಯೋಜನ ಪಡೆಯುತ್ತಾರೆ. ಮನೆಯಲ್ಲಿ 5G ಬಳಸುವ ಗ್ರಾಹಕರು ಜಿಯೋ ಏರ್ ಫೈಬರ್ ಸಾಧನ ಅಥವಾ 5G ಹ್ಯಾಂಡ್‌ಸೆಟ್ ಬಳಸಿ ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯಬಹುದು. 5G ಉದ್ಯಮ 4.0 ಪರಿಹಾರಗಳನ್ನು ಬಳಸಬಹುದು. ಸಾಮಾಜಿಕ ವಲಯದಲ್ಲಿ ಇದು ಕೃಷಿ, ಆರೋಗ್ಯ, ಶಿಕ್ಷಣ, ಇತ್ಯಾದಿಗಳಿಗೆ ನೆರವಾಗಬಹುದು.

10. 5G ವಿತರಣೆ ಹೇಗೆ ನಡೆಯುತ್ತದೆ? ದೊಡ್ಡ ಟವರ್‌ಗಳ ಬದಲಿಗೆ ಸಣ್ಣ ಪೋಸ್ಟ್‌ಗಳು (ಮೈಕ್ರೋ ಸೈಟ್‌ಗಳು) ಇರುತ್ತವೆಯೇ? ಅವು ಹೇಗೆ ಕಾರ್ಯನಿರ್ವಹಿಸುತ್ತವೆ?
ಅಸ್ತಿತ್ವದಲ್ಲಿರುವ ಟವರ್‌ಗಳಲ್ಲಿ 5G ಉಪಕರಣಗಳನ್ನು ಅಳವಡಿಸಬಹುದಾಗಿದೆ. ಇನ್ನು, ರಸ್ತೆ ಬದಿಗಳಲ್ಲೂ 5G ಉಪಕರಣಗಳ ಅಳವಡಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT