ಬಣ್ಣದ ಬುಗ್ಗೆ 
ವಿಶೇಷ

2015ರ ಬದುಕಿಗೆ ಬಣ್ಣ ತುಂಬಲು 15 ಸಂಕಲ್ಪ

ದಿನಕ್ಕೆ ಬೆಳಗಿದ್ದಂತೆ, ವರ್ಷಕ್ಕೆ ಮೊದಲ ದಿನ. ಏನಾಗುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲದಿರಬಹುದು. ಆದರೆ ಏನೇನು ಆಗಬೇಕೆಂದು...

ದಿನಕ್ಕೆ ಬೆಳಗಿದ್ದಂತೆ, ವರ್ಷಕ್ಕೆ ಮೊದಲ ದಿನ. ಏನಾಗುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲದಿರಬಹುದು. ಆದರೆ ಏನೇನು ಆಗಬೇಕೆಂದು ಬಯಸುವುದು ಹಾಗೂ ನಿರ್ಧರಿಸುವುದು ನಮ್ಮ ಕೈಯಲ್ಲೇ ಇದೆ. ಏನಾಗುತ್ತದೋ ಇಲ್ಲವೋ ಎಂದು ನಕಾರಾತ್ಮಕ ಯೋಚಿಸುವುದನ್ನು  ಬಿಟ್ಟು ಆಗುವುದಿದ್ದರೆ ಒಳ್ಳೆಯದೇ ಆಗಲೆಂದು ಬಯಸೋಣ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಒಂದಷ್ಟು ಸಾಮೂಹಿಕ ಒಳಿತಿಗಾಗಿ ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳೋಣವೆ?


  • ನಮ್ಮ ಪ್ರಧಾನಿ ಸುಂದರ ಭಾರತ ನಿರ್ಮಾಣದ ಕನಸು ಹೊತ್ತು 'ಸ್ವಚ್ಛ  ಭಾರತ್ ಆಂದೋಲನ' ರೂಪಿಸಿದ್ದಾರೆ. ನಮ್ಮ ಕಚೇರಿ, ವಾಸಸ್ಥಳದ ಸುತ್ತಮುತ್ತಲನ್ನು ಸುಂದರವಾಗಿಸಲು ವಾರದಲ್ಲಿ ಎರಡು ಗಂಟೆ ಕಡ್ಡಾಯ ಮೀಸಲಿಡೋಣ.
  • ರೈಲು, ಬಸ್, ಸಿನಿಮಾ ಮಂದಿರ, ನಿಲ್ದಾಣ, ಉದ್ಯಾನ, ಸಾರ್ವಜನಿಕ ಶೌಚಾಲಯ ಇತ್ಯಾದಿಯನ್ನು  ಜವಾಬ್ದಾರಿಯುತವಾಗಿ ಬಳಸೋಣ.
  • ಕೋಪ ಯಾವುದಕ್ಕೂ ಪರಿಹಾರವಲ್ಲ. ನಮ್ಮ ವ್ಯಕ್ತಿತ್ವಕ್ಕೂ ಅದು ಧಕ್ಕೆ ತರುತ್ತದೆ. ನಮ್ಮ ಭಾವನೆಗಳ ಅತಿರೇಕವನ್ನು ಸಾರ್ವಜನಿಕವಾಗಿ ವ್ಯಕ್ತ ಪಡಿಸದೇ ಸಂಯಮ ಕಾಯ್ದುಕೊಳ್ಳೋಣ.
  • ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನ ನೀಡಿದ ಹಕ್ಕು. ಆದರೆ ಹಕ್ಕು ಚಲಾವಣೆಯ ಅಧಿಕಾರ ಕರ್ತವ್ಯದೊಂದಿಗೇ ಬರುತ್ತದೆ. ಪ್ರತಿಭಟನೆ, ವಿರೋಧದ ಸನ್ನಿವೇಶದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಧಕ್ಕೆ ಬರದಂತೆ ವರ್ತಿಸೋಣ.
  • ಕಾನೂನು ಇರುವುದೇ ಮುರಿಯಲೆಂಬ ಮನೋಭಾವ ಬೇಡ. ನಮ್ಮ ನೆಮ್ಮದಿಗಾಗಿಯೇ ಅವು ರೂಪುಗೊಂಡದ್ದು. ಸಂಚಾರ ಸಿಗ್ನಲ್ ಪಾಲನೆಯಿಂದಾರಂಭಿಸಿ ಈ ನೆಲದ ಕಾನೂನು ಪಾಲಿಸೋಣ.
  • ನೀರಿನ ಬಳಕೆಗೆ ಸ್ವಾತಂತ್ರ್ಯ ಇದೆ. ಆದರೆ ಅದರ ಪೋಲು ಅಕ್ಷಮ್ಯ. ಒಂದು ಹನಿ ನೀರೂ ವ್ಯರ್ಥವಾಗದಂತೆ ಬಳಸೋಣ. ಮಳೆ ನೀರನ್ನು ಹಿಡಿದಿಡೋಣ.
  • ಇಂಧನ  ಆಧುನಿಕ ಜಗತ್ತಿನ ಮತ್ತೊಂದು ಸಮಸ್ಯೆ. ವಾಹನಗಳ  ಸಂಖ್ಯೆ ಹೆಚ್ಚಿದರೆ ಇಂಧನ ವ್ಯಯದ ಜೊತೆಗೆ ಪರಿಸರ ಮಾಲಿನ್ಯ, ಅಗತ್ಯ ಸಂದರ್ಭ ಬಿಟ್ಟು ಉಳಿದಂತೆ ಸಾರ್ವಜನಿಕರಿಗೆ ಸಾರಿಗೆ ಬಳಸೋಣ.
  • ವೈಯಕ್ತಿ ವಿದ್ಯುತ್ ಬಳಕೆಯಲ್ಲಿನ ಮಿತವ್ಯಯ ಸಹ ಸಮುದಾಯಕ್ಕೆ ಬಹುದೊಡ್ಡ ಕೊಡುಗೆ. ಸಾಧ್ಯವಾದಷ್ಟು ಎಲೆಕ್ಟ್ರಾನಿಕ್ಸ್, ವಿದ್ಯುತ್ ಉಪಕರಣಗಳ ಬಳಕೆ ನಿಯಂತ್ರಿಸೋಣ. ಮನೆಯಲ್ಲಿ ವಿದ್ಯುತ್ ದೀಪಗಳು, ಟೀವಿ, ಫ್ರಿ ಡ್ಜ್, ಐರನ್ ಬಾಕ್ಸ್ , ಗೀಸರ್, ಮೈಕ್ರೋ ಓವನ್ಗಳಂಥವುಗಳ ಬಳಕೆ ಮಿತಿ ಮೀರದಿರಲಿ.
  • ಸಣ್ಣ ಉಳಿತಾಯವೂ ದೇಶಕ್ಕೆ ಬಹುದೊಡ್ಡ ಕೊಡುಗೆ. ದುಡ್ಡಿದದ್ದೆಲ್ಲ ಖರ್ಚು ಮಾಡುವ ಹಲವು ದಾರಿಗಳು ಇಂದಿನ ಕೊಳ್ಳುಬಾಕ ಸಂಸ್ಕೃತಿಯಡಿ ಇವೆ. ದುಡ್ಡಿದದ್ದರಲ್ಲೇ ಪುಟ್ಟ ಮೊತ್ತ ಉಳಿಸೋಣ.
  • ವೈದ್ಯ ಆವಿಷ್ಕಾರಗಳು ಜೀವಿತಾವಧಿಯನ್ನು ವಿಸ್ತರಿಸುತ್ತಿದೆ. ಆದರೆ ರಕ್ತ, ಅಂಗಾಂಗಗಳ ಸೃಷ್ಟಿ ಸದ್ಯಕ್ಕೆ ಸಾಧ್ಯವಾಗಿಲ್ಲ. ನಿರಂತರ ರಕ್ತದಾನ ಹವ್ಯಾಸ ಮಾಡಿಕೊಳ್ಳೋಣ. ಇಂದೇ ನಮ್ಮ ಅಂಗಾಂಗಗಳ ದಾನ ಘೋಷಿಸಿಕೊಳ್ಳೋಣ.
  • ನೆರೆ ಹೊರೆಯ ಸೌಹಾರ್ದ ಸಾಮಾಜಿಕ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ನಮ್ಮಿಂದ ಇತರರಿಗೆ ತೊಂದರೆಯಾಗದಂತೆ ಎಚ್ಚರ  ವಹಿಸುವ ಜತೆ ಸಣ್ಣ ಪುಟ್ಟ ನೆರವಿನ ಹಸ್ತ ಚಾಚೋಣ
  • ನಮ್ಮ ಕಾರು ನಿಲ್ಲಿಸಲು ನೆರಳು ಬೇಕು. ಆದರೆ ಮರ ನೆಡುವುದು ನಮ್ಮ ಕೆಲಸವಲ್ಲ ಎಂಬ ಧೋರಣೆ ಬೇಡ. ಒಂದಾದರೂ ಗಿಡ ನೆಟ್ಟು ಪೋಷಿಸೋಣ
  • ಮೊಬೈಲ್ ಟೆಲಿಫೋನ್ ಬಳಕೆಯ ಔಚಿತ್ಯ  ನಮಗೆ ತಿಳಿದಿರಲಿ. ಅನಗತ್ಯ, ಕರ್ಕಶ ರಿಂಗ್ ಟೋನ್ ಬೇಡ. ಸಾಧ್ಯವಾದಷ್ಟು ಸೈಲೆಂಟ್  ಅಥವಾ ವೈಬ್ರೇಷನ್ ಮೋಡ್ನಲ್ಲಿಡೋಣ.
  • ಫೇಸ್ಬುಕ್, ಟ್ವೀಟರ್ನಂಥ ಸಾಮಾಜಿಕ ಜಾಲತಾಣಗಳು ನಮ್ಮ ತೆವಲುಗಳ ಪ್ರದರ್ಶನದ ವೇದಿಕೆಯಲ್ಲ. ಸದಭಿರುಚಿಯ ಪೋಸ್ಟಿಂಗ್ಗಳು ಮಾತ್ರ ನಮ್ಮ ಅಕೌಂಟ್ನಲ್ಲಿ ಜಾಗ ಗಿಟ್ಟಿಸಿಕೊಳ್ಳಲಿ.
  • ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರದಂತೆ ಎಚ್ಚರ ವಹಿಸೋಣ. ಹೆಣ್ಣು ಮಕ್ಕಳನ್ನು ಗೌರವಿಸುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ. ಮಾತ್ರವಲ್ಲ ಹೊಸ ವರ್ಷದಲ್ಲಿ ಸಾಧ್ಯವಾದಷ್ಟು ಯಾರನ್ನೂ ನೋಯಿಸದಂತೆ ನಮ್ಮ ನಡತೆ ರೂಪಿಸಿಕೊಳ್ಳೋಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT