ವಿಶೇಷ

ಮಾರ್ಕ್ ಸಂತತಿ

ಈ ಗುಂಡಿ ಹಗಲೂ ಇರುತ್ತದೆ. ರಾತ್ರಿಯೂ ಕಾಣುತ್ತದೆ. ಗುಂಡಿ ಕಂಡಾಗಲೆಲ್ಲ ಬಿದ್ದರೆ ಮನಸು ಹಗುರ. ಕೈ ಮುಗಿವ ಆತುರ. ಅದು ನಮ್ಮೊಳಗೆ ಹರಡಿಕೊಂಡ ಭ್ರಮೆ. ಫೇಸ್‌ಬುಕ್ಕೆಂಬ ಆನ್‌ಲೈನ್ ಬೋರ್‌ವೆಲ್‌ನಲ್ಲಿ ಬಿದ್ದಾಗ ಸದ್ದಾಗಿ ಬೆಚ್ಚಿದ ಕಳ್ಳಗಿವಿಯೂ ಕಾಣಸಿಗಲ್ಲ. ಇದು ಏಕಕಾಲದಲ್ಲಿ ಲಕ್ಷ ಲಕ್ಷ ಕಂಪ್ಯೂಟರಿನ ದ್ವೀಪಗಳೆಲ್ಲಾಗುವ ಅವಘಡ. ಹೀಗಾಗಿ ಇರುವ ಬೆರಳೆಣೆಕೆಯ ಚಾನೆಲ್ಲುಗಳು ಕ್ಯಾಮೆರಾ ಹಿಡಿದು, ಪ್ರಸಾರ ಮಾಡುವ ಧೈರ್ಯ ತೋರುವುದಂತು? ಸುತ್ತ ಸಾವಿರಾರು ಜನ ಸೇರಿ ಕೈಕಟ್ಟಿ ನಿಲ್ಲುತ್ತಾರೆ, ಹದಿನೈದು ಜನ ಅತ್ತು ಕಣ್ಣೀರು ಕೆಡವುತ್ತಾರೆ. ಜೆಸಿಬಿಗಳ ಅಗಲ ಹಲ್ಲಿನ ಬಾಯಿ-ಮಣಿಕಂಠನ ರೊಬೊ ಕೈಗಳು ನಮ್ಮನ್ನು ಬಚಾವ್ ಮಾಡುತ್ತವೆ ಎಂಬ ಯಾವ ಕಾಮನ್ ದೃಶ್ಯಗಳೂ ಇಲ್ಲ. ನಾವು ಬಿದ್ದಿದ್ದೇವೆ, ನಾವೇ ಏಳುತ್ತೇವಷ್ಟೇ! ಕೈ ಹಿಡಿದು ಮೇಲೆತ್ತದಿರು ನನ್ನನು! ಈ ಬೋರ್‌ವೆಲ್‌ನಲ್ಲಿ ಬೀಳುವುದೊಂದು ಖುಷಿ! ಬಿದ್ದು ಹೊರಬರಲಾಗದಿರುವುದೂ ತುಸು ಖುಷಿ.

ಎಷ್ಟೋ ಸಲ ಪಾಪಕೃತ್ಯ ಎಸಗಿದಾಕ್ಷಣ ಪಶ್ಚಾತ್ತಾಪದ ಉದ್ಗಾರ ಹುಟ್ಟುತ್ತದಂತೆ. ಹಿರೋಶಿಮಾದ ಮೇಲೆ ಬಾಂಬೆಸೆದ ಮೇಲೆ ಪೌಲ್ ಟಿಬ್ಬೆಟ್ ದೇವರಿಗೆ ಕ್ಷಮೆ ಸ್ಯಾಂಕ್ಷನ್ ಮಾಡಲು ಮನವಿ ಮಾಡಿದನಲ್ಲಾ... ಆ ರೀತಿ ಡೈನಾಮೈಟ್ ಸೃಷ್ಟಿಸಿ ತಲೆನೋವಿನ ಮಾತ್ರೆ ನುಂಗಿದ ಅಲ್‌ಫ್ರೆಂಡ್ ನೋಬೆಲ್ ಕೂಡ ಈ ಸಾಲಿಗೆ ಮತ್ತೊಬ್ಬ. ಇದನ್ನೇ ಸ್ವಲ್ಪ ರಹಸ್ಯವಾಗಿ ಫೇಸ್‌ಬುಕ್ ಕಂಡುಹಿಡಿದ ಮಾರ್ಕ್ ಝುಕರ್‌ಬರ್ಗ್ ಮಿತ್ರನ ಬಳಿ ಹೇಳಿಕೊಳ್ಳುತ್ತಾನಂತೆ; 'ಬಿಲಿಯನ್‌ಗಟ್ಟಲೆ ಜನರನ್ನು ಕೂಪಕ್ಕೆ ತಳ್ಳಿದೆ. ಹಣಕ್ಕಾಗಿ ಅವರೆಲ್ಲರ ಸಮಯವನ್ನು ಹರಣ ಮಾಡಿದೆ' ಅಂತ. ಆದರೆ ಛೇಂಬರ್‌ನಿಂದ ಹೊರಗೆ ಬಂದು ಅದೇ ಬೇಜಾರಿನ ನೆತ್ತಿ ಸವರಿ ಎಲ್ಲ ಎಂಪ್ಲಾಯಗಳ ಮುಂದೆ ಇಲ್ಲ ನಾನು ದೈವಿಕ ಉಡುಗೊರೆಯನ್ನೇ ಎಲ್ಲರ ಮುಂದಿಟ್ಟಿದ್ದೀನಿ ಅಂತಲೂ ಕಾಲರ್ ಎಳೆದುಕೊಳ್ಳುತ್ತಾನಂತೆ. ಸೃಷ್ಟಿ-ಪಶ್ಚಾತ್ತಾಪಗಳ ನಡುಗೋಡೆ ಮೇಲೆ ಮಾರ್ಕ್ ಹಿಡಿದಿರುವುದು ಬಹುಶಃ ದ್ವಂದ್ವದ ದೊಂದಿಯೇ!

ಈಗೀಗ ಆನ್‌ಲೈನ್ ಗೋಡೆ ಮೇಲೂ ಅತ್ಯಾಚಾರದ ವಿರುದ್ಧು ಗುಡುಗು ಕಾಣಿಸಿಕೊಲ್ಳುತ್ತಿದೆ. ಮತ್ತೆ ಕೆಲ ಹುಡುಗಿಯರು ಪ್ರೊಫ್ರೈಲಿನಲ್ಲಿ ತಮ್ಮ ಚೆಂದದ ಚಿತ್ರದ ಸ್ಥಾನದಲ್ಲಿ ಕಪ್ಪು ಬಿಂದಿಗೆ(ಬ್ಲಾಕ್ ಡಾಟ್) ಅನ್ನು ಕೂರಿಸುತ್ತಾರೆ. ಅದರಿಂದ ಅತ್ಯಾಚಾರದ ವಿರುದ್ಧ ಫೇಸ್‌ಬುಕ್ ವಾರ್ ಕೆಲವು ವರುಷಗಳ ಹಿಂದೆ ಆಗಿದ್ದೇ ಬೇರೆ. ಫೇಸ್‌ಬುಕ್ ಹುಟ್ಟಿದಾಗಿನಿಂದ ಐದು ವರುಷ ಕೆಲಸ ಮಾಡಿದ್ದ ಕ್ಯಾಥರೀನ್ ಲಾಸ್ ಅಲ್ಲಿನ ಎಂಪ್ಲಾಯ್‌ಗಳ ಲೈಂಗಿಕ ಕಿರುಕುಳದ ಕಾರಣಕ್ಕಾಗಿಯೇ ಹೊರ ನಡೆದಳು. ಎಷ್ಟೋ ಸಲ ನೈಟ್ ಡ್ಯೂಟಿಯಲ್ಲಿದ್ದಾಗ, ನಿನ್ನಲ್ಲೇನು ನಮಗೆ ಅಂಥ ರುಚಿ ಕಾಣುತ್ತಿಲ್ಲ. ನೀನು ರಾಜೀನಾಮೆ ಕೊಟ್ಟರೆ ಸೆಕ್ಕಿಯಾಗಿರುವ ಫ್ರೆಶ್ ಹುಡುಗಿಯರಾದರೂ ಕೆಲ್ಸಕ್ಕೆ ಸೇರ್ತಾರೆ ಎಂದಾಗ ನಮ್ಮೆಲ್ಲರ ವಾಲ್‌ಗಳಲ್ಲಿ ಆಕೆಯ ನೋವಿನ ಬಗ್ಗೆ ಒಂದು ಸಾಲೂ ಕಾಣಿಸಲಿಲ್ಲ.

ಪ್ರತಿವರ್ಷ ಮೇ 14 ಫೇಸ್‌ಬುಕ್ ಕಂಪನಿಯಲ್ಲೇನೋ ಸುಗ್ಗಿ. ಅಂದು ಮಾರ್ತ್ ಝುಕರ್ ಬರ್ಗ್ ಹುಟ್ಟಿದ ದಿನ. ಮೇಲಾಧಿಕಾರಿಗಳು ಹಿಂದಿನ ದಿನವೇ ಮೊಮೋ ಹೊರಡಿಸುತ್ತಾರೆ. 'ಎಲ್ಲ ಪುರುಷ ಎಂಪ್ಲಾಯ್‌ಗಳಿಗೂ ಬ್ರೇಸ್‌ಲೈಟ್, ಎಲ್ಲ ಲೇಡಿ ಎಂಪ್ಲಾಯ್‌ಗಳಿಗೂ ಝುಕರ್ ಬರ್ಗ್ ಚಿತ್ರವುಳ್ಳ ಟಿ ಶರ್ಟ್ ರೆಡಿ ಇದೆ. ನಾಳೆ ಅದನ್ನೇ ಧರಿಸಿ ಬರುವುದು' ಅಂದರೆ, ಆ ಝುಕರ್‌ಬರ್ಗ್‌ಗೆ ಮಹಿಳೆಯರ ಎದೆ ಮೇಲೆ ಕಾಣಿಸಿಕೊಳ್ಳುವ ಆಸೆ. ಕ್ಯಾಥರೀನ್ ಲಾಸ್ ಇದನ್ನೇ ಪ್ರತಿಭಟಿಸಿ, ಕಂಪನಿಯಿಂದ ಹೊರಬರುತ್ತಾಳೆ. 'ದಿ ಬಾಯ್ಸ್ ಕಿಂಗ್‌' ಎಂಬ ಪುಸ್ತಕವನ್ನೂ ಬರೆದು ಝುಕರ್ ಬರ್ಗ್ ಬಣ್ಣ ಬಯಲು ಮಾಡುತ್ತಾಳೆ.

ಫೇಸ್‌ಬುಕ್ ಕಂಪನಿಯ ಮಾಮೂಲಿ ಐಟಿ ಕಂಪನಿಗಳಂತೆ ಟೀಂ ವರ್ಕ್ ಮೇಲೆ ನಿಂತಿರುವಂಥದ್ದು. ಯಾರದ್ದೋ ಕ್ಯಾಬೀನ್‌ಗಳಲ್ಲಿ ಐಡಿಯಾ ಹುಟ್ಟಿದರೂ, ಅದರ ಕ್ರೆಡಿಟ್ಟೆಲ್ಲ ಈ ಝುಕರ್‌ಬರ್ಗ್‌ಗೆ. ಸ್ವಲ್ಪ ಕ್ರಾಂತಿಕಾರಕವಾಗಿ ಆಲೋಚಿಸಿದರೂ, ಬಾಸ್ ಅನ್ನು ಮೀರಿ ಬೆಳೆಯುತ್ತಿದ್ದಾನೆನ್ನಿಸಿದರೆ ಅವರ ಹುದ್ದೆಯ ಬಲಿಗೆ ಝುಕರ್ ಬರ್ಗ್ ಸ್ಕೆಚ್ ಹಾಕುತ್ತಾನಂತೆ. ಅವನ ಸುತ್ತಲಿರುವ ಎಂಜಿನಿಯರ್ ಟೀಂನಲ್ಲಿ ಬಕೆಟ್‌ಗಳೇ ಜಾಸ್ತಿ ಅನ್ನೋದು ಫೇಸ್‌ಬುಕ್‌ನಿಂದ ಹೊರಬಂದವರ ಸಾಮನ್ಯ ದೂರು. ಅಲ್ಲಿ ನಡೆಯುವುದು ನಿರಂತರ ಟ್ಯಾಲೆಂಟ್ ವಾರ್. ಐಡಿಯಾಗಳನ್ನು ಕದಿಯುವ ನಿಪುಣರೂ, ಲವರ್ಸ್‌ಗಳ ಅಕೌಂಟ್‌ಗಳನ್ನು ಕದ್ದು ನೋಡುವ ಕಳ್ಳರೂ ಅಲ್ಲಿದ್ದಾರೆನ್ನುತ್ತಾರೆ ಇವರೆಲ್ಲ.

ಹಾಗಂತ ಆ ಫೇಸ್‌ಬುಕ್ ಕಂಪನಿ ತೊರೆದವರು ಡಬ್ಬಾಗಳೇನಲ್ಲ. ಸ್ಟೀವನ್‌ಚೆನ್ 'ಯೂಟ್ಯೂಬ್‌' ಸೇರಿ ವೆಬ್ ಸೈಟಿನ ಲೇಔಟನ್ನೇ ಬದಲಿಸಿಬಿಟ್ಟ. ಆಡಂ ಡಿ ಎಂಗಲೋ, ಚಾರ್ಲಿ ಚೀವರ್ ಎಂಬಿಬ್ಬರು ಟ್ಯಾಲೆಂಟ್‌ಗಳು 'ಖೋರಾ.ಕಾಮ್ ತೆರೆದರು.' ಇಂದು ಈಗೀಗ ಜನಪ್ರಿಯವಾಗುತ್ತಿರುವ ನಾಲೆಡ್ಜ್ ಬೇಸ್ಟ್ ಸೈಟ್. ಫೇಸ್‌ಬುಕ್‌ನಂತೆ ಹಾಳುಹರಟೆ ಇಲ್ಲಿಲ್ಲ. ಯಾರೂ ಏನೋ ಪ್ರಶ್ನೆ ಕೇಳುತ್ತಾರೆ, ಅದಕ್ಕೆ ಸಾವಿರಾರು ದೃಷ್ಟಿಕೋನಗಳ ಉತ್ತರ ಇಲ್ಲಿ ದಾಖಲಾಗುತ್ತದೆ. ನೂರು ವೆಬ್‌ಸೈಟ್‌ಗಳು ಕೊಡುವ ಒಟ್ಟು ಮಾಹಿತಿ ಇಲ್ಲಿ ಒಂದೇ ಪುಟದಲ್ಲಿ ಸಿಗುತ್ತವೆ. ಫೇಸ್‌ಬುಕ್ ರೀತಿ ಇಲ್ಲೂ ನೀವು ಕಾಮೆಂಟುಗಳನ್ನು ಹಾಕಬಹುದು. ಆದರೆ, ಸುಖಸುಮ್ಮನೆ ದೇವಸ್ಥಾನದ ಗಂಟೆ ಬಾರಿಸಿದಂತೆ ಲೈಕ್ ಒತ್ತುವ ಆಪ್ಷನ್ ಮಾತ್ರ ಇಲ್ಲಿಲ್ಲ. ಹೀಗೆ ಹೊರ ಬಂದವರೆಲ್ಲ ಒಂದೊಂದು ವಿಭಿನ್ನ ಸೋಷಿಯಲ್ ನೆಟ್‌ವರ್ಕ್ ತೆರೆದು ಝುಕರ್ ಬರ್ಗ್ ವಿರುದ್ಧ ತೊಡೆತಟ್ಟಿದ್ದಾರೆ. ಅಲ್ಲದೆ ಹಲವು ಎಂಜಿನಿಯರುಗಳು ಟ್ವಿಟರ್ ಜನಪ್ರಿಯತೆಗೂ ಶ್ರಮಿಸಿದ್ದಾರೆ.

ಫೇಸ್‌ಬುಕ್‌ನಿಂದ ಹೊರಬಂದ ಇವರೆಲ್ಲರ ಟೀಕೆ ಒಂದೇ. 'ಮನುಕುಲದ ಸಮಯ ಹಾಳು ಮಾಡಲೇಂದೆ ಫೇಸ್‌ಬುಕ್ ಹುಟ್ಟಿದೆ. ಆ ಪಾಪ ನಮಗೆ ಅಂಟುವುದು ಬೇಡ' ಎಂಬುದು. ಇವತ್ತು ಫೇಸ್‌ಬುಕ್ ಅನ್ನೇ ಬೋಧಿವೃಕ್ಷ ಮಾಡಿಕೊಂಡಿರುವ ನಮಗೆ ಈ ಜ್ಞಾನೋದಯ ಯಾವತ್ತಾಗುತ್ತದೆ? ನಾವು ಬಿದ್ದಿದ್ದು ಆನ್‌ಲೈನ್‌ನ ಕೊಳವೆಬಾವಿಗೆ ಎಂದು ಯಾವತ್ತು ಅನಿಸುತ್ತದೆ? ಕೂಡಲೇ, ನಮ್ಮನ್ನು ಎತ್ತಲೊಂದು ರೋಬೋ ಕೈ ಬೇಕಾಗಿದೆ!

-ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!