ಸ್ವರ್ಗ AI image
ವಿಜ್ಞಾನ-ತಂತ್ರಜ್ಞಾನ

ನಿಜವಾದ ಸ್ವರ್ಗ ಎಲ್ಲಿದೆ ಗೊತ್ತಾ? ಇಲ್ಲಿದೆಯಂತೆ ನೋಡಿ ಅಮರಲೋಕ! ಭೂಮಿಯಿಂದ ಎಷ್ಟು ದೂರ?

ಬಾಹ್ಯಾಕಾಶದ ಅಂಚಿನಲ್ಲಿ ದೈವಿಕ ಲೋಕ! ಬಾಲ್ಯದಿಂದಲೂ ಸ್ವರ್ಗ ಅನ್ನೋದು ಹಲವರ ಬರಿಗಣ್ಣಿನ ಆಸೆ. ಕೆಲವರು ಈ ಸ್ವರ್ಗ ಆಕಾಶದ ಮೇಲಿದೆ ಎನ್ನುತಾರೆ. ಆದರೆ, ಇನ್ನೂ ಕೆಲವರು ಸ್ವರ್ಗ ಆಕಾಶದ ಮೇಲೆ ಅಲ್ಲ ಬದಲಾಗಿ, ಈ ಭೂಮಿಯ ಮೀಲಿದೆ ಎಂದು ಹೇಳುತ್ತಾರೆ! ಆದರೆ, ನಿಜವಾಗಲೂ ಈ ಅಮರಲೋಕ ಎಲ್ಲಿದೆ ಗೊತ್ತಾ?

ಬಾಲ್ಯದಿಂದಲೂ ಸ್ವರ್ಗ ಅನ್ನೋದು ಹಲವರ ಬರಿಗಣ್ಣಿನ ಆಸೆ. ಕೆಲವರು ಈ ಸ್ವರ್ಗ ಆಕಾಶದ ಮೇಲಿದೆ ಎನ್ನುತಾರೆ. ಆದರೆ, ಇನ್ನೂ ಕೆಲವರು ಸ್ವರ್ಗ ಆಕಾಶದ ಮೇಲೆ ಅಲ್ಲ ಬದಲಾಗಿ, ಈ ಭೂಮಿಯ ಮೀಲಿದೆ ಎಂದು ಹೇಳುತ್ತಾರೆ! ಆದರೆ, ನಿಜವಾಗಲೂ ಈ ಸ್ವರ್ಗ ಎಲ್ಲಿದೆ? ಹೇಗಿದೆ? ಅನ್ನೋದು ಯಾರಿಗೂ ಗೊತ್ತಿರಲಿಲ್ಲ! ಕೊನೆಗೂ, ಇದಕ್ಕೆ ಅಮೆರಿಕ ಮೂಲದ ನಾಸಾ ವಿಜ್ಞಾನಿ ಉತ್ತರ ಕುಂಡು ಹಿಡಿದಿದ್ದಾರೆ. ಅರ್ಥಾತ್, ಸ್ವರ್ಗ ಕಂಡು ಹಿಡಿದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸ್ವರ್ಗ ಎನ್ನುವುದು ಕೇವಲ ಕಲ್ಪನೆಯೇ ಅಥವಾ ನಿಜವಾಗಿಯೂ ಈ ಅನಂತ ಬ್ರಹ್ಮಾಂಡದ ಯಾವುದೋ ಒಂದು ಮೂಲೆಯಲ್ಲಿ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆ ಶತಮಾನಗಳಿಂದಲೂ ಮಾನವನ ಕುತೂಹಲವನ್ನು ಕೆರಳಿಸುತ್ತಲೇ ಇದೆ. ಧಾರ್ಮಿಕ ಗ್ರಂಥಗಳಲ್ಲಿ ಬಣ್ಣಿಸಲಾದ ಆ ಪವಿತ್ರ ಲೋಕದ ಬಗ್ಗೆ ಈಗ ವಿಜ್ಞಾನ ಮತ್ತು ಖಗೋಳಶಾಸ್ತ್ರದ ಹಿನ್ನೆಲೆಯಲ್ಲಿ ಅಚ್ಚರಿಯ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮೈಕೆಲ್ ಗಿಲ್ಲೆನ್ ಅವರು ಮಂಡಿಸಿರುವ ಹೊಸ ಸಿದ್ಧಾಂತವು ಜಗತ್ತಿನಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

ಭೂಮಿಯಿಂದ ಎಷ್ಟು ದೂರದಲ್ಲಿದೆ ಈ ಸ್ವರ್ಗ?

ಡಾ. ಮೈಕೆಲ್ ಗಿಲ್ಲೆನ್ ಅವರ ಪ್ರಕಾರ, ಸ್ವರ್ಗವು ನಮ್ಮ ಬ್ರಹ್ಮಾಂಡದ ಕಾಸ್ಮಿಕ್ ಹಾರಿಜಾನ್ ಎಂಬ ಗಡಿಯಾಚೆಗೆ ನೆಲೆಸಿದೆ. ಈ ಜಾಗವು ಭೂಮಿಯಿಂದ ಸುಮಾರು 273 ಬಿಲಿಯನ್ ಟ್ರಿಲಿಯನ್ ಮೈಲುಗಳಷ್ಟು ಅಗಾಧ ದೂರದಲ್ಲಿದೆ. ಕಾಸ್ಮಿಕ್ ಹಾರಿಜಾನ್ ಎಂದರೆ ಬ್ರಹ್ಮಾಂಡದ ಅಂತಹ ಒಂದು ಅಂಚು, ಅಲ್ಲಿಂದ ಹೊರಟ ಬೆಳಕು ಕೂಡ ಬ್ರಹ್ಮಾಂಡದ 13.8 ಶತಕೋಟಿ ವರ್ಷಗಳ ಇತಿಹಾಸದಲ್ಲಿ ಭೂಮಿಯನ್ನು ತಲುಪಲು ಸಾಧ್ಯವಾಗಿಲ್ಲ. ಅಂದರೆ ಈ ಗಡಿಯಾಚೆಗಿನ ಜಗತ್ತು ಮಾನವನ ಕಣ್ಣಿಗೆ ಸಂಪೂರ್ಣವಾಗಿ ಅಗೋಚರವಾಗಿದೆ. ಬೈಬಲ್ ಸೇರಿದಂತೆ ಹಲವು ಧಾರ್ಮಿಕ ಗ್ರಂಥಗಳಲ್ಲಿ ಸ್ವರ್ಗವನ್ನು ಮಾನವನಿಗೆ ತಲುಪಲು ಅಸಾಧ್ಯವಾದ ದೈವಿಕ ಲೋಕ ಎಂದು ಉಲ್ಲೇಖಿಸಲಾಗಿದ್ದು, ಈ ಖಗೋಳ ಸಿದ್ಧಾಂತವು ಅದಕ್ಕೆ ಹೋಲಿಕೆಯಾಗುವಂತಿದೆ.

ಹಾಗಾದರೆ, ಈ ಗ್ರಹವನ್ನು 'ಸ್ವರ್ಗ' ಎನ್ನಲು ಕಾರಣಗಳೇನು?

ವಿಜ್ಞಾನಿಗಳ ಪ್ರಕಾರ ಸ್ವರ್ಗವು ನಮಗೆ ಗೋಚರಿಸದಿರಲು ಅಗಾಧ ದೂರ ಮತ್ತು ಬೆಳಕಿನ ವೇಗವೇ ಮುಖ್ಯ ಕಾರಣ. ನಮ್ಮ ಬ್ರಹ್ಮಾಂಡವು ಬೆಳಕಿನ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ನಿರಂತರವಾಗಿ ವಿಸ್ತರಿಸುತ್ತಿದೆ. ಈ ಅಗಾಧ ಅಂತರದಿಂದಾಗಿ ಅಲ್ಲಿಂದ ಹೊರಡುವ ಯಾವುದೇ ಬೆಳಕಿನ ಕಿರಣ ಅಥವಾ ತರಂಗಗಳು ಭೂಮಿಯ ವೀಕ್ಷಣಾ ವ್ಯಾಪ್ತಿಯನ್ನು ತಲುಪಲು ಸಾಧ್ಯವಿಲ್ಲ. ಆದ್ದರಿಂದ ಮಾನವನಿಗೆ ಭೌತಿಕವಾಗಿ ಈ ಪ್ರದೇಶವನ್ನು ತಲುಪುವುದು ಅಸಾಧ್ಯದ ಮಾತು.

ಅದರಲ್ಲೂ, ಐನ್‌ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತ ಮತ್ತು ಆಧುನಿಕ ವಿಶ್ವವಿಜ್ಞಾನವನ್ನು ಆಧರಿಸಿ ರೂಪಿಸಲಾಗಿರುವ ಈ ವಾದವು ವಿಜ್ಞಾನ ಮತ್ತು ನಂಬಿಕೆಯ ನಡುವೆ ಹೊಸ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ವಿಜ್ಞಾನ ಮತ್ತು ಆಧ್ಯಾತ್ಮದ ಅದ್ಭುತ ಸಮನ್ವಯವೆಂದು ಕರೆದರೆ, ಹಲವು ವಿಜ್ಞಾನಿಗಳು ಇದನ್ನು ಕೇವಲ ಸೈದ್ಧಾಂತಿಕ ಕಲ್ಪನೆ ಎಂದು ಪರಿಗಣಿಸಿದ್ದಾರೆ. ಆದಾಗ್ಯೂ ದೇವರ ಶಾಶ್ವತ ನೆಲೆ ಬ್ರಹ್ಮಾಂಡದ ಒಂದು ಭಾಗವಾಗಿರಬಹುದು ಎಂಬ ಸಾಧ್ಯತೆಯು ಜನರ ಕುತೂಹಲವನ್ನು ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನ್ಯೂ ಟೀಂ ಘೋಷಣೆ; ರಾಮ್ ಮಾಧವ್, ಸ್ಮೃತಿ ಜೊತೆ ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ!

D Boss, D Boss ಜೈಕಾರಕ್ಕೆ ಗರಂ: ನಿಮ್ಮಂತವರಿಂದಲೇ ತೊಂದರೆ ಆಗ್ತೀರೋದು, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಬುದ್ಧಿ ಮಾತು, Video!

ಪ್ರಧಾನಿ ಮೋದಿ ಭೇಟಿ ಮಾಡಿದ ದೇವೇಂದ್ರ ಫಡ್ನವೀಸ್; ಮಹಾರಾಷ್ಟ್ರ ರಾಜಕೀಯಕ್ಕೆ ಗುಡ್ ಬೈ?

ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲರ ಮುಖಕ್ಕೆ ಮಸಿ ಬಳಿದ ವಿದ್ಯಾರ್ಥಿನಿಯರು!

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!